ಹನೂರು ವ್ಯಾಪ್ತಿಯಲ್ಲಿ ತಂಪೆರದ ವರ್ಷದ ಮೊದಲ ಮಳೆ

| Published : May 08 2024, 01:02 AM IST

ಹನೂರು ವ್ಯಾಪ್ತಿಯಲ್ಲಿ ತಂಪೆರದ ವರ್ಷದ ಮೊದಲ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಮಿಂಚು, ಗುಡುಗು ಸಹಿತ ಸುರಿದ ಮಳೆಯಿಂದ ಸಣ್ಣಪುಟ್ಟ ಕೆರೆಕಟ್ಟೆಗಳು ತುಂಬಿದ್ದು ಹಳ್ಳ ಕಾಲುವೆಗಳು ಹರಿದಿದ್ದು, ಜನ ಜಾನುವಾರುಗಳು ನಿಟ್ಟಿಸಿರು ಬಿಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಮಿಂಚು, ಗುಡುಗು ಸಹಿತ ಸುರಿದ ಮಳೆಯಿಂದ ಸಣ್ಣಪುಟ್ಟ ಕೆರೆಕಟ್ಟೆಗಳು ತುಂಬಿದ್ದು ಹಳ್ಳ ಕಾಲುವೆಗಳು ಹರಿದಿದ್ದು, ಜನ ಜಾನುವಾರುಗಳು ನಿಟ್ಟಿಸಿರು ಬಿಡುವಂತಾಗಿದೆ.

ಮೂರು ತಿಂಗಳುಗಳಿಂದ ಮಳೆ ಇಲ್ಲದೆ ಬರಗಾಲದಿಂದ ತತ್ತರಿಸಿದ್ದ ಜನತೆ, ಜನ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಯಿಂದ ಹಾಗೂ ಜಾನುವಾರಗಳಿಗೆ ಮೇವಿಲ್ಲದೆ ಪರದಾಡುವಂತಹ ಸ್ಥಿತಿ ಉಂಟಾಗಿತ್ತು. ಹನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿ ಬಿದ್ದ ಮಳೆಯಿಂದ ತಂಪಾದ ವಾತಾವರಣ ಉಂಟಾಗಿದ್ದು ಅಲ್ಲದೇ ವರುಣನ ಕೃಪೆಯಿಂದ ಸ್ವಲ್ಪಮಟ್ಟಿಗೆ ಹನೂರು ವ್ಯಾಪ್ತಿಯ ಜನರು ಹಲವರು ಹರ್ಷ ಪಟ್ಟರೆ ಬೆಳೆ ಬೆಳೆದಿದ್ದ ರೈತರು ಮಳೆಯಿಂದ ಉಂಟಾದ ಹಾನಿಯಿಂದ ನಷ್ಠ ಅನುಭವಿಸುವಂತಾಗಿದೆ.

ತಡರಾತ್ರಿ ಸುರಿದ ಮಳೆಯಿಂದ ತಾಲೂಕಿನ ದಿನ್ನಳ್ಳಿ ಗ್ರಾಮದ ಗೋವಿಂದ ಬಿನ್ ಮಾದು ಶೆಟ್ಟಿ ಹಾಗೂ ಸಕ್ರು ನಾಯಕ ಎಂಬುವರಿಗೆ ಸೇರಿದ ಬಾಳೆ ತೋಟ ನೆಲ ಕಚ್ಚಿದೆ. ಚಿಕ್ಕಮಲಾಪುರ ಚಿಂಚಳ್ಳಿ, ಹನೂರು ಎಂಟಿ ದೊಡ್ಡಿ, ಕೆವಿಎನ್ ದೊಡ್ಡಿ, ಎಲ್ಲೇ ಮಾಳ ವಿವಿಧ ಗ್ರಾಮಗಳಲ್ಲಿ ಭಾರಿ ಬಿರುಗಾಳಿಗೆ ಮನೆಗಳು ಸೇರಿ, ಬಾಳೆ, ಮುಸುಕಿನ ಜೋಳ ಇನ್ನಿತರ ಫಸಲು ಸಂಪೂರ್ಣವಾಗಿ ಬಿರುಗಾಳಿಗೆ ಸಿಲುಕಿ ಹಾಳಾಗಿದೆ.

ತಾಲೂಕಿನಲ್ಲಿ ಭಾರಿ ಬಿರುಗಾಳಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತರ ಜಮೀನುಗಳಲ್ಲಿ ಬೆಳೆಯಲಾಗಿರುವ ಬಾಳೆ ಹಾಗೂ ಮುಸುಕಿನ ಜೋಳ, ಟಮೋಟೊ ಬೆಳೆಯನ್ನು ವೀಕ್ಷಣೆ ಮಾಡಿದ್ದಾರೆ. ತೋಟದ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣವಾಗಿ ಹಾಳಾಗುವುದರ ಜೊತೆಗೆ ಬಾರಿ ನಷ್ಟ ಉಂಟಾಗಿ ರೈತರು ಸಂಕಷ್ಟಕ್ಕೀಡಾಗಿರುವ ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಸಿಗುವ ಪರಿಹಾರವನ್ನು ಕೂಡಲೇ ರೈತರಿಗೆ ನೀಡಲು ಕ್ರಮ ಕೈಗೊಳ್ಳುವಂತೆ ರೈತ ಸಂಘಟನೆ ಅಗ್ರಹಿಸಿದೆ.