ಅಧಿಕಾರಿಗಳಿಗೆ ಸ್ಪಂದಿಸಿ ಮತದಾನ

| Published : Apr 27 2024, 01:00 AM IST

ಸಾರಾಂಶ

ಅಧಿಕಾರಿಗಳು 15 ದಿನಗಳ ಗಡುವು ನೀಡಿದ್ದಾರೆ ಅದರಂತೆ ನಾವು ದಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಕಾನೂನಾತ್ಮಕವಾಗಿ ಕೆಲಸ ಮಾಡುತ್ತೇವೆ, ನಮ್ಮ ಸಮಸ್ಯೆ ಬಗೆ ಹರಿಯದಿದ್ದರೆ ತಾಲೂಕು ಕಚೇರಿಯ ಮುಂಭಾಗ ಕುಳಿತು ಪ್ರತಿಭಟನೆ ಮಾಡಲಿದ್ದೇವೆ

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಸಮೀಪದ ಚನ್ನಕಲ್ ಕಾವಲ್ ನ ಮುತ್ತು ಮಾರಿಯಮ್ಮ ದೇವಾಲಯಕ್ಕೆ ಬರಲು ಇರುವ ರಸ್ತೆ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ 300 ಕುಟುಂಬದ ಸದಸ್ಯರು ಮತದಾನ ಮಾಡಿದರು.

ಗ್ರಾಮದ ಮುಖಂಡ ಸಿ.ಆರ್. ಪ್ರಕಾಶ್ ಮಾತನಾಡಿ, ದೇವಸ್ಥಾನಕ್ಕೆ ಬರುವ ರಸ್ತೆಯ ಸಮಸ್ಯೆಯ ಬಗ್ಗೆ ಕಂದಾಯ ನಿರೀಕ್ಷಕ, ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಇದಲ್ಲದೆ ತಹಸೀಲ್ದಾರ್ ಕೂಡ ದೂರವಾಣಿ ಮಾಡಿ, ಸಮಸ್ಯೆ ಇತ್ಯರ್ಥ ಮಾಡುವ ಭರವಸೆಯನ್ನು ನೀಡಿದ್ದಾರೆ, ಆದ್ದರಿಂದ ಎಲ್ಲರೂ ಒಮ್ಮತದಿಂದ ಮತದಾನ ಮಾಡಲು ಮುಂದಾಗಿದ್ದೇವೆ ಎಂದರು.

ಮುಖಂಡ ಸುರೇಶ್ ಮಾತನಾಡಿ, ಅಧಿಕಾರಿಗಳು 15 ದಿನಗಳ ಗಡುವು ನೀಡಿದ್ದಾರೆ ಅದರಂತೆ ನಾವು ದಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಕಾನೂನಾತ್ಮಕವಾಗಿ ಕೆಲಸ ಮಾಡುತ್ತೇವೆ, ನಮ್ಮ ಸಮಸ್ಯೆ ಬಗೆ ಹರಿಯದಿದ್ದರೆ ತಾಲೂಕು ಕಚೇರಿಯ ಮುಂಭಾಗ ಕುಳಿತು ಪ್ರತಿಭಟನೆ ಮಾಡಲಿದ್ದೇವೆ ಎಂದರು.

ವೆಂಕಟೇಶ್, ಲೀಲಾವತಿ, ಷಣ್ಮುಖ, ಕಾವೇರಿ, ರಾಮಚಂದ್ರ, ಶಾಂತಮ್ಮ, ಅಕ್ಷಿತಾ, ಈಶ್ವರಿ, ಕೃಷ್ಣವೇಣಿ, ಲಕ್ಷ್ಮಿ, ಚೆಲುವಿ ಇದ್ದರು.