ಮಾನವೀಯ ಮೌಲ್ಯ ಬೆಳಸುವುದೇ ರೆಡ್‌ಕ್ರಾಸ್‌ ಗುರಿ

| Published : May 09 2024, 12:45 AM IST

ಮಾನವೀಯ ಮೌಲ್ಯ ಬೆಳಸುವುದೇ ರೆಡ್‌ಕ್ರಾಸ್‌ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

1859ರಲ್ಲಿ ಇಟಲಿ, ಫ್ರಾನ್ಸ್‌ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ 'ಸಲ್ಫರಿನೊ' ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಾ ಸಂಸ್ಥೆಯಾದ ರೆಡ್‌ ಕ್ರಾಸ್‌ ಅನ್ನು ಸ್ಥಾಪಿಸಿದರು. ಈಗ ಇದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಕ್ತದಲ್ಲಿ ಯಾವುದೆ ಜಾತಿಧರ್ಮ ಬಡವ ಶ್ರೀಮಂತ ಎನ್ನುವ ಮಾನವ ವಿಂಗಡಣೆ ಭಾವನೆ ಇರುವುದಿಲ್ಲಾ. ತುರ್ತು ಸಂದರ್ಭದಲ್ಲಿ ರಕ್ತ ನೀಡಿ ಜೀವ ಉಳಿಸುವ ಕೆಲಸವೇ ರಕ್ತದಾನ ಎಂದು ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ದಿನಾಚರಣೆಯ ಅಂಗವಾಗಿ ಬುಧವಾರ ನಗರದ ಕಂದವಾರ ಬಾಗಿಲು ಬಳಿ ಇರುವ ಕಮಲಮ್ಮ ವೆಂಕಟಪತೆಪ್ಪ ದತ್ತು ಸ್ವೀಕಾರ ಕೇಂದ್ರ ಹಾಗು ವೆಂಕಟನರಸಮ್ಮ ಗುರುಕುಲಾಶ್ರಮದಲ್ಲಿ ಅನಾಥ ಮತ್ತು ಬಡ ಮಕ್ಕಳಿಗೆ ಬಟ್ಟೆ, ಪ್ಯಾನ್ ಹಾಗೂ ಸಿಬ್ಬಂದಿಗೆ ವಸ್ತ್ರಧಾನ ಮಾಡಿ ರೆಡ್ ಕ್ರಾಸ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ರೆಡ್ ಕ್ರಾಸ್ ಸಂಸ್ಥೆ ಖಜಾಂಚಿ ಎಂ.ಜಯರಾಮ್ ಮಾತನಾಡಿ, 1859ರಲ್ಲಿ ಇಟಲಿ, ಫ್ರಾನ್ಸ್‌ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ ''ಸಲ್ಫರಿನೊ'' ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಾ ಸಂಸ್ಥೆಯಾದ ರೆಡ್‌ ಕ್ರಾಸ್‌ ಅನ್ನು ಸ್ಥಾಪಿಸಿದರು. ನಂತರ ಇದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ, ಅಂತಾರಾಷ್ಟ್ರೀಯ ರೆಡ್‌ ಕ್ರಾಸ್‌ ಒಕ್ಕೂಟ ಹಾಗೂ ರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆಯಾಗಿ ಇಡೀ ಪ್ರಪಂಚದಾದ್ಯಂತ ಸ್ಥಾಪನೆಯಾಯಿತು ಎಂದರು.

ಹೊಲಿಗೆಯಂತ್ರ ವಿತರಣೆ

ಕಮಲಮ್ಮ ವೆಂಕಟಪತೆಪ್ಪ ದತ್ತು ಸ್ವೀಕಾರ ಕೇಂದ್ರದಲ್ಲಿ ಬಡ,ವಿಕಲಾಂಗ ಹಾಗು ಅಂದ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗು ಆಹಾರ ವಿತರಿಸಿ, ಒಂದೆ ಕುಟುಂಬದ ನಾಲ್ಕು ಮಂದಿ ಅಂಧರ ಮನೆಗೂ ಹೊಲಿಗೆ ಯಂತ್ರ ವಿತರಿಸಿ ಬದುಕು ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟು ರೆಡ್ ಕ್ರಾಸ್ ಡೇ ಆಚರಿಸಲಾಯಿತು.

ಈ ವೇಳೆ ಗುರುಕುಲಾಶ್ರಮ ನಿರ್ವಾಹಕ ನಾರಾಯಣಸ್ವಾಮಿ, ರೆಡ್ಡಾ ಕ್ರಾಸ್ ನ ಕಾರ್ಯದರ್ಶಿ ಬಿ.ಎನ್.ರವಿಕುಮಾರ್. ಹೇಮಂತ್ ಸಾವೇರಿ ,ಡಾ ರವಿ, ಸಿಬ್ಬಂದಿ ವರದರಾಜ್ ,ಪದ್ಮ,ರೂಪ,ಬಾಲಾಜಿ ಮತ್ತಿತರರು ಇದ್ದರು.