ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಂಟ್ವಾಳ ತಾಲೂಕಿಗೆ ಶೇ.89.79 ಫಲಿತಾಂಶ

| Published : May 10 2024, 01:32 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಂಟ್ವಾಳ ತಾಲೂಕಿಗೆ ಶೇ.89.79 ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಅನುದಾನಿತ ಪ್ರೌಢಶಾಲೆಗಳ ಪೈಕಿ ಅಳಿಕೆ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಪುಣಚದ ಶ್ರೀದೇವಿ ಪ್ರೌಢಶಾಲೆ, ತುಂಬೆ ಪ್ರೌಢಶಾಲೆ, ಕಾರ್ಮೆಲ್ ಕಾಲೇಜು ಗರ್ಲ್ಸ್ ಹೈಸ್ಕೂಲ್ ಶೇ.100 ಫಲಿತಾಶ ಸಾಧಿಸಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಶೇ.89.79 ಫಲಿತಾಂಶ ದಾಖಲಿಸಿದ್ದು, ತಾಲೂಕಿನ 17 ಸರ್ಕಾರಿ ಪ್ರೌಢಶಾಲೆಗಳು, 4 ಅನುದಾನಿತ ಪ್ರೌಢಶಾಲೆಗಳು ಹಾಗೂ 26 ಖಾಸಗಿ ಪ್ರೌಢಶಾಲೆಗಳು ಸೇರಿದಂತೆ 47 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ.

ಬಿಳಿಯೂರು ಸರ್ಕಾರಿ ಪ್ರೌಢಶಾಲೆ, ಕಾವಳಕಟ್ಟೆ ಪ್ರೌಢಶಾಲೆ, ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾವಳಪಡೂರು ಸರ್ಕಾರಿ ಪ್ರೌಢಶಾಲೆ, ಕೊಡ್ಮಾಣ್ ಸರ್ಕಾರಿ ಪ್ರೌಢಶಾಲೆ, ನಾರ್ಶಾಮೈದಾನ ಸರ್ಕಾರಿ ಪ್ರೌಢಶಾಲೆ, ಮಣಿನಾಲ್ಕೂರು ಸರ್ಕಾರಿ ಪ್ರೌಢಶಾಲೆ, ಕಾಲರಕೋಡಿ ಸರ್ಕಾರಿ ಪ್ರೌಢಶಾಲೆ(ಆರ್ ಎಂ ಎಸ್ ಎ), ನಾವೂರು ಸರ್ಕಾರಿ ಪ್ರೌಢಶಾಲೆ, ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆ, ನೈನಾಡು ಸರ್ಕಾರಿ ಪ್ರೌಢಶಾಲೆ, ನಂದಾವರ ಸರ್ಕಾರಿ ಪ್ರೌಢಶಾಲೆ, ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆ, ಸರಪಾಡಿ ಸರ್ಕಾರಿ ಪ್ರೌಢಶಾಲೆ, ಬೋಳಂತಿಮೊಗರು ಸರ್ಕಾರಿ ಪ್ರೌಢಶಾಲೆ, ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆ, ನೇತಾಜಿ ಸುಭಾಶ್ಚಂದ್ರ ಭೋಸ್ ಸರ್ಕಾರಿ ಪ್ರೌಢಶಾಲೆ ಶೇಕಡಾ ನೂರು ಫಲಿತಾಂಶವನ್ನು ದಾಖಲಿಸಿದೆ.

