ತಹಸೀಲ್ದಾರ್‌ ಮನವೊಲಿಕೆ: ರತ್ನಾಪುರದಲ್ಲಿ ಮತದಾನ ಬಹಿಷ್ಕಾರ ವಾಪಸ್‌

| Published : May 08 2024, 01:00 AM IST

ತಹಸೀಲ್ದಾರ್‌ ಮನವೊಲಿಕೆ: ರತ್ನಾಪುರದಲ್ಲಿ ಮತದಾನ ಬಹಿಷ್ಕಾರ ವಾಪಸ್‌
Share this Article
  • FB
  • TW
  • Linkdin
  • Email

ಸಾರಾಂಶ

ತಹಸೀಲ್ದಾರ ಮನವೊಲಿಕೆಯ ಬಳಿಕ ತಾಲೂಕಿನ ರತ್ನಾಪುರ ಗ್ರಾಮದ ಜನತೆ ಮತದಾನ ಬಹಿಷ್ಕಾರದಿಂದ ಹಿಂದೆ ಸರಿದು ಮತದಾನ ಮಾಡಿದ ಗಟನೆ ಮಂಗಳವಾರ ನಡೆಯಿತು.

ಹಾನಗಲ್ಲ: ತಹಸೀಲ್ದಾರ ಮನವೊಲಿಕೆಯ ಬಳಿಕ ತಾಲೂಕಿನ ರತ್ನಾಪುರ ಗ್ರಾಮದ ಜನತೆ ಮತದಾನ ಬಹಿಷ್ಕಾರದಿಂದ ಹಿಂದೆ ಸರಿದು ಮತದಾನ ಮಾಡಿದ ಘಟನೆ ಮಂಗಳವಾರ ನಡೆಯಿತು.

ರತ್ನಾಪುರದಲ್ಲಿ ಸೇವಾಲಾಲ ಮಂದಿರಕ್ಕೆ ಹೊಂದಿಕೊಂಡು ಬಂಜಾರ ಭವನ ನಿರ್ಮಾಣಕ್ಕೆ ೨೦ ಲಕ್ಷ ರು. ಅನುದಾನ ಮಂಜೂರಾಗಿತ್ತು. ಆದರೆ ತಾಂಡಾ ಆಭಿವೃದ್ಧಿ ಮಂಡಳಿ ಈ ಭವನಕ್ಕೆ ಕೇವಲ ೪ ಲಕ್ಷ ರು. ಮಾತ್ರ ಬಿಡುಗಡೆಗೊಳಿಸಿತ್ತು. ಹಲವು ತಿಂಗಳಿನಿಂದ ಈ ಊರಿನ ಜನ ಹಣ ಬಿಡುಗಡೆಗೆ ಒತ್ತಾಯಿಸಿದ್ದು ಫಲ ನೀಡಲಿಲ್ಲ. ಆ ಕಾರಣಕ್ಕಾಗಿ ತಾವೆಲ್ಲ ಮತದಾನ ಬಹಿಷ್ಕರಿಸುವುದಾಗಿ ಹಾನಗಲ್ಲ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರು.ಸೋಮವಾರ ಮತದಾನ ಕೇಂದ್ರದ ಸಿಬ್ಬಂದಿ ಅಲ್ಲಿನ ಮತದಾನ ಕೇಂದ್ರಕ್ಕೆ ಹೋದಾಗ ನಮ್ಮಲ್ಲಿ ಮತದಾನ ಕೇಂದ್ರವೂ ಬೇಡ. ನಾವು ಮತದಾನ ಮಾಡುವುದಿಲ್ಲ ಎಂದು ತಕರಾರು ಮಾಡಿದರು. ವಿಷಯ ತಿಳಿದ ತಹಸೀಲ್ದಾರ ಎಸ್. ರೇಣುಕಮ್ಮ ಕೂಡಲೆ ಜಿಲ್ಲಾಧಿಕಾರಿಗಳು ಹಾಗೂ ತಾಂಡಾ ಮಂಡಳಿಯ ಅಧಿಕಾರಿಗಳಿಗೆ ಮಾತನಾಡಿ, ಚುನಾವಣೆ ಮುಗಿದ ಎರಡು ಮೂರು ತಿಂಗಳಲ್ಲಿ ಹಣ ಬಿಡುಗಡೆಗೊಳಿಸುವ ಭರವಸೆ ಸಿಕ್ಕಿರುವ ಬಗ್ಗೆ ತಿಳಿಸಿದಾಗ ಸಾರ್ವಜನಿಕರು ಮತದಾನಕ್ಕೆ ಒಪ್ಪಿದರು.ಆದರೆ, ವಾಗ್ದಾನದಂತೆ ಬಂಜಾರ ಭವನಕ್ಕೆ ಹಣ ಬಿಡುಗಡೆ ಆಗದಿದ್ದರೆ ತಹಸೀಲ್ದಾರ ಕಚೇರಿ ಎದುರು ಧರಣಿ ನಡಸುವುದಾಗಿ ಮುಖಂಡರಾದ ಪ್ರಶಾಂತ ಪೂಜಾರ ಎಚ್ಚರಿಸಿದರು.