ಕಾಂಗ್ರೆಸ್‌ ಕೇವಲ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ: ಬಿ.ವೈ.ವಿಜಯೇಂದ್ರ

| Published : Apr 12 2024, 01:10 AM IST / Updated: Apr 12 2024, 12:21 PM IST

ಕಾಂಗ್ರೆಸ್‌ ಕೇವಲ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾಳಕೊಪ್ಪ ನಡೆದ ಬಿಜೆಪಿ ಸಮಾ ವೇಶಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಚಾಲನೆ ನೀಡಿ, ಕಾರ್ಯಕರ್ತರನ್ನು ಹುರಿದುಂಬಿಸಿದರು.

 ಶಿರಾಳಕೊಪ್ಪ :  ಕಳೆದ 9  ತಿಂಗಳಿಂದ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ 136 ಕ್ಷೇತ್ರಗಳಿಗೇ ಅಭಿವೃದ್ಧಿಗಾಗಿ ಯಾವುದೇ ಹಣಕಾಸು ಕೊಡಲಾಗಿಲ್ಲ, ಕೇವಲ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಕೇಳಿದರೂ ಮಾಡಲು ಆಗದಂತಹ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಿಕಾರಿಪುರ ತಾಲ್ಲೂಕ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆದರು.

ಪಟ್ಟಣದ ವಾಸವಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಮಾತನಾಡಿದ ಅವರು, ರೈತರ ಹೈನುಗಾರಿಕೆಯ ಹಾಲಿನ ಹಣವನ್ನು ಕೊಡಲು ಆಗದಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡ ಸರ್ಕಾರ ಕಾಂಗ್ರೆಸ್ ಸರ್ಕಾರ.ಕಳೆದ10 ವಷರ್ಗಳಲ್ಲಿ ಒಂದೇ ಒಂದು ದಿನ ವಿಶ್ರಾಂತಿ ಪಡೆಯದೇ ಕಲೆಸ ಮಾಡುತ್ತಿರುವ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ. ಮುಂಬರುವ 2047 ನೇ ಇಸವಿಗೆ ಭಾರತ ಪ್ರಪಂಚದಲ್ಲಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕೆಂಬ ಪರಿಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪನವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ ಸಂಸದ ರಾಘಣ್ಣನವರು ಯಡಿಯೂರಪ್ಪನವರಿಗಿಂತ ಹೆಚ್ಚು ಕೆಲಸ ಮಾಡುವ ಮುಖಾಂತರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಆದ್ದರಿಂದ ರಾಘಣ್ಣ ನವರಿಗೆ ಇಂದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅವರನ್ನು ಕ್ಷೇತ್ರದ ಜನ ಬೆಂಬಲಿಸುತ್ತಿದ್ದಾರೆ. ಜನ ಮತ್ತು ಕ್ಷೇತ್ರದ ಮತದಾರರ ಸಂಪರ್ಕ ಹೊಂದಿರುವ ರಾಘಣ್ಣ ನವರಿಗೆ ಕಳೆದ ಬಾರಿಗಿಂತ ಹೆಚ್ಚಿನ ಮತಕೊಡಿಸಿಕೊಡಲು ಪ್ರಯತ್ನ ಮಾಡಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ದೇಶದ ಭವಿಷ್ಯದ ಚುನಾವಣೆ ಇದಾಗಿದೆ ಎಂದು ಕೆಲಸ ಮಾಡಬೇಕಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮಧು ಬಂಗಾರಪ್ಪ ಹಾಗೂ ಈಶ್ವರಪ್ಪ ಏನೇ ಅಪಪ್ರಚಾರ ಮಾಡಿದರೂ ಕ್ಷೇತ್ರದ ಜನರಿಗೆ ಸಂಸದ ರಾಘವೇಂದ್ರ ಮಾಡಿದ ಕೆಲಸ ಕಾರ್ಯದ ಬಗ್ಗೆ ಮತದಾರರಿಗೆ ಗೊತ್ತಿದೆ ಮತದಾರರರು ಅವರಿಗೆ ಒಳ್ಳೆಯ ಪಾಠವನ್ನು ಕಲಿಸುತ್ತಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ.ರಾಜು ಮಾತನಾಡಿ, ಗೀತಾ ಏನೂ ಸಾಧನೆ ಮಾಡದೇ ಚುನಾವಣೆಯಲ್ಲಿ ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ಕ್ಷೇತ್ರದ ಒಂದು ಹಳ್ಳಿಯ ಹೇಸರನ್ನು ಹೇಳಲಿ ಅವರು ಹೇಳಿದಂತೆ ಕೇಳುವೆ. ಕಳೆದ ೫ ವಷರ್ಗಳಿಂದ ಏನೂ ಮಾಡದೇ ಅವರು ಎಲ್ಲಿ ಇದ್ದರು? ಎಂದು ಪ್ರಶ್ನಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಹಾಗೂ ಈಡಿಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮಂಜುನಾಥ ಮಾತನಾಡಿದರು.ವೇದಿಕೆ ಮೇಲೆ ತಾಲ್ಲೂಕ ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಗುರುಮೂರ್ತಿ, ಬಳಿಗಾರ್, ಅಗಡಿ ಅಶೋಕ, ಶಿರಾಳಕೊಪ್ಪ, ಚೆನ್ನವೀರಶೆಟ್ಟಿ , ಕೊಳಗಿ ರೇವಣಪ್ಪ, ಸಣ್ಣ ಹನುಮಂತಪ್ಪ, ಟಿ.ರಾಜು, ಟಿ.ರಾಜಶೇಖರ, ಪೂಜಾರ್, ನಿವೇದಿತಾ ರಾಜು, ಮಂಚಿ ಶಿವಣ್ಣ, ಡಾ.ಮುರಘರಾಜ್,ಹನುಮಂತಪ್ಪ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.