ಅವನತಿ ಅಂಚಿನಲ್ಲಿವೆ ಪುರಸಭಾ ವಸತಿ ಗೃಹಗಳು

| Published : May 08 2024, 01:13 AM IST

ಅವನತಿ ಅಂಚಿನಲ್ಲಿವೆ ಪುರಸಭಾ ವಸತಿ ಗೃಹಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ನೌಕರರ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆ ರೂಪಿಸಿ ಜಾರಿಗೆ ತರುತ್ತದೆ. ಆದರೆ ಅದು ಅಧಿಕಾರಿಗಳ ನಿರ್ಲಕ್ಷದಿಂದ ಅಧೋಗತಿ ತಲುಪುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿವೆ ಪುರಸಭಾ ವಸತಿಗೃಹಗಳು.

ಬೀಳುವ ಹಂತ ತಲುಪಿವೆ ಪುರಸಭಾ ವಸತಿ ಗೃಹಗಳು । ಕಣ್ಮುಚ್ಚಿ ಕುಳಿತ ಅಧಿಕಾರಿಗಳು; ದುಸ್ಥಿತಿಯಲ್ಲಿವೆ ಒಟ್ಟು 18 ಕ್ವಾಟರಸ್‌ಳುಕನ್ನಡಪ್ರಭ ವಾರ್ತೆ, ಬೀರೂರು.ಬೀರೂರು ಎನ್.ಗಿರೀಶ್. ಸರ್ಕಾರಿ ನೌಕರರ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆ ರೂಪಿಸಿ ಜಾರಿಗೆ ತರುತ್ತದೆ. ಆದರೆ ಅದು ಅಧಿಕಾರಿಗಳ ನಿರ್ಲಕ್ಷದಿಂದ ಅಧೋಗತಿ ತಲುಪುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿವೆ ಪುರಸಭಾ ವಸತಿಗೃಹಗಳು.ಸ್ವಾತಂತ್ರ ನಂತರ 1954ರಲ್ಲಿ ಬೀರೂರು ಪುರಸಭೆ ಅಸ್ಥಿತ್ವಕ್ಕೆ ಬಂದಿತ್ತು. 1956ರಲ್ಲಿ ಎಂ.ಮಲ್ಲಪ್ಪನವರು ಪುರಸಭಾ ಅಧ್ಯಕ್ಷರಾದ ಸಂದರ್ಭದಲ್ಲಿ ಪುರಸಭಾ ನೌಕರರ ಅನುಕೂಲಕ್ಕಾಗಿ ಪಟ್ಟಣದ ಹೃದಯಭಾಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪಕ್ಕದಲ್ಲಿ 8 ವಸತಿ ಗೃಹಗಳು ಹಾಗೂ ರೈಲ್ವೇ ಸ್ಟೇಷನ್ ರಸ್ತೆ ಕ್ರಿಸ್ತಶರಣ ಶಾಲೆ ಮುಂಭಾಗ 10 ವಸತಿ ಗೃಹಗಳನ್ನು ಕಟ್ಟಿಸಿದ್ದರು.ಈ ವಸತಿ ಗೃಹಗಳು ನಿರ್ಮಾಣವಾಗಿ 68 ವರ್ಷ ತುಂಬಿದ್ದು, ಕೆಲವು ಪಾಳು ಬಿದ್ದಿದ್ದರೇ ಇನ್ನು ಕೆಲವು ಸೋರುವ ಸ್ಥಿತಿಯಲ್ಲಿದ್ದರೆ, ಉಳಿದವು ಯಾವಾಗ ಬೀಳುತ್ತವೆಯೋ ಎಂಬಂತಿವೆ. ನೆಲ ಬಿರುಕು ಬಿಟ್ಟು, ಕುಸಿಯುತ್ತಿವೆ. ಸದ್ಯ ಈ ವಸತಿಗೃಹಗಳಲ್ಲಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಕೆಲವು ಅಧಿಕಾರಿಗಳು, ಪೌರಕಾರ್ಮಿಕರು ಮಾತ್ರ ವಾಸವಿದ್ದು, ಅವರು ಈ ಕಟ್ಟಡಗಳ ಸ್ಥಿತಿ-ಗತಿ ನೋಡಿ, ಹಿರಿಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೇನಾದರೂ ಆದರೆ ನಾವೇ ಹೊಣೆ ಎನ್ನುವ ಪರಿಸ್ಥಿತಿ ಇವರದ್ದಾಗಿದೆ.ಇನ್ನೊಂದೆಡೆ ಇಲ್ಲಿನ ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವಸತಿಗೃಹಗಳಿಲ್ಲದೆ ಚಿಕ್ಕಮಗಳೂರು, ಶಿವಮೊಗ್ಗ, ಎನ್.ಆರ್.ಪುರ ಮತ್ತಿತರೆಡೆಯಿಂದ ಇಲ್ಲಿಗೆ ಪ್ರತಿನಿತ್ಯ ಬಂದು ಇಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಕೆಲವೊಮ್ಮೆ ರಾಷ್ಟ್ರೀಯ ಹಬ್ಬಗಳು ಮತ್ತು ಜಯಂತಿಗಳಿಗೆ ಬಸ್ ಸಿಗದೇ ಇದ್ದಾಗ ತಡವಾಗಿ ಬರಲು ಈ ಕಾರಣ ಸಹ ಧ್ವನಿ ಯಾಗುತ್ತವೆ. ಈ ವಸತಿಗೃಹ ಇರುವ ಜಾಗದ ಕೂಗಳತೆ ದೂರದಲ್ಲೇ ಪ್ರವಾಸಿ ಮಂದಿರವಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಸಚಿವರು ಇಲ್ಲಿ ಸಂಚರಿಸುವಾಗ ಪಾಳುಬಿದ್ದಿರುವ ವಸತಿ ಗೃಹಗಳು ಪುರಸಭೆ ಕಾರ್ಯವೈಖರಿಯನ್ನು ಎತ್ತಿ ತೋರಿಸುವಂತಿದೆ.ಹೃದಯಭಾಗದ ಈ ವಸತಿ ಗೃಹಗಳ ಜಾಗದಲ್ಲಿ ಕೆಳಭಾಗದಲ್ಲಿ ವಾಣಿಜ್ಯ ಮಳಿಗೆ, ಮೊದಲ ಮಹಡಿಯಲ್ಲಿ ಮನೆಗಳನ್ನು ಕಟ್ಟಿಸಿದರೆ ಪುರಸಭೆಗೂ ಲಾಭವಾಗುತ್ತದೆ. ಆದರೆ, ಅಧಿಕಾರಿಗಳು ಮನಸ್ಸು ಮಾಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.ನಮಗೆ ಸಿಗುವ ಸಂಬಳದಲ್ಲಿ ಮನೆಯ ಬಾಡಿಗೆ ಕಟ್ಟುವಷ್ಟು ಹಣ ಉಳಿಯಲ್ಲ. ಜೊತೆಗೆ ಸದ್ಯಕ್ಕೆ ಇರುವ ಮನೆ ಸೋರುವ ಮತ್ತು ಬೀಳುವ ಹಂತದಲ್ಲಿದೆ. ನಮ್ಮ ಸ್ವಂತ ಹಣದಲ್ಲೇ ರಿಪೇರಿ ಮಾಡಿಸಿಕೊಂಡು ವಾಸ ಮಾಡುತ್ತಿದ್ದೇವೆ. ಮಳೆಗಾಲ ಹತ್ತಿರವಿದೆ, ಕಟ್ಟಡಗಳು ಶಿಥಿಲಗೊಂಡಿರುವುದರಿಂದ ನಮಗೂ ಜೀವಭಯ ಕಾಡುತ್ತಿದೆ. ಹೆಸರೇಳಲಿಚ್ಚಿಸಿದ ವಸತಿ ಗೃಹದ ಪುರಸಭಾ ಸಿಬ್ಬಂದಿ.--- ಕೋಟ್ಸ್‌---

