ಕೇಕ್‌ ಸೇವಿಸಿ ಬಾಲಕಿ ಸಾವಿಗೆ ಸಿಂಥೆಟಿಕ್‌ ಸ್ವೀಟ್ನರ್‌ ಕಾರಣ!

| Published : Apr 23 2024, 12:49 AM IST / Updated: Apr 23 2024, 05:41 AM IST

ಸಾರಾಂಶ

ಪಂಜಾಬ್‌ನಲ್ಲಿ ಕೆಲ ದಿನಗಳ ಹಿಂದೆ ಮಾನ್ವಿ ಎಂಬ 10 ವರ್ಷದ ಬಾಲಕಿ ಕೇಕ್‌ ತಿಂದು ಸಾವನ್ನಪ್ಪಿದ ಪ್ರಕರಣಕ್ಕೆ, ಕೇಕ್‌ ತಯಾರಿ ವೇಳೆ ಭಾರೀ ಪ್ರಮಾಣದ ಸಿಂಥೆಟಿಕ್‌ ಸ್ವೀಟ್ನರ್‌ (ಕೃತಕ ಸಿಹಿ) ಬಳಸಿದ್ದೇ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.

ಪಟಿಯಾಲಾ: ಪಂಜಾಬ್‌ನಲ್ಲಿ ಕೆಲ ದಿನಗಳ ಹಿಂದೆ ಮಾನ್ವಿ ಎಂಬ 10 ವರ್ಷದ ಬಾಲಕಿ ಕೇಕ್‌ ತಿಂದು ಸಾವನ್ನಪ್ಪಿದ ಪ್ರಕರಣಕ್ಕೆ, ಕೇಕ್‌ ತಯಾರಿ ವೇಳೆ ಭಾರೀ ಪ್ರಮಾಣದ ಸಿಂಥೆಟಿಕ್‌ ಸ್ವೀಟ್ನರ್‌ (ಕೃತಕ ಸಿಹಿ) ಬಳಸಿದ್ದೇ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.

ಘಟನೆ ಬಳಿಕ ಬಾಲಕಿ ಮನೆಗೆ ಆನ್‌ಲೈನ್‌ನಲ್ಲಿ ತರಿಸಲಾಗಿದ್ದ ಕೇಕ್‌ನ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಅದರ ವರದಿ ಇದೀಗ ಬಂದಿದ್ದು, ಕೇಕ್‌ ತಯಾರಿ ವೇಳೆ ಸಖರೈನ್‌ ಎಂಬ ಕೃತಕ ಸಿಹಿಯನ್ನು ಭಾರೀ ಪ್ರಮಾಣದಲ್ಲಿ ಬಳಸಿದ್ದು ಕಂಡುಬಂದಿದೆ. 

ಈ ಸಿಂಥೆಟಿಕ್‌ ಸ್ವೀಟ್ನರ್‌ ಅನ್ನು ಸಾಮಾನ್ಯವಾಗಿ ಎಲ್ಲ ಆಹಾರ ಪದಾರ್ಥಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ಬಳಸಿದರೆ ಅದನ್ನು ತಿಂದಾಕ್ಷಣ ರಕ್ತದಲ್ಲಿ ಗ್ಲುಕೋಸ್‌ ಅಂಶ ದಿಢೀರ್‌ ಹೆಚ್ಚಾಗಿ ಆರೋಗ್ಯ ಹದಗೆಡುತ್ತದೆ. ಇದೇ ಕಾರಣದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.