ಲೋಕಸಭಾ ಚುನಾವಣೆ ನಂತರ ಯಾವ ಗ್ಯಾರಂಟಿ ಇರಲ್ಲ

| Published : Apr 27 2024, 01:20 AM IST

ಲೋಕಸಭಾ ಚುನಾವಣೆ ನಂತರ ಯಾವ ಗ್ಯಾರಂಟಿ ಇರಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ 50 ವರ್ಷಗಳಲ್ಲಿ ದೇಶದ ಕೋಟಿ ಕೋಟಿ ಹಣ ಲೂಟಿ ಮಾಡಿದೆ. ಜೋಶಿ ನಿಮ್ಮ ಭಾಗದಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ಅವರಿಗೆ ತಮ್ಮ ಮತ ನೀಡಿ ಮತ್ತೊಮ್ಮೆ ನರೇಂದ್ರ ಮೊದಿ ಅವರ ಕೈ ಬಲಪಡಿಸಿ.

ಕುಂದಗೋಳ:

ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಪಕ್ಷದ ಯಾವ ಗ್ಯಾರಂಟಿಗಳೂ ಇರುವುದಿಲ್ಲ. ಏಕೆಂದರೆ ಈ ಸರ್ಕಾರವೇ ಬಿದ್ದು ಹೋಗಲಿದೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

ಅವರು ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಮತಯಾಚಿಸಿ ಮಾತನಾಡಿದರು.

ಕಾಂಗ್ರೆಸ್ 50 ವರ್ಷಗಳಲ್ಲಿ ದೇಶದ ಕೋಟಿ ಕೋಟಿ ಹಣ ಲೂಟಿ ಮಾಡಿದೆ. ಜೋಶಿ ನಿಮ್ಮ ಭಾಗದಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ಅವರಿಗೆ ತಮ್ಮ ಮತ ನೀಡಿ ಮತ್ತೊಮ್ಮೆ ನರೇಂದ್ರ ಮೊದಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ ದೇಶ ತಲೆತಗ್ಗಿಸುವಂತಹ ಕೆಲಸ ಮಾಡದೆ ದೇಶವನ್ನು ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ನಾವು ಆರ್ಥಿಕವಾಗಿ 5ನೇ ಸ್ಥಾನದಲ್ಲಿ ಇದ್ದೇವೆ. ಭಾರತದಲ್ಲಿ ಮನಮೋಹನ್ ಸಿಂಗ್‌ ಸರ್ಕಾರ ಇದ್ದ ಸಂದರ್ಭದಲ್ಲಿ ನಮ್ಮ ಸೈನಿಕರ ರುಂಡ ಕತ್ತರಿಸಿ ಪಾಕಿಸ್ತಾನಕ್ಕೆ ಹೋಗಿ ಮೆರವಣಿಗೆ ಮಾಡುತ್ತಿದ್ದರು. ಸೈನಿಕರ ಕೈಯಲ್ಲಿ ಎಕೆ 47 ಗನ್ ಇದ್ದರೂ ಅದನ್ನು ಉಪಯೋಗಿಸುವ ಅಧಿಕಾರ ಅವರಿಗೆ ನೀಡಿರಲಿಲ್ಲ. ಹಿಂದೂಗಳು ಅಲ್ಲಿಗೆ ಹೋಗುವ ಪರಿಸ್ಥಿತಿಯಂತೂ ಇರಲೇ ಇಲ್ಲ. ಮೋದಿ ಇದಕ್ಕೆಲ್ಲ ವಿದಾಯ ಹೇಳಿ ಸೈನಿಕರಿಗೆ ಹೆಚ್ಚಿನ ಶಕ್ತಿ ನೀಡಿ ಹಾಗೂ ಆರ್ಟಿಕಲ್ಸ್ 370 ರದ್ದು ಮಾಡಿ ಕಾಶ್ಮೀರದಲ್ಲಿ ಎಲ್ಲರೂ ಸುರಕ್ಷಿತವಾಗಿ ಓಡಾಡುವಂತೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಚೊಂಬು ತೋರಿಸುತ್ತಿದ್ದಾರೆ. ಏಕೆಂದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಗಳಾದಲ್ಲಿ ನಮ್ಮ ಕೈಯಲ್ಲಿ ಚೊಂಬು ಕೊಡುತ್ತಾರೆ ಎಂಬ ಚಿಂತೆ ಈಗಾಗಲೇ ಕಾಂಗ್ರೆಸ್ಸಿನವರಿಗೆ ಕಾಡುತ್ತಿದೆ ಎಂದರು.

ಶಾಸಕ ಎಂ.ಆರ್. ಪಾಟೀಲ ಹಾಗೂ ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು. ಈ ವೇಳೆ ರವಿಗೌಡ ಪಾಟೀಲ, ಪ್ರಕಾಶ ಕುಬಿಹಾಳ, ಎನ್.ಎನ್. ಪಾಟೀಲ, ಗುರು ಪಾಟೀಲ, ಭರಮಪ್ಪ ಮುಗಳಿ, ಶಂಕರಗೌಡ ದೊಡ್ಡಮನಿ ಸೇರಿದಂತೆ ಹಲವರಿದ್ದರು.