ಅನುದಾನಿತ ಪ್ರೌಢಶಾಲೆಗಳ ಪೈಕಿ ಅಳಿಕೆ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಪುಣಚದ ಶ್ರೀದೇವಿ ಪ್ರೌಢಶಾಲೆ, ತುಂಬೆ ಪ್ರೌಢಶಾಲೆ, ಕಾರ್ಮೆಲ್ ಕಾಲೇಜು ಗರ್ಲ್ಸ್ ಹೈಸ್ಕೂಲ್ ಶೇ.100 ಫಲಿತಾಶ ಸಾಧಿಸಿದೆ.ಅನುದಾನ ರಹಿತ ಖಾಸಗಿ‌ ಪ್ರೌಢಶಾಲೆಗಳ ಪೈಕಿ, ಲೊರೆಟ್ಟೋ‌‌ ಇಂಗ್ಲೀಷ್ ಮೀಡಿಯಂ, ಅಮ್ಟೂರು ದೇವಮಾತ ಇಂಗ್ಲೀಷ್ ಮೀಡಿಯಂ‌ ಸ್ಕೂಲ್, ಓಂ‌ಜನಹಿತಾಯ ಇಂಗ್ಲೀಷ್ ಮೀಡಿಯಂ‌ ಗುಡ್ಡೆಯಂಗಡಿ, ಕಲ್ಲಡ್ಕ ಶ್ರೀರಾಮ ಸೆಕೆಂಡರಿ ಸ್ಕೂಲ್, ಸೈಂಟ್ಸ್ ಜಾನ್ ಹೈಸ್ಕೂಲ್, ಸೈಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ‌ ಸ್ಕೂಲ್, ಗೋಳ್ತಮಜಲು ಜೆಮ್ ಇಂಗ್ಲೀಷ್ ಮೀಡಿಯಂ‌ ಸ್ಕೂಲ್, ದಾರುಲ್ ಇರ್ಷಾದ್ ಬಾಯ್ಸ್ ಹೈಸ್ಕೂಲ್, ಪಡುಕೋಡಿ ರಝಾನಗರದ ‌ಬುರೂಜ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮುಡಿಪು ಕೈರಂಗಳ ಜೀನತ್ ಇಂಗ್ಲೀಷ್‌ ಮೀಡಿಯಂ ಸ್ಕೂಲ್, ಕನ್ಯಾನದ ಶ್ರೀ ಸರಸ್ವತಿ‌ ವಿದ್ಯಾಲಯ, ಕುಳ ಗ್ರಾಮದ ಗುಣ ಶ್ರೀ ಇಂಗ್ಲೀಷ್‌ ಮೀಡಿಯಂ ಶಾಲೆ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ಕುರ್ನಾಡು ಜ್ಞಾನದೀಪ ಆಂಗ್ಲಮಾಧ್ಯಮ ಇಂಗ್ಲೀಷ್ ಮೀಡಿಯಂ ಸ್ಕೂಲ್, ಫಜೀರು ಆವೆಮರಿಯಾ ಇಂಗ್ಲೀಷ್ ಮೀಡಿಯಂ‌ ಸ್ಕೂಲ್, ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಇಂಗ್ಲೀಷ್ ಮೀಡಿಯಂ , ತುಂಬೆ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಎಲ್ ಸಿಆರ್ ಇಂಡಿಯನ್ ಹೈಸ್ಕೂಲ್ ಕಕ್ಕೆಪದವು, ವಿಟ್ಲದ ವಿಠ್ಠಲ್ ಜೇಸಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿಟ್ಲದ ಸೈಂಟ್ ರೀಟಾ ಇಂಗ್ಲೀಷ್ ಮೀಡಿಯಂ‌ ಸ್ಕೂಲ್, ವಿಟ್ಲದ ಹೊರಿಜನ್ ಪಬ್ಲಿಕ್ ಸ್ಕೂಲ್, ಬಂಟ್ವಾಳ ಎಸ್ ವಿ ಎಸ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆ, ಅಗ್ರಾರ್ ಹೋಲಿ ಸವಿಯರ್ ಇಂಗ್ಲೀಷ್ ಮೀಡಿಯಂ‌ಪ್ರೌಢಶಾಲೆ, ಎಸ್‌ವಿಎಸ್‌ ದೇವಳ ಪ್ರೌಢಶಾಲೆ, ತೌಹೀದ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ ಬಂಟ್ವಾಳ ಮತ್ತು ಪಾಣೆಮಂಗಳೂರು ಎಸ್‌.ಎಲ್.ಎನ್.ಪಿ‌. ವಿದ್ಯಾಲಯ ಶೇಕಡಾ 100 ಫಲಿತಾಂಶ ದಾಖಲಿಸಿ ತಾಲೂಕಿನ‌ ಕೀರ್ತಿಗೆ ತಂದಿವೆ.

