ಭಾಷಣ ಕೇಳುಗರಿಗೆ ಭೂಷಣವಾಗಿರಲಿ

| Published : May 09 2024, 01:05 AM IST

ಸಾರಾಂಶ

ಬಾಳೆಹೊನ್ನೂರುಸಭೆ, ಸಮಾರಂಭಗಳ ವೇದಿಕೆಯಲ್ಲಿ ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಭೂಷಣವಾಗಿರ ಬೇಕು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಚಿಕ್ಕಮಗಳೂರಿನ ವಿಜಯಕುಮಾರ್ ಹೇಳಿದರು.

ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ತರಬೇತಿಯಲ್ಲಿ ವಿಜಯಕುಮಾರ್

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಭೆ, ಸಮಾರಂಭಗಳ ವೇದಿಕೆಯಲ್ಲಿ ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಭೂಷಣವಾಗಿರ ಬೇಕು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಚಿಕ್ಕಮಗಳೂರಿನ ವಿಜಯಕುಮಾರ್ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಬೆಳಸೆಯ ಖಾಂಡ್ಯ ಪ್ಲಾಂಟರ್ಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲಿರುವ ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಸ್ಫೂರ್ತಿಯಾಗಿದ್ದು, ಇನ್ನಷ್ಟು ಕೇಳಬೇಕು ಎನಿಸಬೇಕು. ಭಾಷಣ ಮಾಡುವಾಗ ಹಲವು ಕಲೆಗಳನ್ನು ಕರಗತ ಮಾಡಿಕೊಳ್ಳ ಬೇಕಾಗಿರುವುದು ಭಾಷಣಕಾರನ ಚತುರತೆ ಎಂದರು.

ಭಾಷಣ ಸಂದರ್ಭದಲ್ಲಿ ಅಲ್ಲಿನ ಸ್ಥಿತಿಗತಿ ಅರಿತು, ಆ ಸಮಯಕ್ಕೆ ತಕ್ಕಂತೆ ಮಾತನಾಡಬೇಕು. ಆಗ ಭಾಷಣ ಕಾರನಿಗೂ ಒಂದು ಗೌರವ, ಕೇಳುಗನಿಗೆ ಸಂತಸ ದೊರೆಯಲಿದೆ. ಭಾಷಣದಲ್ಲಿ ಬೇಕಾಬಿಟ್ಟಿ ಮಾತನಾಡದೆ ಹಿತಮಿತವಾಗಿ, ವಿನೂತನ ಶೈಲಿಯಲ್ಲಿ ಮಾತನಾಡಿದರೆ ಭಾಷಣಕ್ಕೆ ಮೌಲ್ಯ ದೊರೆಯಲಿದೆ ಎಂದರು.ಜೇಸಿ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ಜೇಸಿ ಸಂಸ್ಥೆ ಹಾಗೂ ಇತರೆ ಸಂಘ ಸಂಸ್ಥೆ ಸದಸ್ಯರಿಗೆ ಪರಿಣಾಮಕಾರಿ ಭಾಷಣ ಕಲೆ ಬಗ್ಗೆ ತರಬೇತಿ ನೀಡಿ ಉತ್ತಮ ಭಾಷಣಕಾರರನ್ನಾಗಿ ಮಾಡುವ ಉದ್ದೇಶದಿಂದ ರಾಷ್ಟ್ರೀಯ ತರಬೇತು ದಾರರಿಂದ ತರಬೇತಿ ನೀಡಲಾಗುತ್ತಿದೆ. ಈ ಶಿಬಿರದಲ್ಲಿ ತರಬೇತಿ ಪಡೆದವರು ಉತ್ತಮ ಭಾಷಣಕಾರರಾಗಿ ರೂಪು ಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು.ಶಿಬಿರದಲ್ಲಿ 20 ಜನ ತರಬೇತಿ ಪಡೆದರು. ಸಹ ತರಬೇತುದಾರ ಸುರೇಂದ್ರ ಮಾಸ್ತರ್, ಕೆ.ಎಂ.ರಾಘವೇಂದ್ರ, ಕಾಫಿ ಬೆಳೆಗಾರ ಅನೂಪ್ ಅರಿಗೆ, ಕ್ರಿಕೆಟ್ ಆಟಗಾರ ಯತೀ ಶ್ಯಾಮ್, ಜೇಸಿ ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ರಚನ್ ಹುಯಿಗೆರೆ, ಸಿ.ಪಿ.ರಮೇಶ್ ಮತ್ತಿತರರು ಹಾಜರಿದ್ದರು.೦೮ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನೀಡುವ ಪ್ರಮಾಣ ಪತ್ರವನ್ನು ಕಾಫಿ ಬೆಳೆಗಾರ ಅನೂಪ್ ಅರಿಗೆ, ಕ್ರಿಕೆಟ್ ಆಟಗಾರ ಯತೀ ಶ್ಯಾಮ್ ಬಿಡುಗಡೆಗೊಳಿಸಿದರು. ಶಶಿಧರ್, ವಿಜಯಕುಮಾರ್, ಸುರೇಂದ್ರ, ರಾಘವೇಂದ್ರ ಇದ್ದರು.