ಲಂಡನ್, ಅಮೆರಿಕಾದಿಂದ ಬಂದು ಮತದಾನ ಮಾಡಿದ ಯುವತಿಯರು..!

| Published : Apr 27 2024, 01:17 AM IST

ಲಂಡನ್, ಅಮೆರಿಕಾದಿಂದ ಬಂದು ಮತದಾನ ಮಾಡಿದ ಯುವತಿಯರು..!
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ಮಾಡುವುದು ನಮ್ಮ ಜವಾಬ್ದಾರಿ. ಒಳ್ಳೆಯ ನಾಯಕರನ್ನು ಆರಿಸಬೇಕು. ಭ್ರಷ್ಟಾಚಾರರಹಿತವಾಗಿ ಆಡಳಿತ ನಡೆಸುವವರು, ಜನರ ಸಂಕಷ್ಟಗಳಿಗೆ ಸ್ಪಂದಿಸುವವರು ನಮಗೆ ಬೇಕಿದೆ. ಅದಕ್ಕಾಗಿ ಮತದಾನ ನಮಗೆ ಅವಕಾಶ ಮಾಡಿಕೊಟ್ಟಿದೆ. ಎಲ್ಲೇ ಇದ್ದರೂ ಮತದಾನದ ದಿನ ಬಂದು ನಮ್ಮ ಹಕ್ಕು ಚಲಾಯಿಸುವುದು ನಮ್ಮ ಕರ್ತವ್ಯ ಎನ್ನುತ್ತಾರೆ ಕೆ.ಎಸ್.ಪ್ರಕೃತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮತಹಕ್ಕು ಚಲಾಯಿಸುವ ಏಕೈಕ ಉದ್ದೇಶದಿಂದ ದೂರದ ಲಂಡನ್, ಅಮೆರಿಕಾದಿಂದ ಯುವತಿಯರು ಬಂದ ಮತದಾನ ಮಾಡುವುದರೊಂದಿಗೆ ಮಾದರಿಯಾಗಿದ್ದಾರೆ.

ಮಂಡ್ಯದ ಕಾಳೇನಹಳ್ಳಿಯ ಸೋನಿಕಾ ಎರಡು ವರ್ಷದ ಹಿಂದೆ ಲಂಡನ್‌ಗೆ ತೆರಳಿ ಐಟಿ ಕನ್ಸಲ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ವಾರದ ಹಿಂದೆಯೇ ಪ್ಲಾನ್ ಮಾಡಿಕೊಂಡು ವಿಶೇಷ ವಿಮಾನದಲ್ಲಿ ಆಗಮಿಸಿದರು. ಒಂದೂವರೆ ಲಕ್ಷ ರು. ಖರ್ಚು ಮಾಡಿಕೊಂಡು ಬಂದು ಸ್ವಗ್ರಾಮದ ಮತಗಟ್ಟೆಯಲ್ಲಿ ಮತಚಲಾಯಿಸಿ ಸಂತಸಪಟ್ಟರು.

ಮತ್ತೊಬ್ಬರು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆ.ಎಸ್.ಪ್ರಕೃತಿ. ಏಳು ವರ್ಷದ ಹಿಂದೆ ಅಮೆರಿಕಾಗೆ ತೆರಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಮತಚಲಾಯಿಸಬೇಕೆಂಬ ಕಾರಣಕ್ಕೆ ಎರಡು ತಿಂಗಳ ಹಿಂದೆಯೇ ಪ್ಲಾನ್ ಮಾಡಿಕೊಂಡು ಬಂದಿದ್ದರು. ಒಂದು ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಬಂದು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮತಚಲಾಯಿಸಿದರು.

ಮತದಾನ ಮಾಡುವುದು ನಮ್ಮ ಜವಾಬ್ದಾರಿ. ಒಳ್ಳೆಯ ನಾಯಕರನ್ನು ಆರಿಸಬೇಕು. ಭ್ರಷ್ಟಾಚಾರರಹಿತವಾಗಿ ಆಡಳಿತ ನಡೆಸುವವರು, ಜನರ ಸಂಕಷ್ಟಗಳಿಗೆ ಸ್ಪಂದಿಸುವವರು ನಮಗೆ ಬೇಕಿದೆ. ಅದಕ್ಕಾಗಿ ಮತದಾನ ನಮಗೆ ಅವಕಾಶ ಮಾಡಿಕೊಟ್ಟಿದೆ. ಎಲ್ಲೇ ಇದ್ದರೂ ಮತದಾನದ ದಿನ ಬಂದು ನಮ್ಮ ಹಕ್ಕು ಚಲಾಯಿಸುವುದು ನಮ್ಮ ಕರ್ತವ್ಯ ಎಂದು ಕೆ.ಎಸ್.ಪ್ರಕೃತಿ ತಿಳಿಸಿದರು.