ಮೋದಿಗೆ ಭೂತಾನ್‌ ಅತ್ಯುಚ್ಚ ನಾಗರಿಕ ಪುರಸ್ಕಾರ

| Published : Mar 23 2024, 01:06 AM IST / Updated: Mar 23 2024, 08:48 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ 2 ದಿನಗಳ ಭೂತಾನ್‌ ಪ್ರವಾಸ ಆರಂಭಿಸಿದ್ದಾರೆ. ಅವರಿಗೆ ಭೂತಾನ್‌ನ ಅತ್ಯುಚ್ಚ ನಾಗರಿಕ ಪುರಸ್ಕಾರವಾಗಿರುವ ‘ಆರ್ಡರ್‌ ಆಫ್‌ ದ ಡ್ರಕ್‌ ಗ್ಯಾಲ್ಪೋ’ ಅನ್ನು ಭೂತಾನ್‌ ಅರಸ ಜಿಗ್ಮೆ ಖೇಸರ್‌ ನಾಮ್‌ಗ್ಯೇಲ್‌ ವಾಂಗ್‌ಚುಕ್‌ ಅವರು ಪ್ರದಾನ ಮಾಡಿದ್ದಾರೆ.

ಪಿಟಿಐ ಥಿಂಪು

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ 2 ದಿನಗಳ ಭೂತಾನ್‌ ಪ್ರವಾಸ ಆರಂಭಿಸಿದ್ದಾರೆ. ಅವರಿಗೆ ಭೂತಾನ್‌ನ ಅತ್ಯುಚ್ಚ ನಾಗರಿಕ ಪುರಸ್ಕಾರವಾಗಿರುವ ‘ಆರ್ಡರ್‌ ಆಫ್‌ ದ ಡ್ರಕ್‌ ಗ್ಯಾಲ್ಪೋ’ ಅನ್ನು ಭೂತಾನ್‌ ಅರಸ ಜಿಗ್ಮೆ ಖೇಸರ್‌ ನಾಮ್‌ಗ್ಯೇಲ್‌ ವಾಂಗ್‌ಚುಕ್‌ ಅವರು ಪ್ರದಾನ ಮಾಡಿದ್ದಾರೆ. 

ವಿಶೇಷ ಎಂದರೆ, ಈ ಗೌರವ ಈವರೆಗೆ ಯಾವೊಬ್ಬ ವಿದೇಶಿ ನಾಯಕರಿಗೂ ಸಿಕ್ಕಿರಲಿಲ್ಲ.ಭಾರತ- ಭೂತಾನ್‌ ಬಾಂಧವ್ಯಕ್ಕೆ ಹಾಗೂ ಭೂತಾನ್‌ ದೇಶ ಮತ್ತು ಭಾರತೀಯರಿಗೆ ಅಸಾಧಾರಣ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಗಿದೆ ಎಂದು ಭೂತಾನ್‌ ಸರ್ಕಾರ ತಿಳಿಸಿದೆ.

ಭಾರತದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿ, ಪ್ರಚಾರದ ಕಾವು ತಾರಕಕ್ಕೇರುತ್ತಿರುವಾಗಲೇ ಭೂತಾನ್‌ ಪ್ರವಾಸ ಕೈಗೊಳ್ಳುವ ಮೂಲಕ ಮೂರನೇ ಬಾರಿಗೆ ಗೆದ್ದೇ ಗೆಲ್ಲುವ ವಿಶ್ವಾಸವನ್ನು ಮೋದಿ ಅವರು ವ್ಯಕ್ತಪಡಿಸಿದ್ದಾರೆ. 

ಮಾ.20, 21ರಂದು ಈ ಪ್ರವಾಸ ನಿಗದಿಯಾಗಿತ್ತಾದರೂ, ಪ್ರತಿಕೂಲ ಹವಾಮಾನದ ಕಾರಣಕ್ಕೆ ಒಂದು ದಿನ ವಿಳಂಬವಾಗಿ ಪ್ರವಾಸ ಆರಂಭವಾಗಿದೆ.

ಅರಸನ ಜತೆ ಭೇಟಿ- ಚರ್ಚೆ: ಮೋದಿ ಅವರಿಗೆ ಭೂತಾನ್‌ ವಿಮಾನ ನಿಲ್ದಾಣದಲ್ಲಿ ಕೆಂಪ ಹಾಸಿನ ಸ್ವಾಗತವನ್ನು ಕೋರಲಾಯಿತು. ಬಳಿಕ ಅವರು ಭೂತಾನ್ ಅರಸ ಜಿಗ್ಮೆ ಕೇಸರ್‌ ನಾಮ್‌ಗ್ಯೆಲ್‌ ವಾಂಗ್‌ಚುಕ್‌ ಅವರನ್ನು ಭೇಟಿ ಮಾಡಿದರು. 

ಈ ವೇಳೆ ಭಾರತ ಹಾಗೂ ಭೂತಾನ್‌ ನಡುವೆ ಸಹಭಾಗಿತ್ವದಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಗಳ ಬಗ್ಗೆ ಇಬ್ಬರೂ ಚರ್ಚಿಸಿದರು.

ವಿವಿಧ ಕಾರ್ಯಕ್ರಮಗಳ ಜತೆಗೆ ಭಾತದ ನೆರವಿನೊಂದಿಗೆ ಥಿಂಪುವಿನಲ್ಲಿ ನಿರ್ಮಿಸಲಾಗಿರುವ ಗ್ಯಾಲ್ಟ್‌ಸ್ಯುಯೆನ್‌ ಜೆಟ್ಸನ್‌ ಪೆಮಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮೋದಿ ಅವರು ತಮ್ಮ ಭೇಟಿ ವೇಳೆ ಉದ್ಘಾಟನೆ ಮಾಡಲಿದ್ದಾರೆ.

ಭಾರತ-ಭೂತಾನ್ ಜನರ ಸಂಬಂಧ ಅನನ್ಯಭೂತಾನ್ ದ್ವೀಪಕ್ಷಿಯ ಸಂಬಂಧದಿಂದ ಹಿಮಾಲಯ ರಾಷ್ಟ್ರದಲ್ಲಿ ಭಾರತ ಜನರ ಹೃದಯ ನೆಲೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಣ್ಣಿಸಿದರು.

ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ' ಗೌರವ ಪಡೆದು ಮಾತನಾಡಿದ ಅವರು, ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಈ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. 

ದೇಶದ ಯಶಸ್ವಿಯನ್ನು ಮತ್ತೊಬ್ಬರು ಮೆಚ್ಚಿ ಗೌರವಿಸುತ್ತಾರೆ. ಇದರಿಂದ ಭಾರತೀಯ ಮತ್ತು ಭೂತಾನ್ ಜನರು ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ. ಭೂತಾನ್‌ ಜನರಲ್ಲಿ ಭಾರತೀಯರ ಹೃದಯ ನೆಲೆಸಿದೆ ಎಂದು ಹೇಳಿದರು.