ಭಾರತದ ಕೀರ್ತಿ ಪತಾಕೆ ಮತ್ತಷ್ಟು ಎತ್ತರ ಹಾರಲು ಬಿಜೆಪಿ ಬೆಂಬಲಿಸಿ: ರಾಘವೇಂದ್ರ

| Published : May 03 2024, 01:10 AM IST

ಭಾರತದ ಕೀರ್ತಿ ಪತಾಕೆ ಮತ್ತಷ್ಟು ಎತ್ತರ ಹಾರಲು ಬಿಜೆಪಿ ಬೆಂಬಲಿಸಿ: ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಬಿಬಿ ರಸ್ತೆಯಲ್ಲಿರುವ ಸತ್ಯ ಪ್ರಮೋದ ಕಲ್ಯಾಣ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಬ್ರಾಹ್ಮಣ ಸಮಾಜದ ವಿಶೇಷ ಸ್ನೇಹ ಮಿಲನ ಕಾರ್ಯಕ್ರಮ ಜರುಗಿತು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಇನ್ನು, ಶಿಕಾರಿಪುರ ತಾಲೂಕಿನ ಈಸೂರಿನಲ್ಲೂ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಶಿಕಾರಿಪುರ

ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಲು ಬಿಜೆಪಿಗೆ ಮತವನ್ನು ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

ನಗರದ ಬಿಬಿ ರಸ್ತೆಯಲ್ಲಿರುವ ಸತ್ಯ ಪ್ರಮೋದ ಕಲ್ಯಾಣ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಬ್ರಾಹ್ಮಣ ಸಮಾಜದ ವಿಶೇಷ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಶ್ವಗುರು ಭಾರತವನ್ನು ನಿರ್ಮಾಣಮಾಡಲು ಹೆಚ್ಚಿನ ಬೆಂಬಲದ ಅವಶ್ಯಕತೆ ಇದ್ದು, ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಸಂಸದನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರೈಲ್ವೇ ಕ್ಷೇತ್ರ, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ, ಪ್ರವಾಸೋದ್ಯಮಗಳಿಗೆ ಹೆಚ್ಚಿನ ಆದ್ಯತೆ, ಜೋಗ ಮತ್ತು ಕೊಡಚಾದ್ರಿಯಲ್ಲಿ ಕೇಬಲ್ ಕಾರ್ ಅಳವಡಿಕೆ ಹೀಗೆ ನೂರಾರು ಕಾರ್ಯಕ್ರಮಗಳು ಜನ ಸಾಮಾನ್ಯರಿಗಾಗಿ ಮಾಡಿದ್ದೇನೆ. ಇನ್ನೂ ಅನೇಕ ಯೋಜನೆಗಳು ನನ್ನ ಕಣ್ಣುಮುಂದೆ ಇವೆ. ಅವುಗಳ ಅನುಷ್ಠಾನಕ್ಕೆ ಮತ್ತೊಂದು ಅವಧಿಗೆ ಸಂಸದನಾಗುವ ಅಗತ್ಯವಿದೆ. ಆದ್ದರಿಂದ ಕ್ರಮ ಸಂಖ್ಯೆ ೨ರ ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ಭಾರೀ ಬಹುಮತದೊಂದಿಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಶ್ರೀ ವಾತ್ಸವ್, ಮಾಜಿ ಶಾಸಕ ಪ್ರಸನ್ನಕುಮಾರ್, ಮುಖಂಡರಾದ ದತ್ತಾತ್ರಿ, ನರೆಂದ್ರ ಬಾಬು, ಸುಂದರರಾಜ್, ರಾಘವೇಂದ್ರ ಉಡುಪ ಮತ್ತಿತರರು ಇದ್ದರು. ಮೋದಿ ಸತ್ತ ಮೇಲೆ ಬೇರೆ ಯಾರಿಲ್ವ?: ಕಾಗೆ ಹೇಳಿಕೆಗೆ ಸಂಸದ ರಾಘವೇಂದ್ರ ಕಿಡಿ

