ಲೋಕಾಪುರ ವಿವಿಧಡೆ ಶಾಂತಿಯುತ ಮತದಾನ

| Published : May 09 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರಬಾಗಲಕೋಟೆ ಲೋಕಸಭೆ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಪಟ್ಟಣದಲ್ಲಿ ಶಾಂತಿಯುತ ಶೇ.72ರಷ್ಟು ಮತದಾನವಾಗಿದೆ.ಬೆಳಗ್ಗೆ 7 ಗಂಟೆಗೆ ಮತದಾನ ಆರಂಭದ ವೇಳೆ ಎಲ್ಲೆಡೆ ಚುರುಕಿನಿಂದ ಮತದಾನ ನಡೆಯಿತು. ರಣ ಬಿಸಿಲು ಲೆಕ್ಕಿಸದೇ ಮತದಾರರು ಸರದಿಯಲ್ಲಿ ನಿಂತು ಹಕ್ಕನ್ನು ಚಲಾಯಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರಬಾಗಲಕೋಟೆ ಲೋಕಸಭೆ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಪಟ್ಟಣದಲ್ಲಿ ಶಾಂತಿಯುತ ಶೇ.72ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭದ ವೇಳೆ ಎಲ್ಲೆಡೆ ಚುರುಕಿನಿಂದ ಮತದಾನ ನಡೆಯಿತು. ರಣ ಬಿಸಿಲು ಲೆಕ್ಕಿಸದೇ ಮತದಾರರು ಸರದಿಯಲ್ಲಿ ನಿಂತು ಹಕ್ಕನ್ನು ಚಲಾಯಿಸಿದರು. ಮತದಾನವಾದ ವಿವರ: ಲೋಕಾಪುರ ಶೇ.೭೨, ಜಾಲಿಕಟ್ಟಿ ಬಿ.ಕೆ & ಕೆ.ಡಿ. ಶೇ.೭೭ ನಾಗಣಾಪುರ ಶೇ. ೭೬, ಚೌಡಾಪುರ ಶೇ.೮೩, ಕನಸಗೇರಿ ೯೨, ಮಲ್ಲಾಪುರ ಪಿ.ಎಲ್. ಶೇ.೮೬, ಲಕ್ಷಾನಟ್ಟಿ ಶೇ.೮೨, ದಾದನಟ್ಟಿ ಶೇ.೭೭ ಮತದಾನವಾಗಿದೆ.

ಗಮನ ಸೆಳೆದ ಮತಗಟ್ಟೆಗಳು : ಲೋಕಸಭಾ ಚುನಾವಣೆಗೆ ಹೆಚ್ಚಿನ ಮತದಾನವಾಗಲು ಜಿಲ್ಲಾಡಳಿತ ವಿವಿಧ ಮತಗಟ್ಟೆಗಳನ್ನು ಸಖಿ ಮತಗಟ್ಟೆ ಸಂಖ್ಯೆ ೨೦೬ ಸಖಿ ಮತಟ್ಟೆಯನ್ನಾಗಿ ಪರಿವರ್ತಿಸಿ ಪಿಂಕ್ ವಸ್ತ್ರಗಳಿಂದ ಮತದಾರನ್ನು ಗಮನ ಸೆಳೆದವು. ಮತಗಟ್ಟೆ ಸಂಖ್ಯೆ ೧೯೭ ಯುತ್ ಮತಗಟ್ಟಿಯನ್ನಾಗಿ ಪರಿವರ್ತಿಸಿದರು. ಜಿಲ್ಲಾಡಳಿತ ಹಾಗೂ ಸ್ಥಳೀಯ ಪಟ್ಟಣ ಪಂಚಾಯತಿ ಮಾಡಿದ್ದವು. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತಚಲಾವಣೆ ಮಾಡಿದ್ದು ಕಂಡು ಬಂತು.