ರಾಜ್ಯಕ್ಕೆ ಬಿಜೆಪಿ ಕೊಟ್ಟಿದ್ದು ಬರೀ ಚೊಂಬಲ್ಲ, ಖಾಲಿ ಚೊಂಬು: ಸಿಎಂ

| Published : Apr 20 2024, 01:02 AM IST / Updated: Apr 20 2024, 12:02 PM IST

Siddaramaiah
ರಾಜ್ಯಕ್ಕೆ ಬಿಜೆಪಿ ಕೊಟ್ಟಿದ್ದು ಬರೀ ಚೊಂಬಲ್ಲ, ಖಾಲಿ ಚೊಂಬು: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಎಂಬ ಜಾಹೀರಾತನ್ನು ಕಾಂಗ್ರೆಸ್‌ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಚೊಂಬು ಜಾಹೀರಾತಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಎಂಬ ಜಾಹೀರಾತನ್ನು ಕಾಂಗ್ರೆಸ್‌ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಶುಕ್ರವಾರ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರು ರಾಜ್ಯದ ಜನರಿಗೆ ಕೊಟ್ಟಿರುವುದು ಬರೀ ಚೊಂಬಲ್ಲ, ಖಾಲಿ ಚೊಂಬು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿದ್ರಾ?. ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದ್ರು, ಮಾಡಿದ್ರಾ?. ರೈತರ ಆದಾಯವನ್ನು ದುಪ್ಪಟ್ಟು ಮಾಡ್ತೀವಿ ಎಂದ್ರು, ಮಾಡಿದ್ರಾ?. ಜನರಿಗೆ ಅಚ್ಛೇ ದಿನ್‌ ಬಂತಾ? ಎಂದು ಪ್ರಶ್ನಿಸಿದರು.

ಇದೇ ವೇಳೆ, ಸಕಲೇಶಪುರದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಜೆಪಿಯವರು ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿರುವುದು ಗ್ಯಾರಂಟಿ. ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿಲ್ಲ, ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಕೊಡ್ತೀವಿ ಎಂದ್ರು, ಕೊಟ್ಟಿಲ್ಲ. ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ, ಉಳಿಸಿಕೊಂಡಿಲ್ಲ, ಅದಕ್ಕೇ ಹೇಳಿದ್ದು, ಅವರು ಜನರಿಗೆ ಚೊಂಬು ಕೊಡ್ತಿದ್ದಾರೆ ಎಂದರು.

ಇದೇ ವೇಳೆ, ಚಿತ್ರದುರ್ಗದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಕರ್ನಾಟಕಕ್ಕೆ ಮೋದಿ ಸರ್ಕಾರ ಚೊಂಬು ನೀಡಿದೆ. ರಾಜ್ಯದ 27 ಮಂದಿ ಬಿಜೆಪಿ-ಜೆಡಿಎಸ್‌ ಸಂಸದರು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪ್ರಶ್ನಿಸದೆ ಚೊಂಬು ನೀಡಿದ್ದಾರೆ. ಮೋದಿಯದು ಚೊಂಬು ಮಾಡೆಲ್‌. ಹೀಗಾಗಿ, ಜನರು ಚೊಂಬು ಮಾಡೆಲ್‌ ಬೇಕೋ, ಕಾಂಗ್ರೆಸ್‌ನ ಅಭಿವೃದ್ಧಿ ಮಾಡೆಲ್‌ ಬೇಕೋ ಎಂಬುದನ್ನು ನಿರ್ಧರಿಸಲಿ ಎಂದರು.

 ಅಚ್ಛೇ ದಿನ್‌ ಬಂತಾ?

ಬಿಜೆಪಿಯವರು ರಾಜ್ಯದ ಜನರಿಗೆ ಕೊಟ್ಟಿರುವುದು ಬರೀ ಚೊಂಬಲ್ಲ, ಖಾಲಿ ಚೊಂಬು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿದ್ರಾ?. ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದ್ರು, ಮಾಡಿದ್ರಾ?. ರೈತರ ಆದಾಯವನ್ನು ದುಪ್ಪಟ್ಟು ಮಾಡ್ತೀವಿ ಎಂದ್ರು, ಮಾಡಿದ್ರಾ?. ಜನರಿಗೆ ಅಚ್ಛೇ ದಿನ್‌ ಬಂತಾ?.