ಶಿವಮೊಗ್ಗ: ರಾಜು ಕಾಗೆ ಅವರು ನರೇಂದ್ರ ಮೋದಿ ಅವರು ಸತ್ತು ಹೋದ ಮೇಲೆ ಯಾರು ಇಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ.ಮೋದಿ ಅವರ ಸಾವನ್ನು ಬಯಸ್ತಿದ್ದಾರೆ, ಇದು ಕಾಗೆ ಅವರ ಮಾತು ಅನ್ನುವುದಕ್ಕಿಂತ ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತಿದೆ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರಿಗೆ ಹೆಚ್ಚಿನ ಆರೋಗ್ಯ ಶಕ್ತಿಕೊಡುವಂತೆ ಕಾರ್ಯಕರ್ತರು ದೇವಸ್ಥಾನದಲ್ಲಿ ಪೂಜೆ ಮಾಡಿಸುವಂತೆ ವಿನಂತಿ ಮಾಡ್ತೇನೆ. ಹಗುರವಾಗಿ ಮಾತನಾಡಿ ಕಾಂಗ್ರೆಸ್‌ನವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಇದು ತುರ್ತು ಪರಿಸ್ಥಿತಿಯಲ್ಲ. ಬೆದರಿಕೆ ಹಾಕುವುದು ಸರಿಯಲ್ಲ ಎಂದು ಹರಿಹಾಯ್ದರು.ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಗ್ಯಾರಂಟಿ ವಿಚಾರದಲ್ಲೂ ಬೆದರಿಕೆ ಹಾಕ್ತಿದ್ದಾರೆ. ಕೂಡಲೇ ರಾಜು ಕಾಗೆ ಕ್ಷಮೆ ಕೇಳಬೇಕು. ಅಧಿಕಾರದ ದರ್ಪದಿಂದ ಈ ರೀತಿ ಮಾತನಾಡ್ತಿದ್ದಾರೆ ರಾಜ್ಯದ ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸರಿಯಾದ ರೀತಿಯಲ್ಲಿ ಉತ್ತರ ಕೊಡುತ್ತಾರೆ ಎಂದರು.ಮೋದಿ ಮತ್ತೆ ದೇಶದ ಪ್ರಧಾನಿಯಾಗುವುದು ನಿಶ್ಚಿತ: ಸಂಸದ ಬಿ.ವೈ.ರಾಘವೇಂದ್ರ

ಶಿಕಾರಿಪುರ: ಕಾಂಗ್ರೆಸ್ ಗ್ಯಾರೆಂಟಿ ತಾತ್ಕಾಲಿಕವಾಗಿದ್ದು, ಮೋದಿ ಗ್ಯಾರಂಟಿ ಶಾಶ್ವತವಾಗಿದೆ ಮತದಾರರಿಗೆ ಈ ಬಗ್ಗೆ ಅರಿವಿದ್ದು ಪುನಃ ಮೋದಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆ ಅಂಗವಾಗಿ ತೆರೆದ ವಾಹನದಲ್ಲಿ ಮಾತನಾಡಿದ ಅವರು ತಾಲೂಕು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೊರೆತ ಅವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದು ತಾಲೂಕಿನ ಪ್ರತಿ ಹೋಬಳಿಯ ಎಲ್ಲ ಗ್ರಾಮಗಳಿಗೆ ಏತ ನೀರಾವರಿ ಯೋಜನೆ ಮೂಲಕ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ರಸ್ತೆ ಶಾಲೆ ವಸತಿ ನಿಲಯ ಮೂಲಕ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ,ಹಲವು ವಿದ್ಯುತ್ ಸ್ಟೇಷನ್ ಮೂಲಕ ವಿದ್ಯುತ್ ಸಮಸ್ಯೆ ಯಾಗದಂತೆ ನಿಗಾವಹಿಸಿದ್ದಾಗಿ ತಿಳಿಸಿದ ಅವರು ಸ್ವಾತಂತ್ರ ಹೋರಾಟದಲ್ಲಿ ದೇಶದಲ್ಲಿಯೇ ವಿಶೇಷವಾಗಿ ಗುರುತಿಸಿಕೊಂಡ ಈಸೂರು ಗ್ರಾಮದ ಸಮಗ್ರ ಅಭಿವೃದ್ದಿಯ ಜತೆಗೆ ಹುತಾತ್ಮ ಹೋರಾಟಗಾರರ ಸ್ಮಾರಕವನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದೆ ರೈಲ್ವೆ ಸಂಪರ್ಕ ಸಹಿತ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಿದ್ದು ಅಭಿವೃದ್ದಿ ಪರವಾದ ನನ್ನ ಕಾರ್ಯಗಳನ್ನು ಪ್ರೋತ್ಸಾಹಿಸಲು ಈ ಬಾರಿ ಪುನಃ ಆಯ್ಕೆಗೊಳಿಸುವಂತೆ ಮನವಿ ಮಾಡಿದರು.ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಜಿಲ್ಲಾ ಮಟ್ಟದ ಆಸ್ಪತ್ರೆಯ ಮಾನ್ಯತೆಯನ್ನು ರದ್ದುಗೊಳಿಸಲು ಜಿಲ್ಲೆಯ ಉಸ್ತುವಾರಿ ಸಚಿವ ಮಧು ರವರ ಹೋರಾಟ ಬಹು ಮುಖ್ಯ ಕಾರಣವಾಗಿದ್ದು ಇದೀಗ ಯಾವ ನೈತಿಕತೆ ಮೂಲಕ ತಾಲೂಕಿನಾದ್ಯಂತ ಮತಯಾಚಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ಚಲನಚಿತ್ರ ನಟರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚಿಸಿದ್ದಾರೆ ಕಲಾವಿದರ ಬಗ್ಗೆ ಗೌರವವಿದ್ದು ಆದರೆ ನಮ್ಮ ಪಾಲಿಗೆ ಈಸೂರಿನ ಜನತೆ,ಹುತಾತ್ಮ ಸ್ವಾತಂತ್ರ ಹೋರಾಟಗಾರರು ನಿಜ ಹಿರೋಗಳಾಗಿದ್ದಾರೆ ಎಂದು ತಿಳಿಸಿದರು.

