ಹೊಸ ಯುಗಕ್ಕೆ ತೆರೆದುಕೊಂಡ ನಮ್ಮ ದೇಶದ ಮೊದಲ ಗ್ರಾಮ

| Published : Apr 19 2024, 01:04 AM IST / Updated: Apr 19 2024, 06:04 AM IST

ಹೊಸ ಯುಗಕ್ಕೆ ತೆರೆದುಕೊಂಡ ನಮ್ಮ ದೇಶದ ಮೊದಲ ಗ್ರಾಮ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಮೊದಲ ಗ್ರಾಮ ಎಂದು ಕರೆಯಲ್ಪಡುವ ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿಟಿ ಜಿಲ್ಲೆಯ ಕೌರಿಕ್ ಮತ್ತು ಗಿಯು ಗ್ರಾಮಗಳಿಗೆ ಮೊದಲ ಬಾರಿಗೆ ಮೊಬೈಲ್ ಸಂಪರ್ಕ ಕಲ್ಪಿಸಲಾಗಿದೆ.

ಗಿಯು: ದೇಶದ ಮೊದಲ ಗ್ರಾಮ ಎಂದು ಕರೆಯಲ್ಪಡುವ ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿಟಿ ಜಿಲ್ಲೆಯ ಕೌರಿಕ್ ಮತ್ತು ಗಿಯು ಗ್ರಾಮಗಳಿಗೆ ಮೊದಲ ಬಾರಿಗೆ ಮೊಬೈಲ್ ಸಂಪರ್ಕ ಕಲ್ಪಿಸಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಗ್ರಾಮಸ್ಥರಿಗೆ ಮೊದಲ ಮೊಬೈಲ್‌ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

ಹಿಂದಿನಿಂದಲೂ ಇಲ್ಲಿನ ಜನರು ಮೊಬೈಲ್ ಸಂಪರ್ಕವಿಲ್ಲದೇ ಜೀವನ ನಡೆಸುತ್ತಿದ್ದರು. ಇದೀಗ ಈ ಹಳ್ಳಿಗೆ ದೊರೆತಿರುವ ಹೊಸ ಸೌಲಭ್ಯದಿಂದ ಹೊಸ ಯುಗಕ್ಕೆ ಈ ಗ್ರಾಮ ತೆರೆದುಕೊಳ್ಳಲಿದೆ. ಸಮುದ್ರ ಮಟ್ಟದಿಂದ 14,931 ಅಡಿ ಎತ್ತರದಲ್ಲಿರುವ ಈ ಪ್ರದೇಶಕ್ಕೆ ಇದೀಗ ದೂರಸಂಪರ್ಕ ಸೌಲಭ್ಯ ದೊರೆತಿದೆ.