ಕಲಬುರಗಿಯಲ್ಲಿ ಜೆಪಿ ನಡ್ಡಾ 4 ಕಿಮೀ ಭರ್ಜರಿ ರೋಡ್‌ ಶೋ

| Published : Apr 27 2024, 01:00 AM IST

ಕಲಬುರಗಿಯಲ್ಲಿ ಜೆಪಿ ನಡ್ಡಾ 4 ಕಿಮೀ ಭರ್ಜರಿ ರೋಡ್‌ ಶೋ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯಲ್ಲಿ ಶುಕ್ರವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರತಾಪ್‌ ನಡ್ಡಾ ಅವರ ನೇತೃತ್ವದಲ್ಲಿ ನಡೆದ ರೋಡ್‌ ಶೋ ಜನಮನ ಸೆಳೆಯುವಲ್ಲಿ ಯಶಸ್ವಿಯಾಯ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಶುಕ್ರವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರತಾಪ್‌ ನಡ್ಡಾ ಅವರ ನೇತೃತ್ವದಲ್ಲಿ ನಡೆದ ರೋಡ್‌ ಶೋ ಜನಮನ ಸೆಳೆಯುವಲ್ಲಿ ಯಶಸ್ವಿಯಾಯ್ತು.

ಗಂಜ್‌ನ ನಗರೇಶ್ವರ ಶಾಲಾ ಮೈದಾನದಿಂದ ಶುರುವಾದ ರೋಡ್‌ ಶೋದಲ್ಲಿ ಜೆಪಿ ನಡ್ಡಾ, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್‌, ಎಂಎಲ್‌ಸಿ ಬಿಜಿ ಪಾಟೀಲ್‌, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ನಗರಾಧ್ಯಕ್ಷ ಚಂದು ಪಾಟೀಲ್‌, ಎಂಎಲ್‌ಸಿ ರಘುನಾಥ ಮಲ್ಕಾಪುರೆ ಸೇರಿದಂತೆ ಬಿಜೆಪಿಯ ಮುಖಂಡರುಗಳು ಪಾಲ್ಗೊಂಡಿದ್ದರು.

4 ಕಿಮೀ ಉದ್ದದ ರೋಡ್‌ ಶೋ ನಡೆದ ದಾರಿಯುದ್ದಕ್ಕೂ ಮೈಕ್‌ ಬಳಸಿ ಮುಖಂಡರು ಬಿಜೆಪಿ ಸಾಧನೆ, ಮೋದಿಯವರ ಸಾಧನೆ, ಮುಂದಿನ ಯೋಜನೆಗಳನ್ನು ವಿವರಿಸುತ್ತ ಜನರನ್ನು ಸೆಳೆದರು. ಜೈ ಶ್ರೀರಾಮ ಗೋಷಣೆಗಳೂ ಮೊಳಗಿದವು. ನಡ್ಡಾ ಸೇರಿದಂತೆ ತೆರೆದ ವಾಹನದಲ್ಲಿರುವವರು ಎಲ್ಲರು ಜನರತ್ತ ಪುಷ್ಪವೃಷ್ಟಿಗರೆದರೆ ಅದಕ್ಕೆ ಪರ್ತಿಯಾಗಿ ಸೇರಿದ್ದ ಜನರೂ ಕೂಡಾ ಹೂವಿನ ಪಕಳೆಗಳನ್ನು ನಡ್ಡಾ ಸೇರಿದಂತೆ ಬಿಜೆಪಿ ನಾಯಕರತ್ತ ಹಾರಿಸುತ್ತ ಶುಭ ಕೋರಿದರು.

ರೋಡ್‌ ಶೋ ಮಧ್ಯೆ ಸೂಪರ್‌ ಮಾರ್ಕೆಟ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜೆಪಿ ನಡ್ಡಾ ಇಂಡಿಯನ್‌ ನ್ಯಾಶನ್‌ ಡೇವಲಪ್ಮೆಂಟಲ್‌ ಅಲಯನ್ಸ್‌- ಇಂಡಿಯಾ ಒಕ್ಕೂಟದ ವಿರುದ್ಧ ತೀವ್ರ ವಾಗದಾಳಿ ನಡೆಸಿದರು.

ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಸಚಿವರು, ಇನ್ನೂ ಹಲವರನ್ನೊಳಗೊಂಡ ಹಗರಣ ಹೇಗಿದೆ ಎಂಬುದು ಎಲ್ಲರೂ ನೋಡಿದ್ದೀರಿ, ವಿಚಾರಣೆ ಸಾಗಿದೆ. ಇಂತಹವರೆಲ್ಲರೂ ಇಂಡಿಯಾ ಒಕ್ಕೂಟದಲ್ಲಿದ್ದಾರೆಂದು ಗೇಲಿ ಮಾಡಿದರು.

ದೆಹಲಿಯ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ಸರಕರಾದಲ್ಲಿ ಅದೇನೆಲ್ಲಾ ಭ್ರಷ್ಟಾಚಾರ ನಡೆಯುತ್ತಿದೆ ನೋಡುತ್ತಿದ್ದೀರಲ್ಲ, ಅದನ್ನೆಲ್ಲ ಹೊರಗೆ ಹಾಕಲಾಗಿದೆ. ಆಮ್‌ ಆದ್ಮಿ ಪಕ್ಷ, ತೃಣಮೂಲ ಕಾಗ್ರೆಸ್‌, ಸಿಪಿಐ, ಡಿಎಂಕೆ, ನ್ಯಾಶನಲ್‌ ಕಾನಫ್ರೆನ್ಸ್‌, ರೆಸಸ, ಎನ್‌ಸಿಪಿ ಸೇರಿದಂತೆ 41 ಪಕ್ಷಗಳ ಈ ಘಟ ಬಂಧನದಲ್ಲಿದ್ದವರೆಲ್ಲರೂ ತಮ್ಮ ಪಕ್ಷ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತಹ ಮೈತ್ರಿಕೂಟದಿಂದ ಭಾರತದ ಪ್ರಗತಿ ಸಾಧ್ಯವೆ? ನೀವೇ ಯೋಚಿಸಿ ಮತದಾನ ಮಾಡಿರಿ ಎಂದು ಸೇರಿದ್ದ ಜನತೆಗೆ ನಡ್ಡಾ ಕರೆ ನೀಡಿದರು.

ಕಲಬುರಗಿಯ ತವರು ನೆಲದ ನೇತಾ ಡಾ. ಮಲ್ಲಿಕಾರ್ಜುನ ಖರರ್ಗೆ ಇದೀಗ ಕಾಂಗ್ರೆಸ್‌ ಅಧ್ಯಕ್ಷರಿದ್ದಾರೆ. ಇಂಡಿಯಾ ಒಕ್ಕೂಟದ ಪ್ರಧಾನಿ ಸ್ಥಾನಕ್ಕೆ ಅವರ ಹೆಸರು ಹೇಳಿದವರು ಅದ್ಹೇಗೆ ಎಲ್ಲಾ ರೀತಿ ಹಗರಣಗಳನ್ನು ಹೊದದ್ದುಕೊಂಡಿದ್ದಾರೆ ಎಂಬುದನ್ನು ಅದಾಗಲೇ ಬಟಾಬಯಲಾಗಿದೆ. ಇಂತಹವರೆಲ್ಲರೂ ಖರ್ಗೆ ನೇತೃತ್ವದ ಕಾಂಗ್ರೆಸ್‌ ಮುಂಚೂಣಿಯಲ್ಲಿರೋ ಇಂಡಿಯಾ ಕೂಟದ ಸದಸ್ಯರು ಅಂದ್ಮೇಲೆ ನೀವೇ ಯೋಚಿಸಿರಿ, , ಇವರಿಂದ ದೇಶ ಉದ್ಧಾರ ಸಾಧ್ಯವೆ? ಎಂದು ಜೆಪಿ ನಡ್ಡಾ ಪ್ರಶ್ನಿಸಿದರು.

ಕರ್ಟಾಕ ಸೇರಿದಂತೆ ದೇಶಾದ್ಯಂತ ಬಿಜೆಪಿ ಪರ, ಮೋದಿಯವರ ಸಾಧನೆಗಳ ಪರ ಮತದಾರರ ಒಲವು ತೋರುತ್ತಿದ್ದಾನೆ, ಬಿಜೆಪಿ ಅಲೆ ಎಲ್ಲಾಕಡೆ ಇದೆ. ಹೀಗಾಗಿ ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚಿನ ಸ್ಥಾನ ಗೆಲ್ಲೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.