ಇಂದಿನಿಂದ ಅಂಡರ್‌-20 ಏಷ್ಯನ್‌ ಅಥ್ಲೆಟಿಕ್ಸ್‌: ಕರ್ನಾಟಕದ ನಾಲ್ವರ ಸ್ಪರ್ಧೆ

| Published : Apr 24 2024, 02:27 AM IST

ಸಾರಾಂಶ

ಕರ್ನಾಟಕದ ಶ್ರೇಯಾ ರಾಜೇಶ್‌, ಪವನಾ ನಾಗರಾಜ್‌, ಉನ್ನತಿ ಅಯ್ಯಪ್ಪ ಹಾಗೂ ನಿಯೋಲ್‌ ಕಾರ್ನೆಲಿಯೊ ವಿವಿಧ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ದುಬೈ: ಏಷ್ಯನ್‌ ಅಂಡರ್‌-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಬುಧವಾರದಿಂದ ಆರಂಭಗೊಳ್ಳಲಿದ್ದು, ಕರ್ನಾಟಕದ ನಾಲ್ವರು ಸೇರಿ ಭಾರತದ 60 ಮಂದಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಏ.27ರ ವರೆಗೆ ನಡೆಯಲಿರುವ ಕೂಟದಲ್ಲಿ ರಾಜ್ಯದ ಶ್ರೇಯಾ ರಾಜೇಶ್‌ 400 ಮೀ. ಹರ್ಡಲ್ಸ್‌, ಪವನಾ ನಾಗರಾಜ್‌ ಅವರು ಲಾಂಗ್‌ಜಂಪ್‌ ಮತ್ತು ಹೆಪ್ಟಥ್ಲಾನ್‌, ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್‌ ಹಾಗೂ ನಿಯೋಲ್‌ ಕಾರ್ನೆಲಿಯೊ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ.2023ರಲ್ಲಿ ಭಾರತ 6 ಚಿನ್ನ ಸೇರಿದಂತೆ 19 ಪದಕ ಗೆದ್ದಿತ್ತು. ಈ ಬಾರಿ ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಕೂಟವು ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಅಂಡರ್‌-20 ಅಥ್ಲೆಟಿಕ್ಸ್‌ ಕೂಟದ ಅರ್ಹತಾ ಟೂರ್ನಿಯಾಗಿದೆ.ಹಸರಂಗಗಾಗಿ ಚಹಲ್‌ರನ್ನು ಖರೀದಿಸಲಾಗಲಿಲ್ಲ: ಹೆಸ್ಸನ್‌

ನವದೆಹಲಿ: ಕಳೆದ ಆವೃತ್ತಿ ಐಪಿಎಲ್‌ನ ಹರಾಜಿನ ವೇಳೆ ಶ್ರೀಲಂಕಾದ ಹಸರಂಗರನ್ನು ಖರೀದಿಸಿದ್ದರಿಂದ ಯಜುವೇಂದ್ರ ಚಹಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರ ತಪ್ಪಿತು ಎಂದು ಆರ್‌ಸಿಬಿಯ ಮಾಜಿ ಕ್ರಿಕೆಟ್‌ ನಿರ್ದೇಶಕ ಮೈಕ್‌ ಹೆಸ್ಸನ್‌ ತಿಳಿಸಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ನನ್ನ ವೃತ್ತಿ ಜೀವನ ಮುಗಿಸುವವರೆಗೂ ಮತ್ತು ಬಹುಶಃ ಅದರಾಚೆಗೂ ಚಹಲ್‌ರನ್ನು ಕಳೆದುಕೊಂಡಿರುವುದಕ್ಕೆ ನಿರಾಶೆಗೊಳ್ಳುತ್ತೇನೆ. ಅವರು ಅತ್ಯುತ್ತಮ ಬೌಲರ್. ಆದರೆ ಹರಾಜಿನಲ್ಲಿ ಖರೀದಿಸಲಾಗಲಿಲ್ಲ. ಅವರ ಹೆಸರು ತಡವಾಗಿ ಬಂತು. ಆದರೆ ನಮಗೆ ಲೆಗ್‌ ಸ್ಪಿನ್ನರ್‌ ಅಗತ್ಯವಿದ್ದ ಕಾರಣ ಅದಾಗಲೇ ಹಸರಂಗರನ್ನು ಖರೀದಿಸಲಾಗಿತ್ತು’ ಎಂದಿದ್ದಾರೆ.