ರೈತರ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು

| Published : Oct 03 2023, 06:05 PM IST

ರೈತರ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಚುನಾವಣಾ ಪೂರ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೊಬ್ಬರಿಗೆ 15 ಸಾವಿರ ರು. ಬೆಂಬಲ ಬೆಲೆ ನೀಡುವ ಭರವಸೆ ನೀಡಿದ್ದರು. 6ನೇ ಗ್ಯಾರಂಟಿಯಾಗಿ 15 ಸಾವಿರ ಕೊಬ್ಬರಿ ಬೆಂಬಲ ಬೆಲೆ ನೀಡಬೇಕು ಎಂದು ತಿಪಟೂರಿನ ಜೆಡಿಎಸ್ ಹಾಗೂ ರೈತ ಮುಖಂಡ ಕೆ.ಟಿ.ಶಾಂತಕುಮಾರ್ ಆಗ್ರಹಿಸಿದರು.
-ರೈತರ ಬೇಡಿಕೆಗಳ ಈಡೇರಿಕೆಗಾಗಿ ಅರಸೀಕೆರೆಯಿಂದ ವಿಧಾನಸೌಧದವರೆಗೆ ಪಾದಯಾತ್ರೆ -ಅ.4ರಂದು ವಿಧಾನಸೌಧಕ್ಕೆ ಮುತ್ತಿಗೆ ದಾಬಸ್‌ಪೇಟೆ: ಚುನಾವಣಾ ಪೂರ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೊಬ್ಬರಿಗೆ 15 ಸಾವಿರ ರು. ಬೆಂಬಲ ಬೆಲೆ ನೀಡುವ ಭರವಸೆ ನೀಡಿದ್ದರು. 6ನೇ ಗ್ಯಾರಂಟಿಯಾಗಿ 15 ಸಾವಿರ ಕೊಬ್ಬರಿ ಬೆಂಬಲ ಬೆಲೆ ನೀಡಬೇಕು ಎಂದು ತಿಪಟೂರಿನ ಜೆಡಿಎಸ್ ಹಾಗೂ ರೈತ ಮುಖಂಡ ಕೆ.ಟಿ.ಶಾಂತಕುಮಾರ್ ಆಗ್ರಹಿಸಿದರು. ರೈತರ ವಿವಿಧ ಬೇಡಿಕೆಗಳು ಮತ್ತು ಕೊಬ್ಬರಿಗೆ ಬೆಂಬಲ ಬೆಲೆ ಜಾರಿ ಮಾಡುವಂತೆ, ರಾಜ್ಯ ರೈತ ಸಂಘ, ಹಸಿರು ಸೇನೆ, ಕೊಬ್ಬರಿ ಬೆಳೆಗಾರರ ಸಂಘ ಅರಸೀಕೆರೆಯಿಂದ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆಯಲ್ಲಿ ಆಗಮಿಸುತ್ತಿರುವ ವೇಳೆ ಮಹಿಮಾಪುರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಬ್ಬರಿ ಬೆಲೆ 20 ಸಾವಿರದಿಂದ 8 ಸಾವಿರಕ್ಕಿಳಿದಿದೆ. ಆದ್ದರಿಂದ ಸರ್ಕಾರ 6ನೇ ಗ್ಯಾರಂಟಿಯಾಗಿ 15 ಸಾವಿರ ರು. ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಅ.4ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆಂದು ಹೇಳಿದರು. ರೈತರು ಸಂಕಷ್ಟದಲ್ಲಿದ್ದಾರೆ. ನಮ್ಮ ಪಾದಯಾತ್ರೆ ಅರಸೀಕೆರೆಯಿಂದ ಪ್ರಾರಂಭವಾಗಿ ತುಮಕೂರು ತಲುಪಿದಾಗಲೂ, ಜಿಲ್ಲೆಯ ಇಬ್ಬರು ಸಚಿವರು ರೈತರ ಸಮಸ್ಯೆಯನ್ನು ಕೇಳಲಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದರೂ ಯಾವುದೇ ಭರವಸೆ ನೀಡಿಲ್ಲ. ಕೊಬ್ಬರಿಗೆ ಬೆಂಬಲ ಬೆಲೆ ನೀಡುವವರಿಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, 40 ವರ್ಷದ ಹಿಂದೆ ಕೊಬ್ಬರಿ ಬೆಲೆ 9 ಸಾವಿರ ರು.ಗಳಿತ್ತು ಇದೀಗ 8 ಸಾವಿರ ರು.ಗಳಿದೆ, ರೈತರು 40 ವರ್ಷ ಹಿಂದೆ ಹೋಗಿದ್ದಾರೆ. ಕೇಂದ್ರ ಸರ್ಕಾರವೇ ಕ್ವಿಂಟಲ್ ಕೊಬ್ಬರಿಗೆ 16,730 ರು. ನೀಡಿ ಎಂದಿದ್ದಾರೆ, ರಾಜ್ಯ ಸರ್ಕಾರ ಕೇವಲ 12 ಸಾವಿರ ರು. ಬೆಂಬಲ ಬೆಲೆ ನೀಡುವ ಕ್ರಮ ಸರಿಯಲ್ಲ. ಅದು ಸೀಮಿತ ರೈತರಿಗೆ ಇಡೀ ತಿಪಟೂರಿನಲ್ಲಿ 100 ರೈತರಿಗೆ ಬೆಂಬಲ ಬೆಲೆ ನೀಡುವುದು ಎಷ್ಟು ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಮುಖಂಡರಾದ ಬಸವರಾಜು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ, 82 ಜನ ಶಾಸಕರು ತೆಂಗು ಬೆಳೆಗಾರರ ವ್ಯಾಪ್ತಿಗೆ ಬರುತ್ತಾರೆ. ಇವರೆಲ್ಲರೂ ತೆಂಗು ಬೆಳೆಗಾರರನ್ನು ಬೀದಿಗೆ ನಿಲ್ಲಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಬೈರೇಗೌಡ, ಕೆಂಕೆರೆ ಸತೀಶ್, ಆರಾಧ್ಯ, ಆನಂದ್ ಪಟೇಲ್, ಚಂದನಹೊಸಹಳ್ಳಿ ನಾಗೇಶ್, ಸಿ.ಕೆ.ರವಿಚಂದ್ರ, ಮಲ್ಲಿಕಾರ್ಜುನಯ್ಯ, ನೂರಾರು ತೆಂಗು ಬೆಳೆಗಾರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಫೋಟೋ 4 : ಮಹಿಮಾಪುರದ ಬಳಿ ಕೊಬ್ಬರಿಗೆ ಬೆಂಬಲ ಬೆಲೆಗೆ, ರೈತ ಸಂಘಟನೆಯ ಪಾದಯಾತ್ರೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ಶಾಂತಕುಮಾರ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.