- ಸಿದ್ದರಾಮಯ್ಯ, ಸಿಎಂ.ಕೊಟ್ಟ ಮಾತು ಉಳಿಸಿಕೊಂಡಿಲ್ಲಬಿಜೆಪಿಯವರು ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿರುವುದು ಗ್ಯಾರಂಟಿ. ಜನಸಾಮಾನ್ಯರ ಅಕೌಂಟ್‌ಗೆ 15 ಸಾವಿರ ಹಾಕ್ತೀವಿ ಎಂದ್ರು, ಹಾಕಿಲ್ಲ, ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಕೊಡ್ತೀವಿ ಎಂದ್ರು, ಕೊಟ್ಟಿಲ್ಲ. ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ, ಉಳಿಸಿಕೊಂಡಿಲ್ಲ, ಅದಕ್ಕೇ ಹೇಳಿದ್ದು, ಅವರು ಜನರಿಗೆ ಚೊಂಬು ಕೊಡ್ತಿದ್ದಾರೆ ಎಂದು.

ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ.

ಕಾಂಗ್ರೆಸ್‌ನ ಚೊಂಬು ಜಾಹೀರಾತಿಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ:ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಚೊಂಬು ಜಾಹೀರಾತಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಪಕ್ಷವೇ ಜನರಿಗೆ ಟೋಪಿ ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದರೆ, ರಾಜ್ಯದ ಕೋಟ್ಯಂತರ ಜನರಿಗೆ ಕಾಂಗ್ರೆಸ್ ಚೊಂಬು ಕೊಟ್ಟಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಪಕ್ಷಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಟೋಪಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜನರೇ ಕಾಂಗ್ರೆಸ್‌ನವರಿಗೆ ಚೊಂಬು ಕೊಟ್ಟಿದ್ದಾರೆ. ರಾಜ್ಯದ ಜನರ ಮರ್ಯಾದೆ ತೆಗೆಯುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಜನರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಅಶೋಕ್‌ ಮಾತನಾಡಿ, ಕಾಂಗ್ರೆಸ್ ಪಕ್ಷ 10 ಕೆ.ಜಿ. ಅಕ್ಕಿ ಎಂದು ಹೇಳಿ ಒಂದು ಕೆ.ಜಿ. ಕೂಡ ನೀಡಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿ ಕೊಲೆ, ಸುಲಿಗೆ ಅರಾಜಕತೆ ನಡೆಯುತ್ತಿದೆ. ಇವೆಲ್ಲದರಲ್ಲೂ ಜನರಿಗೆ ಚೊಂಬು ನೀಡಿದೆ ಎಂದು ತೀಕ್ಷ್ಣವಾಗಿ ಹೇಳಿದರು.ಕೃಷ್ಣೆಯ ಕಣ್ಣೀರು ಒರೆಸಲು 50 ಸಾವಿರ ಕೋಟಿ ರು. ಎಂದು 5 ರುಪಾಯಿ ನೀಡಿಲ್ಲ. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯಲ್ಲೂ ಹಗರಣ ಮಾಡಲಾಗಿದೆ. ಭೂಮಿ, ಆಕಾಶ, ಪತ್ರಿಕಾ ರಂಗದಲ್ಲೂ ಕಾಂಗ್ರೆಸ್‌ ಲೂಟಿ ಮಾಡಿದೆ. ಜನರಿಗೆ ಒಂದು ಚೊಂಬು ನೀರು ಕೂಡ ನೀಡಿಲ್ಲ. ಚೊಂಬು ತೆಗೆದುಕೊಂಡು ಕೇರಳಕ್ಕೆ ಹೋಗಲಿ ಎಂದು ಹರಿಹಾಯ್ದರು.ಕೋಟ್ಸ್‌ರಾಜ್ಯದಲ್ಲಿ ಅರಾಜಕತೆ

ಕಾಂಗ್ರೆಸ್ ಪಕ್ಷ 10 ಕೆ.ಜಿ. ಅಕ್ಕಿ ಎಂದು ಹೇಳಿ ಒಂದು ಕೆ.ಜಿ. ಕೂಡ ನೀಡಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿ ಕೊಲೆ, ಸುಲಿಗೆ ಅರಾಜಕತೆ ನಡೆಯುತ್ತಿದೆ. ಇವೆಲ್ಲದರಲ್ಲೂ ಜನರಿಗೆ ಚೊಂಬು ನೀಡಿದೆ.- ಆರ್‌.ಅಶೋಕ್‌, ಪ್ರತಿಪಕ್ಷ ನಾಯಕ