ಗುಬ್ಬಿ ತಾಲೂಕಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

| Published : May 08 2024, 01:01 AM IST

ಗುಬ್ಬಿ ತಾಲೂಕಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಬ್ಬಿ ತಾಲೂಕಿನ ತ್ಯಾಗಟೂರು, ಮುದ್ದಪುರ, ಎಂ.ಎನ್. ಕೋಟೆ , ಅಳಿಲುಘಟ್ಟ ,ಹೊಸಕೆರೆ ,ಚೇಳೂರು ,ನಿಟ್ಟೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ತಿಂಗಳಿನಿಂದ ಬಿಸಿಲಿಗೆ ತತ್ತರಿಸಿದ ಜನತೆಗೆ ಈಗ ಮಳೆ ಬಂದು ಕೊಂಚ ನೆಮ್ಮದಿ ತರಿಸಿದ್ದು, ಮೇವಿಲ್ಲದೇ ಕೊರಗುತ್ತಿದ್ದ ಜಾನುವಾರುಗಳಿಗೆ,ನೀರಿಲ್ಲದೇ ಒಣಗುತ್ತಿದ್ದ ರೈತರ ತೋಟಗಳಿಗೆ ಕೊನೆಗೂ ಮಳೆರಾಯ ಕೈ ಹಿಡಿದ್ದಿದಾನೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಧಾರಕಾರ ಮಳೆಯಾಗಿದೆ. ಇದು ಈ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಗುಬ್ಬಿ ತಾಲೂಕಿನ ಜನತೆಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಸೋಮವಾರ ರಾತ್ರಿ ಕೆಲವು ಕಡೆ ಮಳೆಯಾಗಿದೆ. ಗುಬ್ಬಿ ತಾಲೂಕಿನ ತ್ಯಾಗಟೂರು, ಮುದ್ದಪುರ, ಎಂ.ಎನ್. ಕೋಟೆ , ಅಳಿಲುಘಟ್ಟ ,ಹೊಸಕೆರೆ ,ಚೇಳೂರು ,ನಿಟ್ಟೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ತಿಂಗಳಿನಿಂದ ಬಿಸಿಲಿಗೆ ತತ್ತರಿಸಿದ ಜನತೆಗೆ ಈಗ ಮಳೆ ಬಂದು ಕೊಂಚ ನೆಮ್ಮದಿ ತರಿಸಿದ್ದು, ಮೇವಿಲ್ಲದೇ ಕೊರಗುತ್ತಿದ್ದ ಜಾನುವಾರುಗಳಿಗೆ,ನೀರಿಲ್ಲದೇ ಒಣಗುತ್ತಿದ್ದ ರೈತರ ತೋಟಗಳಿಗೆ ಕೊನೆಗೂ ಮಳೆರಾಯ ಕೈ ಹಿಡಿದ್ದಿದಾನೆ. ರಾತ್ರಿ ಸುರಿದ ಭಾರೀ ಗಾಳಿ ಸಹಿತ ಮಳೆಗೆ ಮುಸ್ ಕೊಂಡ್ಲಿ ಗ್ರಾಮದ ರೈತ ವಸಂತ್ ಕುಮಾರ್ ಎಂಬುವವರ ತೋಟದಲ್ಲಿದ್ದ ಅಡಿಕೆ ಮರಗಳು ಹಾಗೂ ತೆಂಗಿನ ಮರಗಳು ರಾತ್ರಿ ಧರೆಗುರುಳಿವೆ. ಸುಮಾರು 30 ಅಡಿಕೆ ಮರ ಹಾಗೂ 10ತೆಂಗಿನ ಮರಗಳು ಧರೆಗುರುಳಿದ್ದು, ಸುಮಾರು 2ಲಕ್ಷ ನಷ್ಟ ಉಂಟಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ‌ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ವಸಂತ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.