ಎಸ್ಸೆಸ್ಸೆಲ್ಸಿ: ಚಿಕ್ಕೋಡಿ 25, ಬೆಳಗಾವಿ 29ನೇ ಸ್ಥಾನ

| Published : May 10 2024, 01:41 AM IST

ಎಸ್ಸೆಸ್ಸೆಲ್ಸಿ: ಚಿಕ್ಕೋಡಿ 25, ಬೆಳಗಾವಿ 29ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ.69.82 ರಷ್ಟು ಫಲಿತಾಂಶ ದಾಖಲಿಸಿ 25ನೇ ಸ್ಥಾನ ಗಳಿಸಿದೆ. ಅದರಂತೆ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ.64.93ರಷ್ಟು ಫಲಿತಾಂಶ ದಾಖಲಿಸಿ ರಾಜ್ಯಕ್ಕೆ 29ನೇ ಸ್ಥಾನ ಗಳಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ.69.82 ರಷ್ಟು ಫಲಿತಾಂಶ ದಾಖಲಿಸಿ 25ನೇ ಸ್ಥಾನ ಗಳಿಸಿದೆ. ಅದರಂತೆ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ.64.93ರಷ್ಟು ಫಲಿತಾಂಶ ದಾಖಲಿಸಿ ರಾಜ್ಯಕ್ಕೆ 29ನೇ ಸ್ಥಾನ ಗಳಿಸಿದೆ. ಆದರೆ,

ಕಳೆದ ಬಾರಿ 13ನೇ ಸ್ಥಾನದಲ್ಲಿದ್ದ ಚಿಕ್ಕೋಡಿ ಈ ಬಾರಿ 25ನೇ ಸ್ಥಾನಗಳಿಸುವ ಮೂಲಕ 12ಸ್ಥಾನಗಳನ್ನು ಕುಸಿತ ಕಂಡಿದೆ. ಅದರಂತೆ 26ನೇ ಸ್ಥಾನದಲ್ಲಿದ್ದ ಬೆಳಗಾವಿ 3 ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ 29ನೇ ಸ್ಥಾನಕ್ಕೆ ಕುಸಿತ ಕಂಡಿದೆ.ಬೆಳಗಾವಿ ಜಿಲ್ಲೆಯು ಎರಡು ಶೈಕ್ಷಣಿಕ ಜಿಲ್ಲೆಗಳನ್ನು ಒಳಗೊಂಡಿದೆ. ಈ ಪೈಕಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಫಲಿತಾಂಶ ಶೇ.66.49 ರಷ್ಟು ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 32,227 ಅಭ್ಯರ್ಥಿಗಳ ಪೈಕಿ 21,529 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 16,038 ಬಾಲಕರು ಪರೀಕ್ಷೆಗೆ ಹಾಜರಾಗಿ 8,833 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಬಾಲಕರು ಶೇ.55.08 ಫಲಿತಾಂಶ ಬಂದಿದೆ. ಅದರಂತೆ ಒಟ್ಟು 16,189 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 12,596 ವಿದ್ಯಾರ್ಥಿನಿಯರು ಪಾಸ್‌ ಆಗಿ ಶೇ.77.81 ರಷ್ಟು ಫಲಿತಾಂಶದ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಬಾಕ್ಸ್‌...

ತಾಲೂಕುವಾರು ಶೇಕಡಾವಾರು ಫಲಿತಾಂಶ

ಬೆಳಗಾವಿ ನಗರ-ಶೇ.79.47

ಖಾನಾಪುರ-ಶೇ.69.14

ಬೆಳಗಾವಿ ಗ್ರಾಮೀಣ-ಶೇ.67.68

ಬೈಲಹೊಂಗಲ-ಶೇ.60.98

ಸವದತ್ತಿ-ಶೇ.58.95

ಚನ್ನಮ್ಮನ ಕಿತ್ತೂರು-ಶೇ.57.80

ರಾಮದುರ್ಗ-ಶೇ.55.49