ಮತದಾನದ ಮುನ್ನಾದಿನ ₹1.3 ಕೋಟಿ ಹಣ ಜಪ್ತಿ

| Published : Apr 26 2024, 12:48 AM IST

ಮತದಾನದ ಮುನ್ನಾದಿನ ₹1.3 ಕೋಟಿ ಹಣ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯ ಅಕ್ರಮದ ಮೇಲೆ ನಿಗಾವಹಿಸಿರುವ ವಿವಿಧ ತನಿಖಾ ತಂಡಗಳು ಕಳೆದ 24 ಗಂಟೆಯಲ್ಲಿ 1.31 ಕೋಟಿ ರು. ನಗದು ಮತ್ತು 55 ಲಕ್ಷ ರು. ಮೌಲ್ಯದ 1.13 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು: ಲೋಕಸಭಾ ಚುನಾವಣೆಯ ಅಕ್ರಮದ ಮೇಲೆ ನಿಗಾವಹಿಸಿರುವ ವಿವಿಧ ತನಿಖಾ ತಂಡಗಳು ಕಳೆದ 24 ಗಂಟೆಯಲ್ಲಿ 1.31 ಕೋಟಿ ರು. ನಗದು ಮತ್ತು 55 ಲಕ್ಷ ರು. ಮೌಲ್ಯದ 1.13 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 86.66 ಕೋಟಿ ರು. ನಗದು ಸೇರಿದಂತೆ 433.39 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 178 ಕೋಟಿ ರು. ಮೌಲ್ಯದ 147 ಲಕ್ಷ ಲೀಟರ್‌ ಮದ್ಯ, 11.35 ಕೋಟಿ ರು. ಮೌಲ್ಯದ 546 ಕೆಜಿ ಮಾದಕ ವಸ್ತುಗಳು, 74.35 ಕೋಟಿ ರು. ಮೌಲ್ಯದ 132 ಕೆಜಿ ಚಿನ್ನ, 1.18 ಕೋಟಿ ರು. ಮೌಲ್ಯದ 302 ಕೆಜಿ ಬೆಳ್ಳಿ ಮತ್ತು 1.22 ಕೋಟಿರು. ಮೌಲ್ಯದ 47 ಕ್ಯಾರೆಟ್‌ ವಜ್ರ ಜಪ್ತಿ ಮಾಡಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 10 ಲಕ್ಷ ರು. ನಗದು, ಬಳ್ಳಾರಿ ಕ್ಷೇತ್ರದಲ್ಲಿ 23 ಲಕ್ಷ ರು. ನಗದು, ಕಲಬುರಗಿ ಕ್ಷೇತ್ರದಲ್ಲಿ 38 ಲಕ್ಷ ರು. ನಗದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 34.97 ಲಕ್ಷ ರು. ನಗದು ಮತ್ತು 55 ಲಕ್ಷ ರು. ಮೌಲ್ಯದ 1.113 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ನಗದು, ಮದ್ಯ, ಮಾದಕ ವಸ್ತುಗಳು ಸೇರಿದಂತೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 2,149 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದೆ.