ರಕ್ತದಾನ ಶ್ರೇಷ್ಠ ದಾನವಾಗಿದೆ: ವಿ.ಜೆ.ರವಿರೆಡ್ಡಿ

| Published : Apr 28 2024, 01:15 AM IST

ರಕ್ತದಾನ ಶ್ರೇಷ್ಠ ದಾನವಾಗಿದೆ: ವಿ.ಜೆ.ರವಿರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನ್ಮರಣ ವೇಳೆ ಜೀವ ಉಳಿಸುವ ಪುಣ್ಯದ ಕೆಲಸ ರಕ್ತದಾನವಾಗಿದೆ. ಆರೋಗ್ಯ ಪೂರ್ಣ 18 ರಿಂದ 60 ವರ್ಷದೊಳಗಿನ ಸುಮಾರು 45 ಕೆ.ಜಿ.ತೂಕವುಳ್ಳ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನ ಮಾಡಬಹುದಾಗಿದೆ. ಇಂತಹ ಸತ್ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆಯಿಂದ ಆರೋಗ್ಯಪೂರ್ಣ, ಸಮೃದ್ಧ ಸಮಾಜ ನಿರ್ಮಿಸಬಹುದು.

ಮಂಡ್ಯ ಮಿಮ್ಸ್‌ ರಕ್ತನಿಧಿ ಸಂಸ್ಥೆಯಿಂದ ರಕ್ತದಾನ ಶಿಬಿರ

ಕಿಕ್ಕೇರಿ: ಎಲ್ಲಾ ದಾನಗಳಲ್ಲಿ ಶ್ರೇಷ್ಠದಾನವಾಗಿರುವ ರಕ್ತದಾನ ಮಾಡುವುದರಿಂದ ವ್ಯಕ್ತಿಯೊಬ್ಬ ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ. ರವಿರೆಡ್ಡಿ ತಿಳಿಸಿದರು.

ಸಮೀಪದ ಮಾಕವಳ್ಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಮಂಡ್ಯ ಮಿಮ್ಸ್‌ ರಕ್ತನಿಧಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಅವರು ಮಾತನಾಡಿದರು.ಜೀವನ್ಮರಣ ವೇಳೆ ಜೀವ ಉಳಿಸುವ ಪುಣ್ಯದ ಕೆಲಸ ರಕ್ತದಾನವಾಗಿದೆ. ಆರೋಗ್ಯ ಪೂರ್ಣ 18 ರಿಂದ 60 ವರ್ಷದೊಳಗಿನ ಸುಮಾರು 45 ಕೆ.ಜಿ.ತೂಕವುಳ್ಳ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನ ಮಾಡಬಹುದಾಗಿದೆ. ಇಂತಹ ಸತ್ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆಯಿಂದ ಆರೋಗ್ಯಪೂರ್ಣ, ಸಮೃದ್ಧ ಸಮಾಜ ನಿರ್ಮಿಸಬಹುದು ಎಂದರು. ರಕ್ತ ನೀಡಿದರೆ ರಕ್ತಹೀನತೆ ಕಾಡಲಿದೆ ಎಂಬ ಆತಂಕ ಬೇಡ. ಕೆಲವೇ ಗಂಟೆಗಳಲ್ಲಿ ರಕ್ತ ಶೇಖರಣೆಯಾಗಲಿದೆ. 3 ತಿಂಗಳಿಗೊಮ್ಮೆ ಪುರುಷರು, 6 ತಿಂಗಳಿಗೊಮ್ಮೆ ಮಹಿಳೆಯರು ಆತಂಕವಿಲ್ಲದೇ ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದರು.ರಕ್ತದಾನ ಮಾಡುವುದರಿಂದ ಹಲವು ಗಂಭೀರ ಕಾಯಿಲೆಗಳು ದೂರವಾಗಲಿವೆ. ರಕ್ತದಲ್ಲಿನ ಶೇಖರಣೆಯಾದ ಕಬ್ಬಿಣಾಂಶದಿಂದ ಬರುವ ರಕ್ತ ಕ್ಯಾನ್ಸರ್, ಹೃದ್ರೋಗದಂತಹ ಸಮಸ್ಯೆಗೆ ಪರಿಹಾರ ಸಿಗಲಿದೆ. ರಕ್ತದಾನ ಮಾಡುವುದರಿಂದ ಮಾನಸಿಕ ಆರೋಗ್ಯ, ಸಂತೋಷ ವೃದ್ಧಿಸಲಿದೆ ಎಂದು ಹೇಳಿದರು.ಶಿಬಿರದಲ್ಲಿ 56 ಮಂದಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಹಣ್ಣು- ಹಂಪಲು ವಿತರಿಸಲಾಯಿತು. ನರ್ಸಿಂಗ್ ಆಫೀಸರ್ ಮಹಮ್ಮದ್‌ ರಫೀ, ಡಾ.ಶ್ವೇತಾ, ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಬಾಬುರಾಜ್, ಪಿ.ಎಸ್. ಮೇಯನ್, ಅಶೋಕ್‌ಕುಮಾರ್, ನವೀನ್‌ ಉಪಸ್ಥಿತರಿದ್ದರು.