ಸಾಂಸ್ಕೃತಿಕ ಕಲೆಗಳಿಂದ ಮನಸ್ಸು ಕಟ್ಟುವ ಕೆಲಸ: ಅಗರಿ ರಾಘವೇಂದ್ರ ರಾವ್

| Published : Apr 25 2024, 01:01 AM IST

ಸಾಂಸ್ಕೃತಿಕ ಕಲೆಗಳಿಂದ ಮನಸ್ಸು ಕಟ್ಟುವ ಕೆಲಸ: ಅಗರಿ ರಾಘವೇಂದ್ರ ರಾವ್
Share this Article
  • FB
  • TW
  • Linkdin
  • Email

ಸಾರಾಂಶ

‘ಶ್ರೀರಾಮಾಭಿವಂದನ’ ನೃತ್ಯ ಕಾರ್ಯಕ್ರಮ ಹಾಗೂ ‘ಮಾಯಾ ‌ವಿಲಾಸ’ ನೃತ್ಯ ರೂಪಕ‌ ಸಂಸ್ಥೆಯ ನಿರ್ದೇಶಕಿ ಗುರು ವಿ. ಸುಮಂಗಲಾ ರತ್ನಾಕರ್ ರಾವ್ ಅವರ ನಿರ್ದೇಶನದಲ್ಲಿ ನಾಟ್ಯಾರಾಧನಾದ ವಿದ್ಯಾರ್ಥಿಗಳಿಂದ ನಡೆಯಿತು

ಕನ್ನಡಪ್ರಭವಾರ್ತೆ ಮೂಲ್ಕಿ

ಬಾಲ್ಯದಿಂದಲೇ ಭಾರತೀಯ ನೃತ್ಯ, ಸಂಗೀತ ಮುಂತಾದ ಕಲೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಸಾಂಸ್ಕೃತಿಕ ಕಲೆಗಳು ಮನಸ್ಸು ಕಟ್ಟುವ ಕೆಲಸ ಮಾಡುತ್ತದೆ ಎಂದು ಉದ್ಯಮಿ ಅಗರಿ ಸಂಸ್ಥೆ ಅಗರಿ ರಾಘವೇಂದ್ರ ರಾವ್ ಹೇಳಿದರು.

ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ ಉರ್ವದ ತ್ರಿಂಶೋತ್ಸವ ಸಮಾರಂಭದ ‘ನೃತ್ಯಾಮೃತ ಸರಣಿ ನೃತ್ಯ ಕಾರ್ಯಕ್ರಮ -3 ರ ಮಂಗಳೂರು ಪುರಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್‌, ಅಶೋಕನಗರದ ಅಧ್ಯಕ್ಷ ರಾಧಾಕೃಷ್ಣರು ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ‌ಪುನರೂರು, ಹಿರಿಯ ನೃತ್ಯ ಗುರುಗಳಾದ ನಾಟ್ಯಾಲಯ ಉರ್ವದ ನಿರ್ದೇಶಕಿ ವಿದುಷಿ ಕಮಲಾ ಭಟ್, ನಾಟ್ಯ ನಿಕೇತನ ಕೊಲ್ಯ ಕೋಟೆಕಾರ್ ನ ನಿರ್ದೇಶಕಿ ವಿದುಷಿ ರಾಜಶ್ರೀ ಉಳ್ಳಾಲ್, ಕರ್ಣಾಟಕ ಬ್ಯಾಂಕ್ ಉದ್ಯೋಗಿ ವರಲಕ್ಷ್ಮೀ ಸರ್ವೇಶ ರಾವ್ , ಸಂಸ್ಥೆ ಹಿರಿಯ ವಿದ್ಯಾರ್ಥಿನಿ ವಿದುಷಿ ಸಿಂಧೂರ ಎಲ್.ಎಚ್. ತ್ರಿಂಶೋತ್ಸವ ಸಮಿತಿ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್, ಟ್ರಸ್ಟಿ ಬಿ. ರತ್ನಾಕರ ರಾವ್ ಉಪಸ್ಥಿತರಿದ್ದರು.ಬಳಿಕ ‘ಶ್ರೀರಾಮಾಭಿವಂದನ’ ನೃತ್ಯ ಕಾರ್ಯಕ್ರಮ ಹಾಗೂ ‘ಮಾಯಾ ‌ವಿಲಾಸ’ ನೃತ್ಯ ರೂಪಕ‌ ಸಂಸ್ಥೆಯ ನಿರ್ದೇಶಕಿ ಗುರು ವಿ. ಸುಮಂಗಲಾ ರತ್ನಾಕರ್ ರಾವ್ ಅವರ ನಿರ್ದೇಶನದಲ್ಲಿ ನಾಟ್ಯಾರಾಧನಾದ ವಿದ್ಯಾರ್ಥಿಗಳಿಂದ ನಡೆಯಿತು. ಭಾರ್ಗವಿ ಮಯ್ಯ ಪ್ರಾರ್ಥಿಸಿದರು. ಸುಮಂಗಲಾ ರತ್ನಾಕರ್ ರಾವ್ ಸ್ವಾಗತಿಸಿದರು. ಶೈಲಜ ಜಗತಾಪ್ ವಂದಿಸಿದರು. ಮಂಜುಳಾ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.