ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಗುರುವಿನಂತೆ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿದ್ದರು:ಶಾಸಕ ಅನಿಲ್ ಚಿಕ್ಕಮಾದು

| Published : May 10 2024, 01:32 AM IST

ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಗುರುವಿನಂತೆ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿದ್ದರು:ಶಾಸಕ ಅನಿಲ್ ಚಿಕ್ಕಮಾದು
Share this Article
  • FB
  • TW
  • Linkdin
  • Email

ಸಾರಾಂಶ

ನಾನು ವಿ. ಶ್ರೀನಿವಾಸಪ್ರಸಾದ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಾಗ ನಮ್ಮ ತಂದೆ ಚಿಕ್ಕಮಾದು ಅವರ ಬಗ್ಗೆ ಉತ್ತಮವಾದ ಮಾತನ್ನಾಡಿದ್ದರು. ಅವರಂತೆ ಮಾದರಿ ವ್ಯಕ್ತಿ ನೀನಾಗು ಎಂದು ಆಶೀರ್ವದಿಸಿದ್ದರು

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ತಮಗಿಂತ ಕಿರಿಯ ಅನೇಕ ರಾಜಕಾರಣಿಗಳು ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಗುರುವಿನಂತೆ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿದ್ದರು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಇತ್ತೀಚೆಗೆ ನಿಧನರಾದ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರಿಗೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ನಾನು ವಿ. ಶ್ರೀನಿವಾಸಪ್ರಸಾದ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಾಗ ನಮ್ಮ ತಂದೆ ಚಿಕ್ಕಮಾದು ಅವರ ಬಗ್ಗೆ ಉತ್ತಮವಾದ ಮಾತನ್ನಾಡಿದ್ದರು. ಅವರಂತೆ ಮಾದರಿ ವ್ಯಕ್ತಿ ನೀನಾಗು ಎಂದು ಆಶೀರ್ವದಿಸಿದ್ದರು ಎಂದರು.

ಕಾಂಗ್ರೆಸ್ ನ್ನು ತಮ್ಮ ಕೊನೆ ದಿನಗಳಲ್ಲೂ ಬೆಂಬಲಿಸುವುದಾಗಿ ತಿಳಿಸಿ, ಪಕ್ಷದ ಅಭ್ಯರ್ಥಿಗೆ ಬೆಂಬಲವನ್ನು ಸೂಚಿಸಿದ್ದರು ಎಂದರು.

ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದ ಸಂಸದರಿಗೆ ಇದೇ ತಿಂಗಳು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನುಡಿನಮನ ಕಾರ್ಯಕ್ರಮ ಮಾಡಲಾಗುವುದು ಎಂದು ಅವರು ತಿಳಿಸಿದರು.

ಜಿಪಂ ಮಾಜಿ ಸದಸ್ಯೆ ನಂದಿನಿ ಚಂದ್ರಶೇಖರ್ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಶ್ರೀನಿವಾಸಪ್ರಸಾದ್ ಮತ್ತು ಆರ್. ಧ್ರುವನಾರಾಯಣ್ ಅವರು ಎರಡು ಕಣ್ಣುಗಳಿದ್ದಂತೆ, ಅವರು ಈ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ರೀತಿಯಲ್ಲಿ ಶ್ರಮಿಸಿದ್ದರು ಎಂದರು.

ಮೈಮುಲ್ ನಿರ್ದೇಶಕ ಈರೇಗೌಡ, ಪುರಸಭಾ ಸದಸ್ಯ ನರಸಿಂಹಮೂರ್ತಿ, ಬ್ಲಾಕ್ ಅಧ್ಯಕ್ಷ ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಅಶೋಕ್, ಪ್ರಕಾಶ್, ಶಫಿ, ಶಿವರಾಜ್, ಚಾಮರಾಜು, ಕಾರ್ತಿಕ್, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಪ್ರೇಂಸಾಗರ್, ರಾಜು ವಿಶ್ವಕರ್ಮ, ಲಾರಿ ಪ್ರಕಾಶ್, ಶಿವಯ್ಯ, ವೇಣು, ಜಕ್ಕಳ್ಳಿ, ಕಾಳಕಲ್ಕರ್, ಮಹದೇವಪ್ಪ ಇದ್ದರು.