ಡಬಲ್ಸ್‌ ಫೈನಲ್‌ ಪ್ರವೇಶಿಸಿ ಸಾತ್ವಿಕ್‌-ಚಿರಾಗ್‌ ಇತಿಹಾಸ!

| Published : Oct 07 2023, 02:13 AM IST / Updated: Oct 07 2023, 11:42 AM IST

Satwik Chirag
ಡಬಲ್ಸ್‌ ಫೈನಲ್‌ ಪ್ರವೇಶಿಸಿ ಸಾತ್ವಿಕ್‌-ಚಿರಾಗ್‌ ಇತಿಹಾಸ!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದು, ಏಷ್ಯಾಡ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದು, ಏಷ್ಯಾಡ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1982ರಲ್ಲಿ ಲೆರೋಯ್‌ ಫ್ರಾನ್ಸಿಸ್‌-ಪ್ರದೀಪ್‌ ಗಾಂಧಿ ಕಂಚು ಗೆದ್ದಿದ್ದು ಈವರೆಗೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.3 ಭಾರತದ ಜೋಡಿಯು ಮಾಜಿ ವಿಶ್ವ ಚಾಂಪಿಯನ್‌, ಮಲೇಷ್ಯಾದ ಆ್ಯರೊನ್‌ ಚಿಯಾ-ಸೊಹ್‌ ವೂಯಿ ವಿರುದ್ಧ 21-17, 21-12ರಲ್ಲಿ ಸುಲಭ ಗೆಲುವು ಸಾಧಿಸಿತು. ಈ ವರೆಗಿನ 8 ಮುಖಾಮುಖಿಗಳಲ್ಲಿ 7ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದ್ದ ಟೋಕಿಯೋ ಒಲಿಂಪಿಕ್‌ ಪದಕ ವಿಜೇತ ಮಲೇಷ್ಯಾ ಜೋಡಿಗೆ ಈ ಸಲ ಸಾತ್ವಿಕ್‌-ಚಿರಾಗ್‌ ಜೋಡಿ ಆಘಾತ ನೀಡಿತು. ಶನಿವಾರ ಫೈನಲ್‌ನಲ್ಲಿ ದ.ಕೊರಿಯಾದ ಚೊಯಿ ಸೊಲ್ಯು-ಕಿಮ್‌ ವೊನ್ಹೊ ಜೋಡಿಯ ಸವಾಲು ಎದುರಾಗಲಿದೆ. ವಿಶ್ವ ನಂ.1 ಆಗಲಿದೆ ಭಾರತೀಯ ಜೋಡಿ! ಸೆಮಿಫೈನಲ್‌ ಗೆಲುವಿನೊಂದಿಗೆ ಸಾತ್ವಿಕ್‌-ಚಿರಾಗ್‌ ಜೋಡಿ ಬಿಡಬ್ಲ್ಯುಎಫ್‌ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಮೊತ್ತ ಮೊದಲ ಬಾರಿ ನಂ.1 ಸ್ಥಾನಕ್ಕೇರಲಿದೆ. ಪುರುಷರ ಡಬಲ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನ್ನುವ ದಾಖಲೆ ಬರೆಯಲಿದೆ. ಇತ್ತೀಚೆಗಷ್ಟೇ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದ ಭಾರತದ ಜೋಡಿ ಸದ್ಯ 3ನೇ ಸ್ಥಾನದಲ್ಲಿದೆ. ಕ್ರೀಡಾಕೂಟ ಮುಕ್ತಾಯಗೊಂಡ ಬಳಿಕ ರ್‍ಯಾಂಕಿಂಗ್‌ ಪಟ್ಟಿ ಪರಿಷ್ಕೃತಗೊಳ್ಳಲಿದ್ದು, ಭಾರತೀಯ ಜೋಡಿಯು ನಂ.1 ಸ್ಥಾನ ಅಲಂಕರಿಸಲಿದೆ.