ಕೊಡವ ಹಾಕಿಯಲ್ಲಿ ಸಮಬಲದ ಹೋರಾಟ: ಕಾಳಿಮಾಡ ವಿರುದ್ಧ ಗೆದ್ದ ಚಂದುರ

| Published : Apr 16 2024, 01:06 AM IST / Updated: Apr 16 2024, 04:24 AM IST

ಕೊಡವ ಹಾಕಿಯಲ್ಲಿ ಸಮಬಲದ ಹೋರಾಟ: ಕಾಳಿಮಾಡ ವಿರುದ್ಧ ಗೆದ್ದ ಚಂದುರ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಡ್ಯೋಳಂಡ ಕಪ್ ಕೊಡವ ಕೌಟುಂಬಿಕ ಹಾಕಿಯಲ್ಲಿ ವಿವಿಧ ತಂಡಗಳಿಗೆ ಮುನ್ನಡೆ. ಚೆಕ್ಕೇರ ಆದರ್ಶ, ಉತ್ತಯ್ಯ ಹಾಗೂ ಆಕಾಶ್ ಹೊಡೆದ ಆರು ಗೋಲುಗಳಿಂದ ಚೆಕ್ಕೆರ ತಂಡ ಪೊಂಜಂಡ ವಿರುದ್ಧ ಭರ್ಜರಿ ಜಯ

ದುಗ್ಗಳ ಸದಾನಂದ 

  ನಾಪೋಕ್ಲು : ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯಲ್ಲಿ ಸೋಮವಾರ ವಿವಿಧ ತಂಡಗಳ ನಡುವೆ ಬಿರುಸಿನ ಸ್ಪರ್ಧೆ ನಡೆಯಿತು. 

ತೀತಮಾಡ ಕುಂಡ್ಯೋಳಂಡ ವಿರುದ್ಧ 5-2 ಅಂತರದ ಜಯ ಗಳಿಸಿತು. ಮಂಡೇಟಿರ ವಿರುದ್ಧ ಮೇವಡ 2-0 ಅಂತರದ ಜಯ ಗಳಿಸಿದರೆ ಚೆಕ್ಕೆರ ತಂಡ ಪೊಂಜಂಡ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಚೆಕ್ಕೇರ ಆದರ್ಶ, ಉತ್ತಯ್ಯ ಹಾಗೂ ಆಕಾಶ್ ಹೊಡೆದ ಆರು ಗೋಲುಗಳಿಂದ ಚೆಕ್ಕೆರ ತಂಡ ಪೊಂಜಂಡ ವಿರುದ್ಧ ಭರ್ಜರಿ ಜಯ ಸಾಧಿಸಿತು.ಚಂದುರ ತಂಡಕ್ಕೆ ಕಾಳಿಮಾಡ ವಿರುದ್ಧ 6-5 ಅಂತರದ ಜಯ ಲಭಿಸಿತು. 

ಸಮಬಲದ ಹೋರಾಟ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಬಳಿಕ ನಡೆದ ಟೈ ಬ್ರೇಕರ್ ನಲ್ಲಿ ಚಂದುರ 6-5 ಅಂತರದಿಂದ ಕಾಳಿಮಾಡ ವಿರುದ್ಧ ಜಯ ಸಾಧಿಸಿತು. ಕಂಬೀರಂಡ ಮತ್ತು ಮಲ್ಲಜಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬಿರಂಡ ಪುದಿಯೋಕ್ಕಡ ಬೊಟ್ಟಂಗಡ ವಿರುದ್ಧ 3-0 ಅಂತರದಿಂದ ಕೊಂಗೆಟಿರ ಅಲ್ಲಾರಮಡ ವಿರುದ್ಧ 4-0 ಅಂತರದಿಂದ, ಅಮ್ಮಣಿಚಂಡ ಚೋಕಿರ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.

ಚೇಂದಂಡ ತಂಡವು ಕಂಗಂಡ ವಿರುದ್ಧ 3- 0 ಅಂತರದ ಜಯಗಳಿಸಿತು. ಕಾಂಡೇರ ಮತ್ತು ಕೋಡಿಮಣಿಯಂಡ ತಂಡಗಳ ನಡುವೆ ರೋಚಕ ಸ್ಪರ್ಧೆ ಏರ್ಪಟ್ಟಿತು. ಟೈ ಬ್ರೇಕರಿನಲ್ಲಿ ಕೋಡಿಮಣಿಯಂಡ ಕಾಂಡೇರ ವಿರುದ್ಧ 5-4 ಅಂತರದ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೇಲೆಟಿರ ಪಾಲಂದಿರ 3- 0 ಅಂತರದಿಂದ ಜಯಗಳಿಸಿದರೆ ಮುಕ್ಕಾಟಿರ (ಬೋಂದ) ತಂಡವು ಅಳಮೇಂಗಡ ವಿರುದ್ಧ 5-4 ಅಂತರದ ಜಯ ಸಾಧಿಸಿತು.