ಜಿಡ್ಡು ಗಟ್ಟಿದ ಸಮಾಜದಲ್ಲಿ ವಿಚಾರದ ದೀಪ ಹಚ್ಚಿದ ಶರಣರು-ಕೆಂಚಕ್ಕನವರ

| Published : May 09 2024, 01:04 AM IST

ಜಿಡ್ಡು ಗಟ್ಟಿದ ಸಮಾಜದಲ್ಲಿ ವಿಚಾರದ ದೀಪ ಹಚ್ಚಿದ ಶರಣರು-ಕೆಂಚಕ್ಕನವರ
Share this Article
  • FB
  • TW
  • Linkdin
  • Email

ಸಾರಾಂಶ

ವಚನಗಳು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಸರಳ ನಿರೂಪಣೆ ಹೊಂದಿದ್ದು, ಇವನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಕೆ. ಕೆಂಚಕ್ಕನವರ ತಿಳಿಸಿದರು.

ಹಿರೇಕೆರೂರು: ಶರಣರು ಮಾನವೀಯತೆಯ ಮಂಗಳ ಮೂರ್ತಿಗಳಾಗಿ ಜಿಡ್ಡು ಗಟ್ಟಿದ ಸಮಾಜದಲ್ಲಿ ವಿಚಾರದ ದೀಪ ಹಚ್ಚಿ ಧರ್ಮಕ್ಕೆ ಹೊಸ ವ್ಯಾಖ್ಯಾನ ಬರೆದವರು. ವಚನಗಳು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಸರಳ ನಿರೂಪಣೆ ಹೊಂದಿದ್ದು, ಇವನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಕೆ. ಕೆಂಚಕ್ಕನವರ ತಿಳಿಸಿದರು.

ಪಟ್ಟಣದ ಶರಣೆ ಬಸಮ್ಮ ಅಬಲೂರ ಅವರ ಮನೆಯಲ್ಲಿ ಆಯೋಜಿಸಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ತು ವಚನ ಪ್ರಚಾರ ಪ್ರಸಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ಮುಖ್ಯವಾಗಿ ಯುವಕರು ಹಾಗೂ ಮಕ್ಕಳಿಗೆ ವಚನ ಸಾಹಿತ್ಯ ಹಾಗೂ ಶರಣರ ಸಂದೇಶಗಳು ತಲುಪುವ ಅಗತ್ಯವಿದೆ. ಅದಕ್ಕಾಗಿ ಪದಾಧಿಕಾರಿಗಳು ಹಾಗೂ ಶರಣ ಚಿಂತಕರು ಇನ್ನಷ್ಟು ಸಕ್ರಿಯಗೊಳ್ಳಬೇಕು. ಮನೆಯಲ್ಲಿ ಮಹಾಮನೆ, ಶಾಲೆ ಕಾಲೇಜುಗಳಲ್ಲಿ ಶರಣ ಚಿಂತನೆ, ತಾಲೂಕು ಸಮ್ಮೇಳನವೂ ಸೇರಿದಂತೆ ನಿತ್ಯ ನಿರಂತರ ಶರಣರ ತತ್ವ ಪ್ರಸಾರಕ್ಕೆ ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಸಂಘಟಿತವಾಗಿ ಕೆಲಸ ಮಾಡುತ್ತಿದೆ. ಶರಣ ಸಾಹಿತ್ಯ ಪರಿಷತ್ತಿನ ಮಹಾಮನೆ ಪತ್ರಿಕೆ ಹೆಚ್ಚು ಮನೆಗಳಿಗೆ ತಲುಪಿಸುವ ಗುರಿ ನಮ್ಮದಾಗಿದೆ ಎಂದರು.ಶಸಾಪ ನಗರ ಘಟಕದ ಅಧ್ಯಕ್ಷ ಆರ್.ಬಿ. ಹಂಜಿ ಮಾತನಾಡಿ, ಶರಣರ ವಿಚಾರ ಧಾರೆಗಳನ್ನು ಮನೆ ಮನೆಗಳಿಗೆ ತಲುಪಿಸುವುದು ಈಗ ಅತ್ಯಂತ ಅಗತ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ವಚನಗಳು ಅತ್ಯಂತ ಪ್ರಭಾವ ಹಾಗೂ ಪರಿಣಾಮ ಬೀರುವಂತಹವುಗಳಾಗಿವೆ. ಶಾಲಾ ಕಾಲೇಜುಗಳಲ್ಲಿ ವಿಶೇಷವಾಗಿ ಶರಣರ ಚಿಂತನೆಗಳನ್ನು ಬಿತ್ತಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಎಚ್.ಎಸ್. ಹಲಗೇರಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಬಸಮ್ಮ ಅಬಲೂರು, ಎಂ.ಜಿ. ಈಶ್ವರಗೌಡ್ರ, ಸಿ.ಬಿ. ಮಾಳಗಿ, ಶೇಖಪ್ಪ ಬೇತೂರ, ಶಂಕರ ಅಂಗಡಿ, ದನಿಷ ಪುರದ,ಶಶಿಕಲಾ ಹಾದ್ರಿಹಳ್ಳಿ,ಗಾಯತ್ರಮ್ಮ ತಿಪ್ಪಶೇಟ್ಟಿ,ನೀಲಮ್ಮ ಹೊಸಮನಿ,ಶೋಭಾ ಅಂಗಡಿ, ಕರುಣಾ ಸಿ.ಎಚ್., ಅಕ್ಷತಾ, ಮಾನಸ, ಶಿಲ್ಪಾ ಬೇತೂರ, ಶಶಿಕಲಾ ಬೇತೂರ ಉಪಸ್ಥಿತರಿದ್ದರು.