ವಾಣಿಜ್ಯ ಸಿಲಿಂಡರ್‌ ಬೆಲೆ 30 ರು., 5 ಕೆಜಿ ತೂಕದ ಮಿನಿ ಎಲ್ಪಿಜಿ 7 ರು. ಕಡಿತ

| Published : Apr 02 2024, 01:09 AM IST / Updated: Apr 02 2024, 05:06 AM IST

ಸಾರಾಂಶ

ಲೋಕಸಭಾ ಚುನಾವಣೆ ಆರಂಭವಾಗಿರುವ ನಡುವೆಯೇ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು 30 ರು.ನಷ್ಟು ಇಳಿಸಲಾಗಿದೆ.

ನವದೆಹಲಿ: ಲೋಕಸಭಾ ಚುನಾವಣೆ ಆರಂಭವಾಗಿರುವ ನಡುವೆಯೇ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು 30 ರು.ನಷ್ಟು ಇಳಿಸಲಾಗಿದೆ. 

ಇಳಿಕೆಯ ಬಳಿಕ ಬೆಂಗೂರಿನಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆ 1764.50 ರು.ಗೆ ತಲುಪಿದೆ. ಇದೇ ವೇಳೆ ಮಾರುಕಟ್ಟೆ ದರದಲ್ಲೇ ಮಾರಾಟ ಮಾಡುವ 5 ಕೆಜಿ ತೂಕದ ಸಣ್ಣ ಎಲ್‌ಪಿಜಿ ದರವನ್ನು 7.50 ರು.ನಷ್ಟು ಇಳಿಕೆ ಮಾಡಿ ತೈಲ ಕಂಪನಿಗಳು ನಿರ್ಧಾರ ಕೈಗೊಂಡಿವೆ.

 ಕಳೆದ ಜನವರಿ ಬಳಿಕ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಕಡಿತ ಆಗಿರುವುದು ಇದೇ ಮೊದಲು. ಹೊಸ ದರಗಳು ಏ.1ರಿಂದಲೇ ಜಾರಿಗೆ ಬಂದಿದೆ. ಆದರೆ 14.5 ಕೆಜಿ ತೂಕದ ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.