ನೆಸ್ಲೆ ಸೆರೆಲ್ಯಾಕ್‌ನಲ್ಲಿ ಅಧಿಕ ಸಕ್ಕರೆ: ತನಿಖೆಗೆ ಗ್ರಾಹಕ ಸಚಿವಾಲಯದ ಸೂಚನೆ

| Published : Apr 20 2024, 01:31 AM IST / Updated: Apr 20 2024, 07:08 AM IST

ನೆಸ್ಲೆ ಸೆರೆಲ್ಯಾಕ್‌ನಲ್ಲಿ ಅಧಿಕ ಸಕ್ಕರೆ: ತನಿಖೆಗೆ ಗ್ರಾಹಕ ಸಚಿವಾಲಯದ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸೆರಿಲ್ಯಾಕ್‌ನಲ್ಲಿ 2.7 ಗ್ರಾಂ ಸಕ್ಕರೆ ಅಂಶವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕು ಆಯೋಗದಿಂದಲೂ ವರದಿ ಕೋರಿಕೆಯಾಗಿದೆ.

ನವದೆಹಲಿ: ಬಹುರಾಷ್ಟ್ರೀಯ ಆಹಾರ ತಯಾರಕ ಕಂಪನಿ ನೆಸ್ಲೆ ತಯಾರಿಸುವ ಮಕ್ಕಳ ಆಹಾರ ಉತ್ಪನ್ನ ಸೆರಿಲ್ಯಾಕ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶವಿರುವ ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸುವಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯವು ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ಗೆ ಸೂಚಿಸಿದೆ.

ಈ ಕುರಿತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಕರೆ ಮಾಹಿತಿ ನೀಡಿದ್ದು, ‘ಪತ್ರದಲ್ಲಿ ವಿಶ್ವದಾದ್ಯಂತ ಹಲವು ಲೇಖನಗಳಲ್ಲಿ ನೆಸ್ಲೆ ಮಕ್ಕಳ ಆಹಾರ ಉತ್ಪನ್ನದಲ್ಲಿ ಅಧಿಕ ಸಕ್ಕರೆ ಅಂಶವಿರುವ ಕುರಿತು ಮಾಹಿತಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐಗೆ ಈ ಕುರಿತು ತನಿಖೆ ನಡೆಸಿ ಸೂಕ್ತ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಈ ಕುರಿತು ವಿವರಣೆ ನೀಡುವಂತೆ ಎಫ್‌ಎಸ್‌ಎಸ್‌ಎಐಗೆ ಪತ್ರ ಬರೆದಿದೆ.

ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳ ಆಹಾರ ಉತ್ಪನ್ನ ಸೆರಿಲ್ಯಾಕ್‌ನಲ್ಲಿ ಹೆಚ್ಚುವರಿ ಸಕ್ಕರೆ ಅಂಶವನ್ನು ಬೆರೆಸಿ ನೆಸ್ಲೆ ಮಾರಾಟ ಮಾಡುತ್ತಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳು ಇತ್ತೀಚೆಗೆ ವರದಿ ಮಾಡಿದ್ದವು.