ಡಾ. ರಾಜ್‌ ಜನ್ಮದಿನಕ್ಕೆ ಧನ್ಯಾ- ಕಿಶನ್ ಡ್ಯಾನ್ಸ್‌ ವೀಡಿಯೋ

| Published : Apr 25 2024, 01:08 AM IST / Updated: Apr 25 2024, 06:07 AM IST

Dhanya Ramkumar
ಡಾ. ರಾಜ್‌ ಜನ್ಮದಿನಕ್ಕೆ ಧನ್ಯಾ- ಕಿಶನ್ ಡ್ಯಾನ್ಸ್‌ ವೀಡಿಯೋ
Share this Article
  • FB
  • TW
  • Linkdin
  • Email

ಸಾರಾಂಶ

ಡಾ ರಾಜ್‌ಕುಮಾರ್‌ ಅವರ ಜನ್ಮದಿನಕ್ಕೆ ಧನ್ಯಾ ರಾಮ್‌ಕುಮಾರ್‌ ಹಾಗೂ ಕಿಶನ್ ಬಿಳಗಲಿ ಹೆಜ್ಜೆ ಹಾಕಿರುವ ವೀಡಿಯೋ ಹಾಡು ಬಿಡುಗಡೆಯಾಗಿದೆ. ಇದರಲ್ಲಿ ರಾಜ್ ಅವರ ನಿನದೇ ನೆನಪೂ ದಿನವೂ ಮನದಲ್ಲಿ ಹಾಡಿಗೆ ಧನ್ಯಾ ಡ್ಯಾನ್ಸ್ ಮಾಡಿದ್ದಾರೆ.

 ಸಿನಿವಾರ್ತೆ

ಡಾ. ರಾಜ್‌ಕುಮಾರ್ ಅವರ ಜನ್ಮದಿನವನ್ನು ಅವರ ಮೊಮ್ಮಗಳಾದ ಧನ್ಯಾ ರಾಮ್‌ಕುಮಾರ್‌ ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. 1976ರಲ್ಲಿ ತೆರೆ ಕಂಡ ರಾಜ್‌ಕುಮಾರ್‌, ಆರತಿ ನಟನೆಯ ‘ರಾಜ ನನ್ನ ರಾಜ’ ಸಿನಿಮಾದ ‘ನಿನದೇ ನೆನಪು ದಿನವೂ ಮನದಲ್ಲಿ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

ನಟ, ನೃತ್ಯಪಟು ಕಿಶನ್ ಬಿಳಗಲಿ ಜೊತೆಗೆ ಧನ್ಯಾ ಕಾಣಿಸಿಕೊಂಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗುತ್ತಿದೆ.