ಮೋದಿ ಪ್ರಧಾನಿಯಾಗಿ ಕೈಗೊಂಡ ಕ್ರಾಂತಿಕಾರಕ ನಿರ್ದಾರಗಳಿಂದ ಜಗತ್ತು ಮೋದಿ ಪುನಃ ಪ್ರದಾನಿಯಾಗಬೇಕು ಎಂದು ಬಯಸಿದೆ ಅವರು ನೀಡಿದ ಗ್ಯಾರೆಂಟಿಗಳು ಶಾಶ್ವತವಾಗಿದ್ದು ಕಾಂಗ್ರೆಸ್ ಗ್ಯಾರೆಂಟಿ ಕೇವಲ ತಾತ್ಕಾಲಿಕ ದೇಶದ ಪ್ರಜ್ಞಾವಂತ ಎಲ್ಲ ಮತದಾರರಿಗೆ ಈ ಬಗ್ಗೆ ಸ್ಪಷ್ಟ ಅರಿವಿದ್ದು ಪುನಃ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಚುನಾವಣೆ ಸಂದರ್ಬದಲ್ಲಿ ಅಪಪ್ರಚಾರ ವಿರೋಧಿಗಳ ಕಟ್ಟಕಡೆಯ ಅಸ್ತ್ರವಾಗಿದ್ದು ಈ ದಿಸೆಯಲ್ಲಿ ಕಾಂಗ್ರೆಸ್ ನವರ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳದಂತೆ ಸಲಹೆ ನೀಡಿದರು.ಈ ಸಂದರ್ಬದಲ್ಲಿ ವಿಪ ಸದಸ್ಯೆ,ನಟಿ ತಾರಾ ಅನುರಾಧ ಮುಖಂಡ ಮಹೇಶ್ ಹುಲ್ಮಾರ್ ಮಾತನಾಡಿದರು.ವಿಪ ಮಾಜಿ ಸದಸ್ಯ ರುದ್ರೇಗೌಡ,ತೇಜಸ್ವಿನಿ ರಾಘವೇಂದ್ರ,ಜಿ.ಪಂ ಮಾಜಿ ಸದಸ್ಯೆ ಆರುಂಧತಿ ರಾಜೇಶ್ ಮುಖಂಡ ಪರಮೇಶ್ವರಪ್ಪ ಹಿತ್ತಲ,ಚುರ್ಚುಗುಂಡಿ ಶಶಿಧರ,ರುದ್ರಮುನಿ,ವೀರೇಂದ್ರ ಪಾಟೀಲ್,ನಾಗರಾಜ ಕೊರಲಹಳ್ಳಿ, ತಾ.ಜೆಡಿಎಸ್ ಅಧ್ಯಕ್ಷ ಬೆಂಕಿ ಯೋಗೀಶ್ ಮತ್ತಿತರರು ಹಾಜರಿದ್ದರು.