ಸಿಡ್ನಿ: ಸಾಯೋ ಗಳಿಗೆಯಲ್ಲೂ ಕಂದನ ರಕ್ಷಿಸಿದ ತಾಯಿ

| Published : Apr 15 2024, 01:20 AM IST / Updated: Apr 15 2024, 04:16 AM IST

ಸಿಡ್ನಿ: ಸಾಯೋ ಗಳಿಗೆಯಲ್ಲೂ ಕಂದನ ರಕ್ಷಿಸಿದ ತಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಡ್ನಿಯ ಮಾಲ್ ನಲ್ಲಿ ನಡೆದ ಭೀಕರ ದಾಳಿ ಬಳಿಕ ಒಂದೊಂದೇ ಕರಳು ಹಿಂಡುವ ಘಟನೆಗಳು ಬೆಳಕಿಗೆ ಬರುತ್ತಿದೆ. ಈ ಘೋರ ದುರಂತ ತಾಯಿ- ಮಗುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಸಿಡ್ನಿ: ಸಿಡ್ನಿಯ ಮಾಲ್ ನಲ್ಲಿ ನಡೆದ ಭೀಕರ ದಾಳಿ ಬಳಿಕ ಒಂದೊಂದೇ ಕರಳು ಹಿಂಡುವ ಘಟನೆಗಳು ಬೆಳಕಿಗೆ ಬರುತ್ತಿದೆ. ಈ ಘೋರ ದುರಂತ ತಾಯಿ- ಮಗುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಸಾಯೋ ಗಳಿಗೆಯಲ್ಲೂ ಕಂದನ ರಕ್ಷಿಸಿ ತಾಯಿ ಪ್ರಾಣ ಬಿಟ್ಟಿದ್ದಾಳೆ.

38 ವರ್ಷದ ಆಶ್ಲೀ ಗುಡ್ ಎನ್ನುವಾಕೆ ತನ್ನ 9 ತಿಂಗಳ ಮಗು ಹ್ಯಾರಿಯೇಟ್ ಜೊತೆಗೆ ಮಾಲ್‌ ಗೆ ಬಂದಿದ್ದಳು. ಈ ಸಂದರ್ಭದಲ್ಲಿಯೇ ಭೀಕರ ದಾಳಿ ನಡೆದಿದೆ. ತಾಯಿ ಮಗು ಇಬ್ಬರೂ ಚೂರಿ ಇರಿತಕ್ಕೆ ಒಳಗಾಗಿದ್ದರು. ಮಾರಣಾಂತಿಕವಾಗಿ ಗಾಯಗೊಂಡ ತಾಯಿ ತನ್ನ ಮಗಳ ರಕ್ಷಣೆಗಾಗಿ ಗಾಯದ ನೋವಿನ ನಡುವೆಯೂ ‘ಮಗುವಿಗೆ ಚಾಕು ಇರಿಯಲಾಗಿದೆ’ ಎಂದು ಕಿರುಚಿದ್ದಾಳೆ.

 ಆಕೆಯ ಕೂಗಾಟಕ್ಕೆ ಜನರು ಅಲ್ಲಿಗೆ ಧಾವಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಆಕೆ ಅಲ್ಲೇ ಇದ್ದ ಅಪರಿಚಿತನಿಗೆ ಕಂದನ ಜೀವನ ಉಳಿಸುವಂತೆ ಮನವಿ ಮಾಡಿಕೊಂಡು ಮಗವನ್ನು ಹಸ್ತಾಂತರ ಮಾಡಿ, ಧನ್ಯವಾದ ಸಲ್ಲಿಸಿದ್ದಾಳೆ. ಇನ್ನು ಘಟನೆಯಲ್ಲಿ ತಾಯಿ ಸಾವನ್ನಪ್ಪಿದ್ದು, ಮಗು ಬದುಕುಳಿದಿದೆ. ಸಾಯುವ ಗಳಿಗೆಯಲ್ಲಿಯೂ ,ಮಗುವನ್ನು ಬದುಕಿಸಿದ ಆ ತಾಯಿ ಹೃದಯವನ್ನ ಜನರು ಕೊಂಡಾಡುತ್ತಿದ್ದಾರೆ.