ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ

| Published : May 10 2024, 01:39 AM IST

ಸಾರಾಂಶ

ಮೈಸೂರು ತಾಲೂಕಿನ ಕೃಷಿ ಇಲಾಖೆ ವತಿಯಿಂದ ತಾಲೂಕಿನ ಜಯಪುರ, ವರುಣ, ಇಲವಾಲ ಹಾಗೂ ಕಸಬ ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ, ಪೂರ್ವ ಮುಂಗಾರು ಹಂಗಾಮಿಗೆ ಅನುಗುಣವಾಗಿ ಶೇ.50 ಸಹಾಯಧನದಲ್ಲಿ ಇತರೆ ವರ್ಗದ ರೈತರಿಗೆ ಹಾಗೂ ಶೇ.75 ಸಹಾಯಧನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರುಗಳಿಗೆ ದ್ವಿದಳ ಧಾನ್ಯ ಬಿತ್ತನೆ ಬೀಜಗಳಾದ ಹೆಸರು, ಉದ್ದು ,ಅಲಸಂದೆ ಹಾಗೂ ಏಕದಳ ಧಾನ್ಯ ಮುಸುಕಿನ ಜೋಳ ಮತ್ತು ಹಸಿರಲೆ ಗೊಬ್ಬರ ಬಿತ್ತನೆ ಬೀಜಗಳಾದ ಚಂಬೆ ಹಾಗೂ ಸೆಣಬು ಬೀಜಗಳನ್ನು ವಿತರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ 3- 4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂತಸಗೊಂಡಿರುವ ರೈತ ಬಾಂಧವರು, ತಮ್ಮ ಭೂಮಿಯನ್ನು ಸಿದ್ಧತೆ ಮಾಡಿ ಬಿತ್ತನೆ ಕಾರ್ಯಕ್ಕೆ ಅಣಿ ಮಾಡಿಕೊಳ್ಳುತ್ತಿದ್ದಾರೆ.

ಇದೇ ವೇಳೆ ಮೈಸೂರು ತಾಲೂಕಿನ ಕೃಷಿ ಇಲಾಖೆ ವತಿಯಿಂದ ತಾಲೂಕಿನ ಜಯಪುರ, ವರುಣ, ಇಲವಾಲ ಹಾಗೂ ಕಸಬ ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ, ಪೂರ್ವ ಮುಂಗಾರು ಹಂಗಾಮಿಗೆ ಅನುಗುಣವಾಗಿ ಶೇ.50 ಸಹಾಯಧನದಲ್ಲಿ ಇತರೆ ವರ್ಗದ ರೈತರಿಗೆ ಹಾಗೂ ಶೇ.75 ಸಹಾಯಧನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರುಗಳಿಗೆ ದ್ವಿದಳ ಧಾನ್ಯ ಬಿತ್ತನೆ ಬೀಜಗಳಾದ ಹೆಸರು, ಉದ್ದು ,ಅಲಸಂದೆ ಹಾಗೂ ಏಕದಳ ಧಾನ್ಯ ಮುಸುಕಿನ ಜೋಳ ಮತ್ತು ಹಸಿರಲೆ ಗೊಬ್ಬರ ಬಿತ್ತನೆ ಬೀಜಗಳಾದ ಚಂಬೆ ಹಾಗೂ ಸೆಣಬು ಬೀಜಗಳನ್ನು ವಿತರಿಸಲಾಗುತ್ತಿದೆ.

ರೈತ ಬಾಂಧವರು ತಮ್ಮ ಎಫ್ಐಡಿ ಸಂಖ್ಯೆಯನ್ನು ಕಚೇರಿಗೆ ನೀಡಿ, ಸಹಾಯಧನದಲ್ಲಿ ನೀಡುತ್ತಿರುವ ಬಿತ್ತನೆ ಬೀಜಗಳ ಸದುಪಯೋಗವನ್ನು ಪಡೆದುಕೊಂಡು, ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಉತ್ತಮ ಇಳವರಿ ಮತ್ತು ಆದಾಯವನ್ನು ಪಡೆಯಬೇಕು ಎಂದು ಮೈಸೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಬಿ.ಡಿ. ಜಯರಾಮ ರೈತರಲ್ಲಿ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಳಿಗಾಗಿ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಕಚೇರಿಗಳನ್ನು ಸಂಪರ್ಕಿಸಲು ಕೋರಿದೆ.