ಲೋಕಸಭಾ ಚುನಾವಣೆಯಲ್ಲಿ ಶೇ. 100 ಮತದಾನವಾಗಲಿ: ಕೆ. ಗುರುಬಸವರಾಜ

| Published : Apr 19 2024, 01:07 AM IST

ಲೋಕಸಭಾ ಚುನಾವಣೆಯಲ್ಲಿ ಶೇ. 100 ಮತದಾನವಾಗಲಿ: ಕೆ. ಗುರುಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್‌, ಕೆ. ಗುರುಬಸವರಾಜ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಸ್ವೀಪ್ ಕಾರ್ಯಕ್ರಮದಡಿ ಪಟ್ಟಣ ಪಂಚಾಯತ್ ಆವರಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದ ಬೀದಿ ನಾಟಕ ತಾಲೂಕಾಡಳಿತ ವತಿಯಿಂದ ಗುರುವಾರ ಆಯೋಜಿಸಲಾಗಿತ್ತು. ಮತದಾನದ ಜಾಗೃತಿಗಾಗಿ ನಡೆದ ಬೀದಿ ನಾಟಕ ಪ್ರದರ್ಶನ ನೆರೆದಿದ್ದ ಜನ ಮನ ಸೊರ್ಯಗೊಂಡಿತು.

ನಂತರ ಮಾತನಾಡಿದ ತಹಸೀಲ್ದಾರ್‌, ಕೆ. ಗುರುಬಸವರಾಜ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಮಾತನಾಡಿ, ಲೋಕಸಭಾ ಚುನಾವಣೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಮೇ 7ರ ಮುಂಜಾನೆ 7ರಿಂದ ಸಂಜೆ 5.30ರ ವರೆಗೆ ಮತದಾನ ಜರುಗಲಿದ್ದು ಪ್ರತಿಯೊಬ್ಬರು ತಮ್ಮ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಟಿ.ಎಚ್‌.ಒ. ಝೆಡ್.ಆರ್. ಮಕಾಂದಾರ, ಕಂದಾಯ ನಿರೀಕ್ಷಕ ಶಂಕರ, ದ್ರಾಕ್ಷಾಯಣಿ ಚನ್ನಗೌಡ್ರ, ಪಪಂ ಸಿಬ್ಬಂದಿ ಪರಮೇಶಪ್ಪ ಅಂತರವಳ್ಳಿ, ಮಂಜು ಸುಣಗಾರ, ವೀರೇಶ ದ್ಯಾವಕ್ಕಳವರ, ಸಂತೋಷ ಬಿಳಚಿ, ಮಂಜಪ್ಪ ಚಲವಾದಿ, ನಿಖಿಲ್ ಅರ್ಕಾಚಾರಿ, ಚಂದ್ರಪ್ಪ ಅಂತರವಳ್ಳಿ, ಬಸವರಾಜ ಕವಲೆತ್ತು, ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.