ದುಡ್ಡು ಹಂಚಿ ಮತ ಗಳಿಕೆ ರಾಜಕಾರಣ ಕೊನೆಗೊಳ್ಳಬೇಕು: ವಿನಯಕುಮಾರ್

| Published : Apr 27 2024, 01:01 AM IST

ದುಡ್ಡು ಹಂಚಿ ಮತ ಗಳಿಕೆ ರಾಜಕಾರಣ ಕೊನೆಗೊಳ್ಳಬೇಕು: ವಿನಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ದುಡ್ಡು ಕೊಟ್ಟು ಮತ ಗಳಿಸುವ ರಾಜಕಾರಣದಲ್ಲಿ ಕೊನೆಗೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಸೋಲಲಿ, ಗೆಲ್ಲಲಿ, ನಿಮ್ಮ ಜೊತೆಗೆ ಸದಾ ನಾನಿರುತ್ತೇನೆ ಎಂದು ದಾವಣಗೆರೆ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಬಿ.ಜಿ. ವಿನಯಕುಮಾರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿ ಪಟ್ಟಣ, ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಮತಯಾಚನೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ದುಡ್ಡು ಕೊಟ್ಟು ಮತ ಗಳಿಸುವ ರಾಜಕಾರಣದಲ್ಲಿ ಕೊನೆಗೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಸೋಲಲಿ, ಗೆಲ್ಲಲಿ, ನಿಮ್ಮ ಜೊತೆಗೆ ಸದಾ ನಾನಿರುತ್ತೇನೆ ಎಂದು ದಾವಣಗೆರೆ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಬಿ.ಜಿ. ವಿನಯಕುಮಾರ್ ಹೇಳಿದರು.

ಶುಕ್ರವಾರ ಹೊನ್ನಾಳಿ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಿಗೆ ರೋಡ್ ಶೋ ಮೂಲಕ ಭೇಟಿ ಮಾಡಿ ಮತಯಾಚನೆ ಮಾಡಿದ ಅವರು, ನೇರವಾಗಿ ಕಾರ್ಯಕರ್ತರ ಭೇಟಿ ಮಾಡುತ್ತಿದ್ದೇನೆ. ಅವರ ಬೆಂಬಲದೊಂದಿಗೆ ಕ್ಷೇತ್ರದಲ್ಲಿ ಬಡವರು, ದೀನ ದಲಿತರು, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡಲಿದ್ದೇನೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 30 ವರ್ಷಗಳಿಂದ ಎರಡು ಕುಟುಂಬಗಳಿಗೆ ರಾಜಕೀಯ ಅಧಿಕಾರ ಸೀಮಿವಾಗಿದೆ. ಈ ಬಾರಿ ಬದಲಾವಣೆ ಗಾಳಿ ಬೀಸುವ ಉದ್ದೇಶದಿಂದ ತಾನು ಯಾವ ಮಧ್ಯವರ್ತಿಗಳ ಸಹಾಯವಿಲ್ಲದೇ ಸ್ಪರ್ಧಿಸಿ, ಮತಯಾಚಿಸುತ್ತಿದ್ದೇನೆ ಎಂದರು.

ಜಿಲ್ಲೆಯಲ್ಲಿ ರಾಜಕೀಯ ಹೊಸ ಬೆಳವಣಿಗೆ ಆಗಬೇಕು. ಚುನಾವಣೆಯ ನನ್ನ ಗುರುತು ಸಿಲಿಂಡರ್ ಆಗಿದ್ದು, ಈ ಗುರುತಿಗೆ ಮತ ಹಾಕುವ ಮುೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಕನಕದಾಸ ವೃತ್ತದಲ್ಲಿ ಕನಕದಾಸ ಪ್ರತಿಮೆ ಹಾರ ಹಾಕಿ, ಸಂಗೊಳ್ಳಿ ರಾಯಣ್ಣ ವೃತ್ತ, ಕುಂದೂರು, ಬನ್ನಿಕೋಡು, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಸುದೀಪ್, ವಾಸಪ್ಪ, ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಇದ್ದರು.

- - - -26ಎಚ್.ಎಲ್.ಐ2:

ದಾವಣಗೆರೆ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಬಿ.ಜಿ. ವಿನಯಕುಮಾರ್ ಶುಕ್ರವಾರ ಹೊನ್ನಾಳಿ ಪಟ್ಟಣ, ಗ್ರಾಮಗಳಲ್ಲಿ ರೋಡ್ ಶೋ ನಡೆಸಿ, ಮತಯಾಚಿಸಿದರು.