ಇಂದಿನಿಂದ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ಆರಂಭ

| Published : Apr 27 2024, 01:01 AM IST

ಇಂದಿನಿಂದ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಶ್ರೀರಾಮಮಂದಿರದಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಏ.27 ರಿಂದ ಮೇ.3ರವರೆಗೆ ನಡೆಯಲಿದೆ.

ತಿಪಟೂರು: ನಗರದ ಶ್ರೀರಾಮಮಂದಿರದಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಏ.27 ರಿಂದ ಮೇ.3ರವರೆಗೆ ನಡೆಯಲಿದೆ. ಏ.27ರಂದು ದೇವನಾಂದಿ, ಮಹಾಸಂಕಲ್ಪ, ಕಳಸ ಸ್ಥಾಪನೆ, ಮಹಾಸುದರ್ಶನ ಹೋಮ, ಮಹಾಮಂಗಳಾರತಿ ನಡೆಯಲಿದೆ. ಏ. 28ರಂದು ಸಹಸ್ರ ಮೋದಕ ಶ್ರೀ ಮಹಾಗಣಪತಿ ಪೂಜೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ. ಏ. 29ರಂದು ಶ್ರೀ ಆಂಜನೇಯಸ್ವಾಮಿ ಮೂಲಮಂತ್ರ ಹೋಮ, ಪವಮಾನ ಹೋಮ, ಸಂಜೆ ಕೌಸ್ತುಭ ಭಜನಾ ಮಂಡಳಿಯಿಂದ ದೇವರ ನಾಮಗಳ ಪ್ರಸ್ತುತಿ ಜರುಗುತ್ತದೆ. ಏ.30ರಂದು ಶ್ರೀ ಚಂಡಿಕಾ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಮೇ.1ರಂದು ಶ್ರೀ ರುದ್ರಹೋಮ, ತೀರ್ಥಪ್ರಸಾದ ವಿನಿಯೋಗ, ಮೇ.2ರಂದು ಶ್ರೀರಾಮ ತಾರಕ ಹೋಮ, ಸಾಮ್ರಾಜ್ಯ ಪಟ್ಟಾಭಿಷೇಕ ಮಧ್ಯಾಹ್ನ ಶ್ರೀ ವಿಜಯ ಮಾರುತಿ ಸ್ವಾಮೀಜಿ ಅವರಿಂದ ಮಹಾಕುಂಭಾಭಿಷೇಕ, ಮಹಾಮಂಗಳಾರತಿ, ಸಂಜೆ ನಗರದ ರಾಜ ಬೀದಿಗಳಲ್ಲಿ ಶ್ರೀ ಸೀತಾರಾಮಚಂದ್ರರ ಮೂಲ ದೇವರ ಉತ್ಸವವು ನಡೆಯಲಿದೆ. ಮೇ.3ರಂದು ಅವಭೃತೋತ್ಸವ ಮಹಾಮಂಗಳಾರತಿ ಜರುಗಲಿದ್ದು, ಭಕ್ತಾದಿಗಳು ಭಾಗವಹಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ತಿಳಿಸಿದೆ.