ವಸತಿ ಗೃಹಗಳು ಈ ಅವ್ಯವಸ್ಥೆ ಅಲ್ಲಿನ ನಿವಾಸಿಗಳಿಂದ ತಿಳಿದಿದ್ದು, ನಾನು ಇತರೆ ಪುರಸಭಾ ಸದಸ್ಯ ರೊಂದಿಗೆ ಚರ್ಚಿಸಿ ದ್ದೇವೆ. ಇವು ನಿರ್ಮಾಣವಾಗಿ 68ವರ್ಷಗಳೇ ಕಳೆದಿದ್ದು, ವಾಸಿಸಲು ಯೋಗ್ಯವಿಲ್ಲ. ಇವುಗಳನ್ನು ಕೆಡವಿ ಹೊಸದಾಗಿ ಕಟ್ಟು ವಷ್ಟು ಹಣ ಪುರಸಭೆಯಲ್ಲಿಲ್ಲ. ಆದ್ದರಿಂದ ಶಾಸಕ ಕೆ.ಎಸ್.ಆನಂದ್ ಸರ್ಕಾರದ ಮಟ್ಟದ್ದಾಗಲಿ, ಬೇರ‍್ಯಾವ ಸಚಿವರ ನಿಧಿ ಯಿಂದಾದರೂ ಹಣ ಬಿಡುಗಡೆ ಮಾಡಿಸಿ ಇಲ್ಲಿ ಹೊಸ ಕಟ್ಟಡ ಕಟ್ಟಿಸಿಕೊಟ್ಟರೆ ಪುರಸಭೆ ಸಿಬ್ಬಂದಿ ಮತ್ತು ಬೀರೂರು ಪಟ್ಟಣದ ಅಭಿವೃದ್ಧಿಗೆ ಸಹಕರಿಸಿದಂತಾಗುತ್ತದೆ.

ಬಿ.ಆರ್.ಮೋಹನ್ ಕುಮಾರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಹಾಲಿಸದಸ್ಯ,

ಪುರಸಭೆ,ಬೀರೂರು.

--ಪಿ.ಡಬ್ಲ್ಯೂ.ಡಿ ಇಂಜಿನಿಯರ್‌ರನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿ ವರದಿ ಪಡೆದು, ವಸತಿಗೃಹಗಳ ಪುನರ್ ನಿರ್ಮಾಣಕ್ಕೆ ಪುರಸಭಾ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ಅವುಗಳ ರಿಪೇರಿ ಮಾಡಿಸ ಲಾಗುವುದು. ಪುರಸಭೆಯಿಂದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಕೋರಲಾಗುವುದು. ನೌಕರರ ಕ್ಷೇಮ ನಮ್ಮ ಮೊದಲ ಆದ್ಯತೆ.

ಜೆ.ಕಾಂತರಾಜು.

ತರೀಕರೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ.ಒಟ್ಟಾರೆ ಲಕ್ಷಾಂತರ ಮೌಲ್ಯದ ಆಸ್ತಿಗಳನ್ನು ಉಳಿಸಿಕೊಳ್ಳದೆ ಪಾಳು ಬೀಳಿಸಿರುವುದು ಯಾವ ನ್ಯಾಯ, ಪುರಸಭೆಗೆ ಲಾಭ ತರುವಂತ ಯೋಜನೆಗಳನ್ನೂ ರೂಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಶಾಸಕ ಆನಂದ್ ಇಂತಹ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲಿನ ಸಿಬ್ಬಂದಿಗೆ ಯಾವ ನಿಟ್ಟಿನಲ್ಲಿ ಸಹಕರಿಸುತ್ತಾರೋ ಕಾದು ನೋಡಬೇಕಿದೆ.6 ಬೀರೂರು1 ಬೀರೂರಿನ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಪುರಸಭೆ ಸೇರಿದ ವಸತಿಗೃಹಗಳು ಪಾಳು ಬಿದ್ದಿರುವುದು.6 ಬೀರೂರು 2ಕೆ.ಜೆ.ಕಾಂತರಾಜು.ತರೀಕರೆ ಉಪವಿಭಾಗಾಧಿಕಾರಿಗಳು ಹಾಗೂ ಪುರಸಭೆ ಆಡಳಿತಾಧಿಕಾರಿ6 ಬೀರೂರು 3ಬಿ.ಆರ್.ಮೋಹನ್ ಕುಮಾರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಹಾಲಿಸದಸ್ಯ, ಪುರಸಭೆ,ಬೀರೂರು