ಇಂದು ಗುರು ಸನ್ಮಾನ

| Published : Oct 08 2023, 12:00 AM IST

ಸಾರಾಂಶ

ಗಾಂಧಿನಗರ 4ನೇ ಕ್ರಾಸ್ ಕನ್ನಿಕಾ ಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ಅ.8 ರಂದು ಶಿಕ್ಷಣ ಕ್ಷೇತ್ರದ ಸಾಧಕರಿಗೆ ಗುರು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕನ್ನಿಕ ಶಿಲ್ಪ ನವೋದಯ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಡೆಯುವ ಸಮಾರಂಭವನ್ನು ಬೆಂಗಳೂರು ಒಕ್ಕಲಿಗರ ಧರ್ಮ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಸುರೇಶ್ ಉದ್ಘಾಟಿಸುವರು.
ಮಂಡ್ಯ: ಗಾಂಧಿನಗರ 4ನೇ ಕ್ರಾಸ್ ಕನ್ನಿಕಾ ಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ಅ.8 ರಂದು ಶಿಕ್ಷಣ ಕ್ಷೇತ್ರದ ಸಾಧಕರಿಗೆ ಗುರು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕನ್ನಿಕ ಶಿಲ್ಪ ನವೋದಯ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಡೆಯುವ ಸಮಾರಂಭವನ್ನು ಬೆಂಗಳೂರು ಒಕ್ಕಲಿಗರ ಧರ್ಮ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಸುರೇಶ್ ಉದ್ಘಾಟಿಸುವರು. ಡಿಡಿಪಿಐ ಕಚೇರಿ ವಿಷಯ ಪರಿವೀಕ್ಷಕ ಬಿ.ಎನ್ .ನಾಗರಾಜು ಅಧ್ಯಕ್ಷತೆ ವಹಿಸುವರು. ಕೇಂದ್ರದ ಮುಖ್ಯ ತರಬೇತುದಾರರಾದ ಡಾ.ಎಚ್ .ಆರ್ .ಕನ್ನಿಕಾ ಪ್ರಸ್ತಾವಿಕವಾಗಿ ಮಾತನಾಡುವರು. ಅತಿಥಿಗಳಾಗಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಇ.ಶಿವಣ್ಣ ಮಂಗಲ, ಪತ್ರಕರ್ತರಾದ ಕೆ.ಎನ್ .ನವೀನ್ ಕುಮಾರ್ , ಬಿ.ಜೆ.ಸೋಮಶೇಖರ್ ಭಾಗವಹಿಸುವರು. ಹುಣಸನಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಸಿ.ಶ್ರೀನಿವಾಸಚಾರಿ, ಮದ್ದೂರು ಸಮೂಹ ಸಂಪನ್ಮೂಲ ವ್ಯಕ್ತಿ ವಿ.ಬಿ.ಹೇಮಾವತಿ, ಜೋಡಿಹೊಡಘಟ್ಟ ಸರ್ಕಾರಿ ಶಾಲೆ ಶಿಕ್ಷಕ ಕೆ.ಆರ್ .ಶಶಿಧರ್ ಈಚಗೆರೆ, ಕೆ.ಗೌಡಗೆರೆ ವಿವೇಕಾನಂದ ಪ್ರೌಢಶಾಲೆಯ ಶಿಕ್ಷಕ ರಾಮಕೃಷ್ಣಯ್ಯ, ಅನಿಕೇತನ ಶಾಲೆ ಸಂಪನ್ಮೂಲ ವ್ಯಕ್ತಿ ಎ.ಎಸ್ .ರಾಹುಲ್ , ಶಿವಳ್ಳಿ ವಿಶ್ವೇಶ್ವರಯ್ಯ ಪ್ರೌಢಶಾಲೆ ಶಿಕ್ಷಕಿ ಎಂ.ವಿ.ಶ್ವೇತಾ ಭಾಗವಹಿಸುವರು.