ಪುತ್ರ ಸುನೀಲ್‌ ಬೋಸ್‌ ಪರ ಅಪ್ಪ ಎಚ್‌.ಎಸ್‌.ಮಹದೇವಪ್ರಸಾದ್‌ ಬಿರುಸಿನ ಪ್ರಚಾರ

| Published : Apr 25 2024, 01:10 AM IST / Updated: Apr 25 2024, 01:11 AM IST

ಸಾರಾಂಶ

ಚಾಮರಾಜನಗರ ಮೀಸಲು ಲೋಕಸಭೆ ಅಭ್ಯರ್ಥಿ ಹಾಗೂ ಪುತ್ರ ಸುನೀಲ್‌ ಬೋಸ್‌ ಪರ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪಟ್ಟಣದಲ್ಲಿ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಜೊತೆಗೂಡಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಚಾಮರಾಜನಗರ ಮೀಸಲು ಲೋಕಸಭೆ ಅಭ್ಯರ್ಥಿ ಹಾಗೂ ಪುತ್ರ ಸುನೀಲ್‌ ಬೋಸ್‌ ಪರ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪಟ್ಟಣದಲ್ಲಿ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಜೊತೆಗೂಡಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

ಪಟ್ಟಣದ 1 ಮತ್ತು 2 ನೇ ವಾರ್ಡ್‌, ಅಂಬೇಡ್ಕರ್‌ ಸರ್ಕಲ್‌ ಹಾಗೂ ನಾಯಕರ ಬೀದಿಯಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಹಾಗು ಕಾರ್ಯಕರ್ತರ ಸಮ್ಮುಖದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ,ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗ್ಯಾರಂಟಿಗಳ ಕರ ಪತ್ರ ಮತದಾರರಿಗೆ ವಿತರಿಸಿ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಮತಯಾಚನೆ ನಡೆಸಿದರು.

ಕಾಂಗ್ರೆಸ್‌ಗೆ ಓಟು ಹಾಕು ತಾಯಿ:

ನಮ್ಮ ಸರ್ಕಾರ 5 ಗ್ಯಾರಂಟಿ ಕೊಟ್ಟಿದೆ, ಸುಳ್ಳು ಹೇಳುತ್ತಿಲ್ಲ,ನಿಮಗೆಲ್ಲ ತಲುಪಿದೆ ಕಾಂಗ್ರೆಸ್‌ಗೆ ಓಟು ಹಾಕಿ ತಾಯಿ ಎಂದು ಸಚಿವ ಮಹದೇವಪ್ಪ ಮತದಾರರಲ್ಲಿ ಮನವಿ ಮಾಡಿ,ಕಾಂಗ್ರೆಸ್‌ ನುಡಿದಂತೆ ನಡೆದಿದೆ ಮುಂದೆಯೂ ನಡೆಯುತ್ತದೆ ಎಂದರು.

ಈ ಸಮಯದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಟೌನ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಮಂಜುನಾಥ್‌, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಎನ್.ಕುಮಾರ್‌, ಮಧು, ಮಾಜಿ ಸದಸ್ಯ ಮಲ್ಲರಾಜು, ಪುರಸಭೆ ಮಾಜಿ ಉಪಾಧ್ಯಕ್ಷರಾದ ಎಸ್ಆರ್‌ಎಸ್‌ ರಾಜು, ಲಿಂಗರಾಜು, ಮಾಜಿ ಸದಸ್ಯ ಮೋಹನ್‌ ಕುಮಾರ್‌, ಲಿಂಗರಾಜು, ಮುಖಂಡರಾದ ವೆಂಕಟೇಶ್‌ ನಾಯಕ, ಕಬ್ಬಹಳ್ಳಿ ನಂಜುಂಡಸ್ವಾಮಿ, ವೀರನಪುರ ಚಂದ್ರಶೇಖರ್‌, ಚಿದಾನಂದ, ಕಾರ್ಗಳ್ಳಿ ಸುರೇಶ್‌, ಸೇರಿದಂತೆ ಪಟ್ಟಣದ ಕಾಂಗ್ರೆಸ್‌ ಕಾರ್ಯಕರ್ತರಿದ್ದರು.

2ಜಿಪಿಟಿ5

ಗುಂಡ್ಲುಪೇಟೆ ಅಂಬೇಡ್ಕರ್‌ ಸರ್ಕಲ್‌ ಬಳಿ ಸಚಿವ ಡಾ.ಎಚ್.ಸಿ.ಮಹದೇವಪ್ಪ,ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾಂಗ್ರೆಸ್‌ ಪರ ಮತಯಾಚನೆ ನಡೆಸಿದರು.

೧೦ ಕ್ಕೂ ಹೆಚ್ಚು ಮಂದಿ ವೀರಶೈವರು ಕಾಂಗ್ರೆಸ್‌ಗೆ

ಗುಂಡ್ಲುಪೇಟೆ: ತಾಲೂಕಿನ ಕಬ್ಬಳ್ಳಿ ಗ್ರಾಮದ 10 ಕ್ಕೂ ಹೆಚ್ಚು ಮಂದಿ ಬಿಜೆಪಿ ಹಾಗು ವೀರಶೈವ ಸಮಾಜದ ಮುಖಂಡರು ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸಮ್ಮುಖದಲ್ಲಿ ಕಬ್ಬಳ್ಳಿ ಗ್ರಾಮದ ಶಿವಪ್ಪ, ಮಲ್ಲಪ್ಪ, ಶೇಖರಪ್ಪ ಆಲಿಯಾಸ್‌ ಕರಿಯಪ್ಪ, ಮಲ್ಲು,ಮಲ್ಲೇಶ್‌,ಈಶ್ವರ್‌,ಮರಿಸ್ವಾಮಪ್ಪ, ನಾಗರಾಜಪ್ಪ, ಪ್ರಭು ಅವರನ್ನು ಕಾಂಗ್ರೆಸ್‌ ಪಕ್ಷದ ಶಲ್ಯ ಹಾಕಿ ಸ್ವಾಗತಿಸಿದರು. ಈ ಸಮಯದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌,ಕಬ್ಬಳ್ಳಿ ಪಿಎಸಿಸಿ ಬ್ಯಾಂಕ್‌ ಅಧ್ಯಕ್ಷ ಕಬ್ಬಳ್ಳಿ ದೀಪು,ಪುರಸಭೆ ಮಾಜಿ ಸದಸ್ಯ ವೀರನಪುರ ಚಂದ್ರಶೇಖರ್‌ ಹಾಗೂ ಮತ್ತಿತರರಿದ್ದರು.