ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ: ಶಿವಮೂರ್ತಿ ಶ್ರೀ

| Published : Apr 23 2024, 12:47 AM IST

ಸಾರಾಂಶ

ನೇಹಾಳ ಹತ್ಯೆ ಘಟನೆಯ ಕುರಿತು ಮುಖ್ಯಂಮತ್ರಿಗಳು ಹಾಗೂ ಗೃಹಮಂತ್ರಿಗಳು ನೀಡಿರುವ ಹೇಳಿಕೆ ತುಂಬಾ ಬೇಸರದ ಮಾತುಗಳಾಗಿವೆ. ಹತ್ಯೆ ಎನ್ನುವಂತದ್ದು ತುಂಬಾ ಹೇಯವಾದ ಕೃತ್ಯವಾಗಿದ್ದು, ಇಂತಹ ಘಟನೆಯನ್ನು ಎಲ್ಲರೂ ಖಂಡಿಸಬೇಕು.

ಕನ್ನಡಪ್ರಭ ವಾರ್ತೆ ಸುರಪುರ

ಹುಬ್ಬಳ್ಳಿಯ ನೇಹಾಳನ್ನು ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಅಂದಾಗ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠಳ ಹತ್ಯೆ ಖಂಡಿಸಿ ವೀರಶೈವ ಲಿಂಗಾಯತ ಸಮಿತಿ ನೇತೃತ್ವದಲ್ಲಿ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಬಳಿಯ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೇಹಾಳ ಹತ್ಯೆ ಘಟನೆಯ ಕುರಿತು ಮುಖ್ಯಂಮತ್ರಿಗಳು ಹಾಗೂ ಗೃಹಮಂತ್ರಿಗಳು ನೀಡಿರುವ ಹೇಳಿಕೆ ತುಂಬಾ ಬೇಸರದ ಮಾತುಗಳಾಗಿವೆ. ಹತ್ಯೆ ಎನ್ನುವಂತದ್ದು ತುಂಬಾ ಹೇಯವಾದ ಕೃತ್ಯವಾಗಿದ್ದು, ಇಂತಹ ಘಟನೆಯನ್ನು ಎಲ್ಲರೂ ಖಂಡಿಸಬೇಕು ಎಂದರು.

ಕೊಡೇಕಲ್ ದುರುದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ನೇಹಾಳ ಹತ್ಯೆಯು ಮಾನವ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ. ಆದರೆ, ಗೃಹಮಂತ್ರಿಗಳು ಹತ್ಯೆ ಮಾಡಿದವನು ಮತ್ತು ಹತ್ಯೆಗೊಳಗಾದವರ ಕುರಿತು ನೀಡುವ ಹೇಳಿಕೆ ನೋಡಿದರೆ ಗೃಹಮಂತ್ರಿಗಳು ತಮ್ಮ ರಾಜಕೀಯ ತೆವಲಿಗಾಗಿ ತಾವೇ ತೀರ್ಪು ನೀಡುವ ರೀತಿ ಮಾತನಾಡಿರುವುದು ಖಂಡನೀಯವಾಗಿದೆ ಎಂದರು.

ನಾವು ಭಯೋತ್ಪಾದಕತೆಯ ಬಗ್ಗೆ ಮಾತನಾಡುತ್ತೇವೆ. ಆದರೆ, ರಾಜಕಾರಣಿಗಳು ಇಂತಹ ಘಟನೆಯ ಸಂದರ್ಭದಲ್ಲಿ ಆಡುವ ಮಾತು ನೋಡಿದರೆ ಇವರಿಗಿಂತ ಭಯೋತ್ಪಾದನೆ ಬೇರೆ ಇರುವುದಿಲ್ಲ ಎನಿಸುತ್ತದೆ ಎಂದರು.

ಇಂದು ಸರಕಾರಕ್ಕೆ ನಾವೆಲ್ಲರು ಒತ್ತಾಯ ಮಾಡುತ್ತೇವೆ. ಹತ್ಯೆ ಮಾಡಿದ ಫಯಾಜ್‌ಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.

ಶಿಕಾರಿಪುರದ ವೀಣಾ ಹಿರೇಮಠ, ಸೋಮಶೇಖರ ಶಾಬಾದಿ, ಸೂಗುರೇಶ ವಾರದ್, ಲಕ್ಷ್ಮಿಕಾಂತ ದೇವರಗೋನಾಲ, ಅಮರಯ್ಯಸ್ವಾಮಿ ಜಾಲಿಬೆಂಚಿ, ಜಗದೀಶ ಪಾಟೀಲ್ ಮಾತನಾಡಿದರು.

ನಂತರ ನೇಹಾ ಹಿರೇಮಠಳ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಬಳಿಕ ಸರಕಾರಕ್ಕೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿದ್ದಯ್ಯಸ್ವಾಮಿ ನಿಷ್ಠಿ ಕಡ್ಲೆಪ್ಪನವರಮಠ, ವಿರೇಶ ಪಂಚಾಂಗಮಠ, ಸುನೀಲ ಪಂಚಾಂಗಮಠ, ಮಂಜುನಾಥ ಜಾಲಹಳ್ಳಿ, ಶರಣಪ್ಪ ಕಲಕೇರಿ, ವಿರೇಶ ದೇಶಮುಖ, ಮಲ್ಲಣ್ಣ ಸಾಹು, ಪ್ರಕಾಶ ಅಂಗಡಿ, ಪ್ರದೀಪ ಕದರಾಪುರ, ಅರುಣಕುಮಾರ ಗೋಲಗೇರಿ, ಸಾಗರ ಪುರಾಣ ಕಮಠ, ಮಲ್ಲಿಕಾರ್ಜುನ ಹಿರೇಮಠ, ಶರಣಯ್ಯಸ್ವಾಮಿ ಲಕ್ಷ್ಮಿಪುರ, ಶಿವುಕುಮಾರ ಗುಳಗಿ, ಮಂಜುನಾಥ ಹಿರೇಮಠ ಸತ್ಯಂಪೇಟೆ, ದೇವೆಂದ್ರಯ್ಯ ಸ್ವಾಮಿ, ಶಿವರುದ್ರ ಉಳ್ಳಿ, ಶರಬಣ್ಣ ಸತ್ಯಂಪೇಟೆ, ಶಿವು ಸಾಹುಕಾರ ಸೂಗುರ, ಶರಣು ಬಳಿ, ಪ್ರಕಾಶ ಬಣಗಾರ, ಬಸವರಾಜ ಬಿರಾದಾರ, ಅಯ್ಯಪ್ಪ ಅಕ್ಕಿ, ಮಲ್ಲು ಬಾದ್ಯಾಪುರ, ಸಿದ್ದನಗೌಡ ಹೆಬ್ಬಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.