3 ದಿನ ನಡೆದು ಮತಗಟ್ಟೆ ತಲುಪಿದ ಅಧಿಕಾರಿಗಳು

| Published : Apr 20 2024, 01:31 AM IST / Updated: Apr 20 2024, 07:10 AM IST

ಸಾರಾಂಶ

164 ಮತದಾರರಿರುವ ಅರುಣಾಚಲದ ಗುಡ್ಡಗಾಡು ಪ್ರದೇಶದಲ್ಲಿ ಸಾಹಸ ಮಾಡಿ 3 ದಿನ ನಡೆದು ಮತಗಟ್ಟೆ ತಲುಪಿದ ಅಧಿಕಾರಿಗಳು ಮತ ಚಲಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುವಾಹಟಿ: ಲೋಕಸಭಾ ಚುನಾವಣೆ ದೇಶದ ಅತಿದೊಡ್ಡ ಹಬ್ಬ. ಇಲ್ಲಿ ಪ್ರತಿಯೊಬ್ಬರ ಮತವೂ ಅಮೂಲ್ಯ. ಅದಕ್ಕೆಂದೇ ಚುನಾವಣಾ ಆಯೋಗ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತದೆ. ಇಂಥದ್ದೊಂದು ಒಂದು ಪ್ರಕರಣ ಅರುಣಾಚಲ ಪ್ರದೇಶದ್ದು.

ಸರಿಯಾದ ರಸ್ತೆ ಸಂಪರ್ಕ. ಮೊಬೈಲ್ ನೆಟ್ವರ್ಕ್ ಸೌಲಭ್ಯಗಳೇ ಇರದ ಅರುಣಾಪ್ರದೇಶದ ಗೇಟ್ ನಲ್ಲಿ ಮತದಾನ ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಬರೋಬ್ಬರಿ 3 ದಿನಗಳು ನಡೆದು ಸಾಗಿದ್ದಾರೆ. 

ಪಾಯುಮ್ ಪ್ರದೇಶದಿಂದ ಸುಮಾರು 60 ಕಿಮೀ ದೂರವಿರುವ ಈ ಹಳ್ಳಿಯಲ್ಲಿರುವುದು ಕೇವಲ 164 ಮತದಾರರು. ಅವರನ್ನು ತಲುಪುವುದಕ್ಕೆ ರಸ್ತೆ ಸೌಲಭ್ಯವಿಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ಅಪಾಯಕಾರಿ ಹಾದಿಯಲ್ಲಿ ಹಗ್ಗಗಳ ಸಹಾಯದಿಂದ 23 ಅಧಿಕಾರಿಗಳ ತಂಡ ಮತಗಟ್ಟೆಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಿದೆ.ಇದೇ ರೀತಿ 23 ಅಧಿಕಾರಿಗಳ ಮತ್ತೊಂದು ತಂಡವು ಪಾಯುಮ್ ಪ್ರದೇಶದಿಂದ 52 ಕಿಮೀ ದೂರವಿರುವ, 257 ಮತದಾರರನ್ನು ಹೊಂದಿರುವ ಗಶೆಂಗ್ ಗ್ರಾಮಕ್ಕೂ ಕಾಲ್ನಡಿಗೆಯಲ್ಲಿ ಸಾಗಿ ಮತದಾನ ಪ್ರಕ್ರಿಯೆ ನಡೆಸಿದೆ.