ಮತ ಚಲಾಯಿಸಿ ಮಾದರಿಯಾದ ಶತಾಯುಷಿ ಶಿವಮ್ಮ

| Published : May 09 2024, 12:46 AM IST

ಸಾರಾಂಶ

1952 ರಿಂದ ತಪ್ಪದೇ ಮತಗಟ್ಟೆಗೆ ಆಗಮಿಸಿ ಮತ ಚಾಲಾಯಿಸುವ ವೃದ್ಧೆ

ಕನ್ನಡಪ್ರಭ ವಾರ್ತೆ ಶಹಾಪುರ

ಮತ ಚಲಾಯಿಸಲು ಹಿಂದೇಟು ಹಾಕುತ್ತಿರುವ ಮತದಾರರ ನಡುವೆ ಶತಾಯುಷಿಯೊಬ್ಬಳು ಮತದಾನ ಕೇಂದ್ರಕ್ಕೆ ನಡೆದುಕೊಂಡು ಬಂದು ಮತದಾನದಿಂದ ದೂರ ಉಳಿಯುವ ಮತದಾರರಿಗೆ ಮತದಾನದ ಮಹತ್ವ ತೋರಿಸಿಕೊಟ್ಟಿದ್ದಾರೆ. ತಾಲೂಕಿನ ಸಗರ ಗ್ರಾಮದ ಶತಾಯುಷಿ ಶಿವಮ್ಮ ಗೋಪಾಲಪ್ಪ ಇವರು 1952 ರಿಂದಲೂ ತಪ್ಪದೇ ಎಲ್ಲಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಚುನಾವಣೆ ಆಯೋಗ 80 ವರ್ಷದ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನರಿಗೆ ನಿಯಮ 12ರಡಿ ಮುಖಾಂತರ ಮನೆಯಲ್ಲಿ ಮತದಾನ ಕಲ್ಪಿಸಿದ್ದಾದರೂ ಮನೆಯಲ್ಲಿ ಮತ ಚಲಾಯಿಸದೆ ಮತದಾನ ಕೇಂದ್ರಕ್ಕೆ ನಡೆದುಕೊಂಡು ಬಂದು ಮತ ಚಲಾಯಿಸಿರುವ ಶಿವಮ್ಮಳ ಜವಾಬ್ದಾರಿಯ ಬಗ್ಗೆ ಗ್ರಾಮದ ಜನತೆಗೆ ಹೆಮ್ಮೆಯಿದೆ.

ನನಗೆ ಹೆರಿಗೆಯಾಗಿ ಆಗ ಮೂರು ದಿನ ಆಗಿತ್ತು. ಆವಾಗಲೂ ಮತದಾನದಿಂದ ದೂರ ಉಳಿಯದೆ ಮತ ಚಲಾಯಿಸಿ ಇರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಇಂಥ ಶತಾಯುಷಿಗಳು ಯಾವುದೇ ಚುನಾವಣೆ ರಾಯಭಾರಿಗಳಿಗಿಂತಲೂ ಕಡಿಮೆ ಇಲ್ಲ. ಯುವ ಮತದಾರರಿಗೆ ಮತ್ತು ಮತದಾನ ದಿಂದ ದೂರ ಉಳಿಯುವವರಿಗೆ ಅನಕ್ಷರತೆ ಶಿವಮ್ಮ ಮಾದರಿಯಾಗಿದ್ದಾರೆ.

----

8ವೈಡಿಆರ್20:

ಶಹಾಪುರ ತಾಲೂಕಿನ ಸಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯೊಂದರಲ್ಲಿ ಶತಾಯುಷಿ ಶಿವಮ್ಮ ಮತ ಚಲಾಯಿಸಿದರು.