5 ತಿಂಗಳ ಪ್ರಾಯದಲ್ಲೇ ಇನ್ಫಿ ಮೂರ್ತಿ ಮೊಮ್ಮಗನ ಮೊದಲ ಸಂಪಾದನೆ: 4.2 ಕೋಟಿ ರು.!

| Published : Apr 20 2024, 01:40 AM IST / Updated: Apr 20 2024, 06:52 AM IST

5 ತಿಂಗಳ ಪ್ರಾಯದಲ್ಲೇ ಇನ್ಫಿ ಮೂರ್ತಿ ಮೊಮ್ಮಗನ ಮೊದಲ ಸಂಪಾದನೆ: 4.2 ಕೋಟಿ ರು.!
Share this Article
  • FB
  • TW
  • Linkdin
  • Email

ಸಾರಾಂಶ

ಡಿವಿಡೆಂಡ್‌ ರೂಪದಲ್ಲಿ ಭರ್ಜರಿ ಹಣ ಗಳಿಕೆ ಮಾಡುವ ಮೂಲಕ ನಾರಾಯಣಮೂರ್ತಿ ಮೊಮ್ಮಗ ಏಕಾಗ್ರಹ ವಿಶ್ವದ ಗಮನ ಸೆಳೆದಿದ್ದಾನೆ.

 ನವದೆಹಲಿ :  ಇನ್ಫೋಸಿಸ್‌ ಕಂಪನಿಯ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಮೊಮ್ಮಗ, ಐದು ತಿಂಗಳ ಪ್ರಾಯದ ಏಕಾಗ್ರಹ ರೋಹನ್‌ ಮೂರ್ತಿಗೆ ಡಿವಿಡೆಂಡ್‌ ಮೂಲಕವೇ 4.2 ಕೋಟಿ ರು. ಬಂದಿದ್ದು, ಇದು ಆ ಮಗುವಿನ ಮೊದಲ ಸಂಪಾದನೆಯಾಗಿದೆ!

ಏಕಾಗ್ರಹಗೆ ಇತ್ತೀಚೆಗೆ ನಾರಾಯಣಮೂರ್ತಿ ಅವರು ಇನ್ಫೋಸಿಸ್‌ ಕಂಪನಿಯ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಆ ಷೇರುಗಳ ಮೌಲ್ಯ 240 ಕೋಟಿ ರು. ಆಗಿತ್ತು. ತನ್ಮೂಲಕ ಏಕಾಗ್ರಹ ದೇಶದ ಅತ್ಯಂತ ಕಿರಿಯ ಕೋಟ್ಯಧೀಶ ವ್ಯಕ್ತಿ ಎನಿಸಿಕೊಂಡಿದ್ದ. 

ಇದೀಗ ಗುರುವಾರ ಇನ್ಫೋಸಿಸ್‌ ಕಂಪನಿಯು ಪ್ರತಿ ಷೇರಿಗೆ 28 ರು. ಲಾಭಾಂಶ ಘೋಷಣೆ ಮಾಡಿದೆ. ಇದರಿಂದ ಏಕಾಗ್ರಹಗೆ 4.2 ಕೋಟಿ ರು. ಬಂದಿದೆ. ನಾರಾಯಣಮೂರ್ತಿ ಅವರ ಮಗ ರೋಹನ್‌ ಮೂರ್ತಿ ಹಾಗೂ ಅಪರ್ಣ ಕೃಷ್ಣನ್‌ ದಂಪತಿಯ ಸುಪುತ್ರ ಏಕಾಗ್ರಹ ಆಗಿದ್ದಾನೆ.