ಮೋದಿ ಸಮಾವೇಶ ಬಿಜೆಪಿಗೆ ಪ್ಲಸ್ ಪಾಯಿಂಟ್‌

| Published : Apr 27 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ಮೋದಿಯವರ ಸಮಾವೇಶ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೋದಿಯವರ ಸಮಾವೇಶ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಮಾಲಿನಿ ಸಿಟಿಯಲ್ಲಿ ನರೇಂದ್ರ ಮೊದಿಯವರ ನೇತೃತ್ವದಲ್ಲಿ ಏ.28 ರಂದು ನಡೆಯುವ ಬೃಹತ್ ಸಮಾವೇಶದ ಸಿದ್ಧತೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ವೈವಿದ್ಯಮಯ ದೇಶವಾಗಿದೆ. ಅದರಲ್ಲೂ ಬೆಳಗಾವಿಯಲ್ಲಿ ಕನ್ನಡ ಮರಾಠಿ ಜನರು ಸಹೋದರಂತೆ ಇದ್ದಾರೆ. ಇದು ರಾಷ್ಟ್ರೀಯ ಚುನಾವಣೆ ಆಗಿರುವುದರಿಂದ ಎಲ್ಲರೂ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಕಾಂಗ್ರೆಸ್‌ನವರು ಇದನ್ನು ಸಾಮಾನ್ಯ ಪಂಚಾಯತಿ ಚುನಾವಣೆ ಅಂದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ದೇಶದ ಅಭಿವೃದ್ಧಿ, ದೇಶದ ಭದ್ರತೆ ನೋಡಿಕೊಂಡು ಮತ ನೀಡಬೇಕು. ಲೋಕಸಭಾ ಚುನಾವಣೆ ಎಂದರೇ ಇಡೀ ದೇಶದ ಭವಿಷ್ಯ ರೂಪಿಸುವ ಚುನಾವಣೆ ಆಗಿದೆ. ನರೇಂದ್ರ ಮೋದಿಯವರು ತಮ್ಮ ಆಡಳಿತದ 10 ವರ್ಷದಲ್ಲಿ ಉತ್ತಮ ಸರ್ಕಾರ ನಡೆಸಿದ್ದಾರೆ. ಕಳೆದ 10 ವರ್ಷದಲ್ಲಿ ಅಭಿವೃದ್ಧಿಯಲ್ಲಿ 14ನೇ ಸ್ಥಾನದಲ್ಲಿದ್ದ ಭಾರತ 5 ಸ್ಥಾನಕ್ಕೆ ಬಂದಿದೆ ಎಂದು ತಿಳಿಸಿದರು.

ನೇಹಾ ಹಿರೇಮಠ ವಿಚಾರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ನೇಹಾಳ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ತನಿಖೆ ನಡೆವಾಗಲೇ ಸಿಎಂ, ಗೃಹ ಸಚಿವರು ವೈಯಕ್ತಿಕ ಘಟನೆ ಅಂತ ಹೇಳಿಕೆ ಕೊಟ್ಟಿದ್ದರು. ಸಿಎಂ ನಿನ್ನೆ ಬಂದು ಸ್ವಾಂತನ ಹೇಳಲು ಒಂದು ವಾರ ಬೇಕಿತ್ತಾ ಎಂದು ಪ್ರಶ್ನಿಸಿದರು.ಬಾಕ್ಸ್‌.....

ಕಾರ್ಯಕ್ರಮ ಸ್ಥಳ ಪರಿಶೀಲಿಸಿದ ಬಿಜೆಪಿ ಮುಖಂಡರು

ಏ.28 ರಂದು ಚುನಾವಣೆ ಪ್ರಚಾರಕ್ಕೆ ಬೆಳಗಾವಿಗೆ ಆಗಮಿಸುತ್ತರುವ ಪ್ರಧಾನಿ ಮೋದಿ ಕಾರ್ಯಕ್ರಮ ಸಕಲ ಸಿದ್ಧತೆಯನ್ನು ಮಾಲಿನಿ ಸಿಟಿ ಮೈದಾನದಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ರಮೇಶ ಜಾರಕಿಹೊಳಿ, ಬೆಳಗಾವಿ ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮುಖಂಡರಾದ ಎಂ.ಬಿ.ಜಿರಲಿ, ರಮೇಶ ದೇಶಪಾಂಡೆ, ಮರಘೇಂದ್ರಗೌಡ ಪಾಟೀಲ ಪರಿಶೀಲನೆ ನಡೆಸಿದರು.

ಕೋಟ್...

ಏ.28 ರಂದು ಬೆಳಗಾವಿ ಮಾಲಿನಿ ಸಿಟಿ ಮೈದಾನದಲ್ಲಿ ಬೆಳಗ್ಗೆ 9 ಗಂಟೆ ಬೃಹತ್ ಸಮಾವೇಶ ಇರಲ್ಲಿದೆ.‌ ಬೆಳಗಾವಿ, ಚಿಕ್ಕೋಡಿ ಎರಡು ಲೋಕಸಭಾ ಸೇರಿದಂತೆ 18 ವಿಧಾನಸಭೆಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕ ಮುಖಂಡರು ಆಗಮಿಸುವರು.

-ಜಗದೀಶ್ ಶೆಟ್ಟರ್, ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ.

------------

26ಬಿಇಎಲ್‌32----------------ಬಾಕ್ಸ್‌..

ನಾಳೆ ಮೋದಿ ಭೇಟಿ : ವಾಯುವಾಹನಗಳ ಹಾರಾಟ ನಿಷೇಧಬೆಳಗಾವಿ : ನಗರದ ಹೊರವಲಯದಲ್ಲಿರುವ ಮಾಲಿನಿ ಸಿಟಿಯಲ್ಲಿ ಏ.28 ರಂದು ಜರುಗಲ್ಲಿರುವ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲ್ಲಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಏ.27 ಬೆಳಗ್ಗೆ 6 ರಿಂದ ಏ.28ರ ಸಂಜೆ 6 ಗಂಟೆಯವರೆಗೆ ಬೆಳಗಾವಿ ತಾಲೂಕಿನ ವ್ಯಾಪ್ತಿಯಲ್ಲಿ ಮಾನವ ರಹಿತ ವಾಯು ವಾಹನಗಳ ಹಾರಾಟವನ್ನು ಅಥವಾ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ ರೆಡ್‌ ಝೋನ್‌ ಅಥವಾ ನೋ ಪ್ಲೈ ಝೋನ್‌ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಿಂದ ಸೂಕ್ತ ಕ್ರಮವನ್ನು ಕೈಗೊಳ್ಳುವುದು ಎಂದು ಜಿಲ್ಲಾ ದಂಡಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.