ಅಭಿವೃದ್ಧಿ ಪರ ಕಾಂಗ್ರೆಸ್‌ಗೆ ಮತ ನೀಡಿ: ದರ್ಶನಾಪುರ

| Published : Apr 19 2024, 01:03 AM IST

ಅಭಿವೃದ್ಧಿ ಪರ ಕಾಂಗ್ರೆಸ್‌ಗೆ ಮತ ನೀಡಿ: ದರ್ಶನಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಗ್ರೆಸ್ ಪಕ್ಷ ಜನಪರ ಕಾಳಜಿವುಳ್ಳ, ಅಭಿವೃದ್ಧಿಪರವಿದ್ದು, ದೇಶದ ಸರ್ವ ಜನಾಂಗದ ಹಿತ ಬಯಸುವ ರಾಷ್ಟ್ರೀಯ ಪಕ್ಷ ಬೆಂಬಲಿಸಬೇಕು.

ಕನ್ನಡಪ್ರಭ ವಾರ್ತೆ ಸುರಪುರ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಖ ನೋಡಿ ಮತ ನೀಡದೆ, ಅಭಿವೃದ್ಧಿಪರ ಕಾಳಜಿವುಳ್ಳ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ತಾಲೂಕಿನ ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಗ್ರೆಸ್ ಪಕ್ಷ ಜನಪರ ಕಾಳಜಿವುಳ್ಳ, ಅಭಿವೃದ್ಧಿಪರವಿದ್ದು, ದೇಶದ ಸರ್ವ ಜನಾಂಗದ ಹಿತ ಬಯಸುವ ರಾಷ್ಟ್ರೀಯ ಪಕ್ಷ ಬೆಂಬಲಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯ ಮುಖವನ್ನಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ಮತ ಕೇಳುತ್ತಿದೆ. ರಾಜ್ಯಕ್ಕೆ ಕೇಂದ್ರದ ಬಿಜೆಪಿ ಪಕ್ಷ ಏನು ಕೊಡುಗೆ ನೀಡಿದೆ. ಜಿಲ್ಲೆಯಲ್ಲಿ ನನ್ನ ಕೈ ಬಲಪಡಿಸಬೇಕಾದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದ ಸ್ಫರ್ಧೆಗಳಿದ ನಮ್ಮ ಪಕ್ಷದ ಜಿ. ಕುಮಾರ ನಾಯಕ ಮತ್ತು ಸುರಪುರ ವಿಧಾನ ಸಭೆ ಉಪಚುನಾವಣೆಯಿಂದ ಸ್ಪರ್ಧಿಸಿರುವ ರಾಜಾ ವೇಣುಗೋಪಾಲ ನಾಯಕ ಅವರನ್ನು ಅತ್ಯಧಿಕ ಮತಗಳಿಂದ ಜಯಗಳಿಸುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಅಭ್ಯರ್ಥಿ ಜಿ. ಕುಮಾರನಾಯಕ ಮಾತನಾಡಿ, ಹಿರಿಯ ಸಚಿವ ದರ್ಶನಾಪುರ ಅವರ ಪಕ್ಷ ನಿಷ್ಠೆ ಮತ್ತು ಅವರು ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ನಿಮ್ಮ ಆಶೀರ್ವಾದಿಂದ ನಾನು ಸಂಸದನಾದರೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧ ಎಂದು ಹೇಳಿದರು.

ಹಿರಿಯ ಮುಖಂಡ ಲಿಂಗನಗೌಡ ಮಾಲಿಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಸಿಸಿ ರಾಜ್ಯ ಉಪಾಧ್ಯಕ್ಷ ಮರಿಗೌಡ ಹುಲಕಲ್, ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ರಾಜಾ ಕುಮಾರನಾಯಕ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್, ಶಂಕ್ರಣ್ಣ ವಣಕ್ಯಾಳ, ವಾಮನರಾವ ದೇಶಪಾಂಡೆ, ಶರಣಪ್ಪ ಸಲಸದಪುರ, ಡಾ. ಮಲ್ಲನಗೌಡ ಉಕಿನಾಳ, ನೀಲಕಂಠ ಬಡಿಗೇರ, ವಿನೋದ ಪಾಟೀಲ್, ಪ್ರೇಮಿಬಾಯಿ ರಾಠೋಡ, ಸೋಮಲಿಂಗ ದೊಡಮನಿ, ಮಹಾದೇವ ಸಾಲಿಮಠ, ವೆಂಕೋಬ ಯಾದವ, ಶರಣಬಸ್ಸು ಡಿಗ್ಗಾವಿ, ವೈ.ಟಿ. ಪಾಟೀಲ, ದಾವಲಸಾಬ ಆಂದೇಲಿ, ಸಯ್ಯದ ತುರಕಮನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಚಿಂಚೋಳಿ ಸೇರಿದಂತೆ ಇತರರಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ ಸ್ವಾಗತಿಸಿದರು. ಸಾಹೇಬಲಾಲ ಆಂದೇಲಿ ನಿರೂಪಿಸಿದರು. ರಹೆಮಾನ ಪಟೇಲ್ ವಂದಿಸಿದರು.ಸುರಪುರ ಅರಸು ಮನೆತನದ ಅಭಿಮಾನದಿಂದ ನನಗೆ ಹಿರಿಯ ಮುತ್ಸದ್ಧಿ ಕುಮಾರನಾಯಕ ಅವರ ಹೆಸರನ್ನು ನನ್ನ ತಂದೆ ನನಗೆ ಇಟ್ಟಿದ್ದಾರೆ. ಈ ಭಾಗದಲ್ಲಿ ನಾನು ಸತತ ಮೂರು ವರ್ಷಗಳ ಕಾಲ ವಿವಿಧ ಇಲಾಖೆಯ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಜನರ ಸೇವೆಗೆ ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವ ನಂಬಿಕೆಯಿದೆ.

- ಜಿ. ಕುಮಾರ ನಾಯಕ, ರಾಯಚೂರು ಲೋಕಸಭೆ, ಕಾಂಗ್ರೆಸ್‌ ಅಭ್ಯರ್ಥಿ.