ಅಳಿಕೆ ಸತ್ಯಸಾಯಿ ಶಾಲೆಯ ಗೌತಮ್‌ ಬಂಟ್ವಾಳ ತಾಲೂಕಿಗೆ ಪ್ರಥಮಬಂಟ್ವಾಳ: ಅಳಿಕೆ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ವಿದ್ಯಾರ್ಥಿ ಗೌತಮ್ ಎಂ. 621 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾನೆ. ವಿಟ್ಲದ‌ ವಿಠಲ್ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮನೋನ್ಮಯಿ ಕೆ. ಹಾಗೂ ಎಸ್‌ವಿಎಸ್‌ ಟೆಂಪಲ್ ಸ್ಕೂಲ್‌ನ ಅಭಿರಾಮ್ ವಿ. ಭಟ್ 620 ಅಂಕಗಳಿಸಿ‌ ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.ಬಂಟ್ವಾಳ ಎಸ್‌ವಿಎಸ್‌ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಅನ್ವಿತ್ ಎಸ್. 619 ಅಂಕಗಳಿಸಿ ತೃತೀಯ ಸ್ಥಾನಿಯಾಗಿದ್ದಾರೆ. ಉಳಿದಂತೆ ಅಳಿಕೆ ಸತ್ಯಸಾಯಿಯ ವಿನೀತ್ ನೀಲ್‌ಕಂಠ್ ಚವನ್ 618, ಮೊಡಂಕಾಪು ಇನ್ಫೆಂಟ್ ಜೇಸಸ್‌ನ ತಸ್ನೀಂ ಎಸ್‌.ಎಂ. 618, ಸತ್ಯ ಸಾಯಿ ಲೋಕಸೇವಾದ ಕಾರ್ತಿಕ್ ಮಹೇಶ್ ಬಡಿಗೇರ್ 617, ಆರ್ಯನ್‌ಪ್ರಸಾದ್ ಗೌಡ 615, ಕಡೇಶ್ವಾಲ್ಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮನ್ಮಿತಾ 614, ಕಲ್ಲಡ್ಕ ಶ್ರೀರಾಮ ಹೈಸ್ಕೂಲ್ ನ ಭೂಷಣ್ 614 ಅಂಕ ಗಳಿಸಿ ತಾಲೂಕಿನಲ್ಲಿ ಟಾಪ್ ಟೆನ್ ಸ್ಥಾನದಲ್ಲಿದ್ದಾರೆ.

ಬಡಗಿಯ ಪುತ್ರಿ ಮನ್ವಿತಾ ಸರ್ಕಾರಿ ಶಾಲೆಗಳ ಪೈಕಿ ಬಂಟ್ವಾಳ ತಾಲೂಕಿಗೆ ಪ್ರಥಮ

ಬಂಟ್ವಾಳ: ‘ನಾನು 613 ಅಂಕದ ನಿರೀಕ್ಷೆಯಲ್ಲಿದ್ದೆ, 614 ಅಂಕ ಸಿಕ್ಕಿದೆ ಇದು ನನಗೆ ತುಂಬಾ ಖುಷಿ ಕೊಟ್ಟಿದೆ’ ಎನ್ನುತ್ತಾಳೆ ಕಡೇಶ್ವಾಲ್ಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮನ್ಮಿತಾ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುವ ಮನ್ಮಿತಾ ಬಡಕುಟುಂಬದ ಹುಡುಗಿ. ಕಡೇಶ್ವಾಲ್ಯ ಗ್ರಾಮದ ಪುಣ್ಕೆದಡಿ ನಿವಾಸಿ ವಸಂತ ಯು. ಹಾಗೂ ಚಿತ್ರಾವತಿ ದಂಪತಿ ಪುತ್ರಿಯಾಗಿರುವ ಮನ್ಮಿತಾಳ ಸಾಧನೆ ಊರವರಿಗೂ ಖುಷಿ ತಂದಿದೆ. ತಂದೆ ವಸಂತ ಬಡಗಿ ಕೆಲಸ ಮಾಡಿಕೊಂಡಿದ್ದರೆ, ತಾಯಿ ಚಿತ್ರಾವತಿ ಗೃಹಿಣಿಯಾಗಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆನ್ನುವ ಸಂಕಲ್ಪ ತೊಟ್ಟಿರುವ ಈ ದಂಪತಿಯ ಹಿರಿಮಗಳು ಜನ್ಮಿತಾ ಪುತ್ತೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಕಿರಿಮಗಳು ಮನ್ಮಿತಾಳ ಸಾಧನೆ ಕುಟುಂಬಕ್ಕೆ ಖುಷಿ ತಂದಿದೆ.

ಮನೆಮಂದಿ ಹಾಗೂ ಶಾಲಾ ಶಿಕ್ಷಕರು‌ ನೀಡಿದ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುವ ಮನ್ಮಿತಾ ಯಾವುದೇ ಟ್ಯೂಷನ್ ಪಡೆದಿಲ್ಲ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಶ್ರಮವಹಿಸಿ ಓದುತ್ತಿದ್ದೆ, ಹಾಗಾಗಿ ಖುಷಿಯ ಪ್ರತಿಫಲ ಸಿಕ್ಕಿದೆ ಎಂದು ಮನ್ಮಿತಾ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾಳೆ.