ರಸ್ತೆ ಮೇಲೆ ಹರಿದ ಚರಂಡಿ ನೀರು

| Published : May 09 2024, 01:00 AM IST

ಸಾರಾಂಶ

ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ, ಕಾರಣ ಅವೈಜ್ಞಾನಿಕ ಚರಂಡಿಗಳ ನಿರ್ಮಾಣ ಇದರಿಂದ ಚರಂಡಿಗಳಲ್ಲಿ ಹರಿಯುವ ಮಳೆ ನೀರು ರಸ್ತೆಗಳಲ್ಲಿ ಹರಿದು ರಸ್ತೆಗಳು ಕೆಸರುಮಯವಾಗಿವೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ನಗರದಲ್ಲಿ ಕೋಟ್ಯಂತರ ರು.ಗಳ ವೆಚ್ಚದಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಮಳೆ ಬಂದರೆ ಮಳೆ ನೀರು ಚರಂಡಿಗಳಲ್ಲಿ ಹರಿಯದೆ ರಸ್ತೆಗಳ ಮೇಲೆ ಹರಿಯುತ್ತದೆ. ಇದಕ್ಕೆ ಅವೈಜ್ಞಾನಿಕ ಚರಂಡಿಗಳ ನಿರ್ಮಾಣವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಸೋಮವಾರ ರಾತ್ರಿ ೮ ಗಂಟೆಗೆ ಪ್ರಾರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿಯುತು. ಇದರಿಂದ ಸಾರ್ವಜನಿಕರು ರಸ್ತೆ ಯಾವುದು, ಹಳ್ಳ ಯಾವುದು ಎಂದು ವಾಹನಗ ಸವಾರರಿಗೆ ತಿಳಿಯದೆ ಎದ್ದು ಬಿದ್ದಿರುವ ಹತ್ತಾರು ಪ್ರಕರಣಗಳು ನಡೆದಿವೆ.

ಅವೈಜ್ಞಾನಿಕ ಕಾಮಗಾರಿ ಕಾರಣಮುಖ್ಯ ರಸ್ತೆಗಳ ಪಕ್ಕದಲ್ಲಿ ಚರಂಡಿಗಳ ನಿರ್ಮಾಣ ಮಾಡಿರುವುದು ಮಳೆ ನೀರು ಹರಿಯಲು, ಆದರೆ ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ, ಕಾರಣ ಅವೈಜ್ಞಾನಿಕ ಚರಂಡಿಗಳ ನಿರ್ಮಾಣ ಇದರಿಂದ ಚರಂಡಿಗಳಲ್ಲಿ ಹರಿಯುವ ಮಳೆ ನೀರು ರಸ್ತೆಗಳಲ್ಲಿ ಹರಿದು ರಸ್ತೆಗಳು ಕೆಸರುಮಯವಾಗಿವೆ.ಕೆಎಸ್‌ಆರ್‌ಟಿ ಡಿಪೋ ಮುಂಭಾಗದ ರಸ್ತೆಯಲ್ಲಿ ಚರಂಡಿ ಇದ್ದರೂ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದರಿಂದ ರಸ್ತೆಯಲ್ಲಿ ಕೆಸರು ತುಂಬಿಕೊಂಡು ರಸ್ತೆಯಲ್ಲಿ ಓಡಾಟ ಮಾಡುವ ಪಾದಚಾರಿಗಳಿಗೆ ತುಂಬಾ ತೊಂದರೆ ಉಂಟಾಗಿದೆ.

ರಸ್ತೆಯನ್ನು ಆವರಿಸಿದ ಮಣ್ಣು

ಮಂಗಳವಾರ ಬೆಳಗ್ಗೆ ಉರಿಗಾಂ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ತುಂಬಾ ಮಣ್ಣು ತುಂಬಿಕೊಂಡ ಕಾರಣ ನಗರಸಭೆ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಸಾರ್ವಜನಿಕರು ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪೌರಾಯುಕ್ತ ಪವನ್‌ಕುಮಾರ್ ತಿಳಿಸಿದರು.ನಗರದ ಅಂಡ್ರಸನ್‌ಪೇಟೆ, ರಾಬರ್ಟ್‌ಸನ್‌ಪೆಟೆ, ಪಿಚ್ಚರ್ಡ್‌ರಸ್ತೆ, ಬೌರಿಲಾಲ್ ಪೇಟೆ, ಉರಿಗಾಂಪೇಟೆ, ಗೌತಮ್ ನಗರ ಉರಿಗಾಂ ರೇಲ್ವೆ ನಿಲ್ದಾಣ, ಆಶೋಕ ನಗರದ ರಸ್ತೆ ಸೇರಿದಂತೆ ನಗರದ ಮುಖ್ಯ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳಲ್ಲಿ ಮಳೆ ನೀರು ಹರಿಯುವಂತೆ ಕ್ರಮ ವಹಿಸಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.