ಕಿತ್ತೂರಿನಲ್ಲಿ ಶಾಂತಿಯುತ ಮತದಾನ

| Published : May 08 2024, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು: ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಗೆ ಒಳಪಡುವ ಕಿತ್ತೂರು ವಿಧಾನ ಸಭಾ ಮತಕ್ಷೇತ್ರದೆಲ್ಲೆಡೆಯೂ ಶೇ.76.25 ರಷ್ಟು ಮತದಾನ ನಡೆದಿದ್ದು, ಎಲ್ಲಡೆಯೂ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಗೆ ಒಳಪಡುವ ಕಿತ್ತೂರು ವಿಧಾನ ಸಭಾ ಮತಕ್ಷೇತ್ರದೆಲ್ಲೆಡೆಯೂ ಶೇ.76.25 ರಷ್ಟು ಮತದಾನ ನಡೆದಿದ್ದು, ಎಲ್ಲಡೆಯೂ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸಗೌಡ ಹೇಳಿದರು.

ಒಟ್ಟು 230 ಮತಗಟ್ಟೆಗಳಲ್ಲಿಯೂ ಮತದಾನ ಶಾಂತರೀತಿಯಿಂದ ನಡೆದಿದ್ದೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಅಲ್ಲದೇ ಮತದಾರರು ಉತ್ಸುಕರಾಗಿ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.

ಮತದಾನದ ದಿನವಾದ ಮಂಗಳವಾರ ಬೆಳಗ್ಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮತದಾನ ಮಾಡಿದರು‌. ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ರೋಹೀಣಿ ಪಾಟೀಲ ತಮ್ಮ ಸ್ವಗ್ರಾಮವಾದ ನೇಗಿನಹಾಳ ಗ್ರಾಮದಲ್ಲಿ ಮತದಾನ ಮಾಡಿದರೇ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಮಂಜುಳಾ ದೊಡ್ಡಗೌಡರ ಬೈಲಹೊಂಗಲ ತಾಲೂಕಿನ ಮದನಬಾವಿಯಲ್ಲಿ ಮತದಾನ ಮಾಡಿದರು. ಉರಿ ಬಿಸಿಲನ್ನು ಲೆಕ್ಕಿಸದೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಎಲ್ಲಡೆಯೂ ಕಂಡು ಬಂದಿತು. ಮಹಿಳಾ ಮತದಾರರು ಹಾಗೂ ವಯೋವೃದ್ಧರು ಆಟೋರಿಕ್ಷಾಗಳಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಕಂಡು ಬಂದಿತು. ಇನ್ನೂಳಿದಂತೆ ಆಶಾ ಕಾರ್ಯಕರ್ತರು ಅಚ್ಚುಕಟ್ಟಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಿದರು. ಸೂಕ್ತ ಪೊಲೀಸ್ ಬಂದೂಬಸ್ತ ಕೂಡ ಒದಗಿಸಲಾಗಿತ್ತು. ಲೋಕಸಭೆಗೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳ ಭವಿಷ್ಯವು ಮತಯಂತ್ರದಲ್ಲಿ ಭದ್ರವಾಗಿದೆ. ಉತ್ತರ ಕನ್ನಡ ಲೋಕಸಭೆಗೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳ ಭವಿಷ್ಯ ಹೊತ್ತಿರುವ ಎಲ್ಲ ಮತಯಂತ್ರಗಳು ಕುಮಟಾ ಪಟ್ಟಣಕ್ಕೆ ತೆರಳಿದವು.

------------------